• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, June 18, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನೀವು ಇಂಜಿನಿಯರಿಂಗ್‌ ಪದವಿಧರರೇ? : ಹಾಗಾದರೆ ನೀವೂ ಸರ್ಕಾರಿ ಶಿಕ್ಷಕರಾಗಬಹುದು : ಹೇಗೆ ಗೊತ್ತೇ?

Any Mind by Any Mind
October 28, 2021
in ಕರ್ನಾಟಕ
0
ನೀವು ಇಂಜಿನಿಯರಿಂಗ್‌ ಪದವಿಧರರೇ? : ಹಾಗಾದರೆ ನೀವೂ ಸರ್ಕಾರಿ ಶಿಕ್ಷಕರಾಗಬಹುದು : ಹೇಗೆ ಗೊತ್ತೇ?
Share on WhatsAppShare on FacebookShare on Telegram

ಎಂಜಿನಿಯರಿಂಗ್ ಪಧವೀದರರು ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡಲು ಅರ್ಹರು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ತಿದ್ದುಪಡಿ ಜಾರಿಗೊಳಿಸಲು ಮುಂದಾಗಿದೆ.

ADVERTISEMENT

ಹೀಗಾಗಿ, ಎಂಜಿನಿಯರಿಂಗ್ ಪದವಿಧರರು ಶಿಕ್ಷಕರ ಅರ್ಹತಾ ಪರೀಕ್ಷೆ (TET) ಬರೆಯಲು  ರಾಜ್ಯ ಸರ್ಕಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಕೇಡರ್ ಮತ್ತು ನೇಮಕಾತಿ (ಸಿ & ಆರ್) ನಿಯಮಗಳ ತಿದ್ದುಪಡಿ ತರಲು ಚಿಂತನೆ ನಡೆಸಿದೆ.

ಸರ್ಕಾರಿ ಶಾಲೆಗಳಲ್ಲಿ ನೇಮಕಗೊಳ್ಳಲು ಟಿಇಟಿಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯವಾಗಿರುವುದರಿಂದ, ಇಲಾಖೆಯ ಕ್ರಮ ಎಂಜಿನಿಯರಿಂಗ್ ಪದವೀಧರರಿಗೆ ಪ್ರಯೋಜನವಾಗಲಿದೆ.

ರಾಜ್ಯದಲ್ಲಿ ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ 20ಸಾವಿರ ಶಿಕ್ಷಕ ಹುದ್ದೆಗಳು ಖಾಲಿಯಿದ್ದು, ಎಂಜಿನಿಯರಿಂಗ್ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಯೋಚಿಸಿದೆ.

ಶಿಕ್ಷಣ ಇಲಾಖೆಯು ಎರಡು ವರ್ಷಗಳ ಹಿಂದೆ 10 ಸಾವಿರ ಶಿಕ್ಷಕರ ನೇಮಕಕ್ಕೆ ಚಾಲನೆ ನೀಡಿದಾಗ, ಕೇವಲ 3 ಸಾವಿರ ಶಿಕ್ಷಕರನ್ನು ಮಾತ್ರ ನೇಮಿಸಲಾಗಿತ್ತು. ಹಿಂದಿನ ನಿಯಮಗಳಲ್ಲಿ, ಇಂಜಿನಿಯರಿಂಗ್ ಪದವೀಧರರು ಟಿಇಟಿಗೆ ಹಾಜರಾಗಲು ಯಾವುದೇ ಅವಕಾಶವಿರಲಿಲ್ಲ, ಆದರೆ ಇದೀಗ ಆ ನಿಯಮವನ್ನು ತಿದ್ದುಪಡಿ ಮಾಡಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೋಧನೆಗೆ ಬಿಎಡ್ ಪದವಿ ಕಡ್ಡಾಯವಾಗಿದ್ದರೂ, ಎಂಜಿನಿಯರಿಂಗ್ ಪದವೀಧರರಿಗೆ ಈ ನಿಯಮದಿಂದ ವಿನಾಯಿತಿ ನೀಡುವುದು ಬಹುತೇಕ ಖಚಿತವಾಗಿದೆ. ಎಂಜಿನಿಯರಿಂಗ್ ಪದವೀಧರರಿಗೆ ಗಣಿತ ಮತ್ತು ವಿಜ್ಞಾನದಂತಹ ವಿಷಯಗಳು ಸುಲಭವಾಗಿರುವುದರಿಂದ ಈ ವರ್ಷದಿಂದ TET ತೇರ್ಗಡೆಯಾಗುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

TET ಅರ್ಹರ ಸಂಖ್ಯೆ ಇಳಿಕೆ

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ  2021 TET ಪರೀಕ್ಷೆಯು ವಿಳಂಬವಾಗಿದೆ. ಇದರಿಂದಾಗಿ, ಶಿಕ್ಷಣ ಇಲಾಖೆಯು 2022 ಕ್ಕೆ TET ಪರೀಕ್ಷೆಗಳನ್ನು ನಡೆಸಲು ಯೋಜಿಸಿದೆ. ಇತ್ತೀಚೆಗೆ  TET ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಅಂಕಿಅಂಶಗಳಲ್ಲಿ ತಿಳಿದುಬಂದಿದ್ದು, 2021ರ TET ಪರೀಕ್ಷಾ ಸಂದರ್ಭದಲ್ಲಿ, ಪತ್ರಿಕೆ 1 ಮತ್ತು ಪತ್ರಿಕೆ 2 ಎರಡಕ್ಕೂ ಹಾಜರಾಗುವ ಒಟ್ಟು ಅಭ್ಯರ್ಥಿಗಳ ಸಂಖ್ಯೆ 2,31,886 ಇದೆ.  ಈ ಪೈಕಿ 4,074 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದಾರೆ, ಅಂದರೆ ಶೇ. 19% ಮಂದಿ ಮಾತ್ರ ಟಿಇಟಿ ಪರೀಕ್ಷೆಯಲ್ಲಿ ಅರ್ಹರಾಗಿರುತ್ತಿದ್ದಾರೆ ಎಂಬ ಮಾಹಿತಿಯಿದೆ.

Tags: Basavaraj BommaiBJPCongress PartyCovid 19NAGESH BCteachersTETಕರೋನಾಕೋವಿಡ್-19ಬಸವರಾಜ್‌ಬೊಮ್ಮಾಯಿಬಿಜೆಪಿಬಿಸಿನಾಗೇಶ
Previous Post

ಕಡ್ಡಾಯ ಕನ್ನಡ ಕಲಿಕೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಸಂಘಪರಿವಾರ ಸಂಸ್ಥೆಯೇ? – ಇಲ್ಲಿದೇ ಸಂಪೂರ್ಣ ವರದಿ

Next Post

ಮುಂಬೈ ಡ್ರಗ್ಸ್ ಪ್ರಕರಣ : 25 ದಿನಗಳ ಬಳಿಕ ಆರ್ಯನ್ ಖಾನ್‌ಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

Related Posts

ಮತ್ತೆ ದಾಖಲೆ ಬರೆದ ಮಾದಪ್ಪನ ಹುಂಡಿ: 27 ದಿನದಲ್ಲಿ 2.73 ಕೋಟಿ ಕಾಣಿಕೆ ಸಂಗ್ರಹ
Top Story

ಮತ್ತೆ ದಾಖಲೆ ಬರೆದ ಮಾದಪ್ಪನ ಹುಂಡಿ: 27 ದಿನದಲ್ಲಿ 2.73 ಕೋಟಿ ಕಾಣಿಕೆ ಸಂಗ್ರಹ

by ಪ್ರತಿಧ್ವನಿ
June 18, 2026
0

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರ ಭಕ್ತಿ ಮತ್ತೊಮ್ಮೆ ದಾಖಲೆ ಬರೆದಿದ್ದು, ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಕೇವಲ 27...

Read moreDetails
ವಿಧಾನ ಪರಿಷತ್​ ಚುನಾವಣೆ ಮತದಾನ ಆರಂಭ: ಕಾಂಗ್ರೆಸ್- ಜೆಡಿಎಸ್ ನಡುವೆ ತೀವ್ರ ಪೈಪೋಟಿ

ವಿಧಾನ ಪರಿಷತ್​ ಚುನಾವಣೆ ಮತದಾನ ಆರಂಭ: ಕಾಂಗ್ರೆಸ್- ಜೆಡಿಎಸ್ ನಡುವೆ ತೀವ್ರ ಪೈಪೋಟಿ

June 18, 2026
ರೈತರ ವಿರೋಧದ ನಡುವೆಯೂ ನಿಗದಿತ ಜಾಗದಲ್ಲೇ ನಿಮ್ಹಾನ್ಸ್ ಆಸ್ಪತ್ರೆ: ಸಚಿವ ಶರಣ ಪ್ರಕಾಶ್ ಪಾಟೀಲ್

ರೈತರ ವಿರೋಧದ ನಡುವೆಯೂ ನಿಗದಿತ ಜಾಗದಲ್ಲೇ ನಿಮ್ಹಾನ್ಸ್ ಆಸ್ಪತ್ರೆ: ಸಚಿವ ಶರಣ ಪ್ರಕಾಶ್ ಪಾಟೀಲ್

June 18, 2026
ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಸಾವು: ವೈದ್ಯಕೀಯ ನಿರ್ಲಕ್ಷ್ಯ ಆರೋಪಕ್ಕೆ ಆಡಳಿತದ ಸ್ಪಷ್ಟನೆ ಇಲ್ಲಿದೆ‌

ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಸಾವು: ವೈದ್ಯಕೀಯ ನಿರ್ಲಕ್ಷ್ಯ ಆರೋಪಕ್ಕೆ ಆಡಳಿತದ ಸ್ಪಷ್ಟನೆ ಇಲ್ಲಿದೆ‌

June 18, 2026
ಮಾರಿಕೊಂಡ ಮಾಧ್ಯಮಗಳು ಎಂದ ಪ್ರಕಾಶ್ ರಾಜ್ ಹೇಳಿಕೆಗೆ ಅಮೀನ್ ದಿನೇಶ್ ಮಟ್ಟು ಪ್ರತಿಕ್ರಿಯೆ ಹೀಗಿದೆ

ಮಾರಿಕೊಂಡ ಮಾಧ್ಯಮಗಳು ಎಂದ ಪ್ರಕಾಶ್ ರಾಜ್ ಹೇಳಿಕೆಗೆ ಅಮೀನ್ ದಿನೇಶ್ ಮಟ್ಟು ಪ್ರತಿಕ್ರಿಯೆ ಹೀಗಿದೆ

June 18, 2026
Next Post
ಮುಂಬೈ ಡ್ರಗ್ಸ್ ಪ್ರಕರಣ : 25 ದಿನಗಳ ಬಳಿಕ ಆರ್ಯನ್ ಖಾನ್‌ಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

ಮುಂಬೈ ಡ್ರಗ್ಸ್ ಪ್ರಕರಣ : 25 ದಿನಗಳ ಬಳಿಕ ಆರ್ಯನ್ ಖಾನ್‌ಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!