• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

RSS ಕೇಂದ್ರ ಕಚೇರಿಯಿಂದಲೇ ‘ಹರ್ ಘರ್ ತಿರಂಗಾ’ ಆರಂಭಿಸಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲು

ಪ್ರತಿಧ್ವನಿ by ಪ್ರತಿಧ್ವನಿ
August 13, 2026
in Top Story, ಕರ್ನಾಟಕ, ರಾಜಕೀಯ
0
ವಿರೋಧ ಪಕ್ಷಗಳಿಗೆ ಮಾತಿನಲ್ಲೇ ಚಡಿ ಏಟು ಕೊಟ್ಟ ಪ್ರಿಯಾಂಕ್​ ಖರ್ಗೆ..
Share on WhatsAppShare on FacebookShare on Telegram

ಬೆಂಗಳೂರು: ‘ಹರ್ ಘರ್ ತಿರಂಗಾ’ ಅಭಿಯಾನವನ್ನು ದೇಶಾದ್ಯಂತ ನಡೆಸಲು ಮುಂದಾಗಿರುವ ಬಿಜೆಪಿಯು ಮೊದಲು ತನ್ನ ವೈಚಾರಿಕ ಮಾತೃಸಂಸ್ಥೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ನ ನಾಗಪುರದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿದ ಇತಿಹಾಸವನ್ನು ದೇಶದ ಜನತೆಗೆ ವಿವರಿಸಲಿ ಎಂದು ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ADVERTISEMENT
CM DK Shivakumar :ಆರ್.ಅಶೋಕ್-ಡಿಕೆಶಿ ಮಧ್ಯೆ ಜೋರಾದ ಜಗಳ #pratidhvani

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಸ್ವಾತಂತ್ರ್ಯಾನಂತರ ಐದು ದಶಕಗಳಿಗೂ ಹೆಚ್ಚು ಕಾಲ ಆರ್‌ಎಸ್‌ಎಸ್‌ನ ನಾಗಪುರದ ಕೇಂದ್ರ ಕಚೇರಿಯಲ್ಲಿ ಭಾರತೀಯ ತ್ರಿವರ್ಣ ಧ್ವಜ ಹಾರಿಸಲಿಲ್ಲ. 1947ರ ಆಗಸ್ಟ್ 15 ಹಾಗೂ 1950ರ ಜನವರಿ 26ರಂದು ತ್ರಿವರ್ಣ ಧ್ವಜ ಹಾರಿಸಲಾಗಿತ್ತು. ನಂತರ 52 ವರ್ಷಗಳ ಅಂತರದ ಬಳಿಕ 2002ರ ಜನವರಿ 26ರಂದು ಆರ್‌ಎಸ್‌ಎಸ್‌ನ ನಾಗಪುರದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಮತ್ತೆ ಹಾರಿಸಲಾಯಿತು ಎಂಬುದನ್ನು ಐತಿಹಾಸಿಕ ವರದಿಗಳು ದಾಖಲಿಸಿವೆ.

ಪ್ರತಿಯೊಬ್ಬ ಭಾರತೀಯನಿಗೂ ದೇಶಭಕ್ತಿಯ ಪಾಠ ಹೇಳುವ ಮೊದಲು ಬಿಜೆಪಿ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸಬೇಕು. ತನ್ನ ವೈಚಾರಿಕ ಮಾತೃಸಂಸ್ಥೆ ತ್ರಿವರ್ಣ ಧ್ವಜದ ಬದಲಿಗೆ ಭಗವಾ ಧ್ವಜಕ್ಕೆ ಏಕೆ ಆದ್ಯತೆ ನೀಡಿತು? ಸ್ವಾತಂತ್ರ್ಯಾನಂತರ ಇಷ್ಟು ದೀರ್ಘಕಾಲ ತನ್ನದೇ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಧ್ವಜ ಏಕೆ ಕಾಣಿಸಲಿಲ್ಲ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

CM DK Shivakumar :ಗೆಳೆಯನನ್ನು ನೆನೆದು ಭಾವುಕರಾದ ಸಿಎಂ ಡಿಕೆ ಶಿವಕುಮಾರ್. #pratidhvani

ರಾಷ್ಟ್ರಧ್ವಜವು ದೇಶದ ಸಾರ್ವಭೌಮತೆ, ಏಕತೆ ಮತ್ತು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಗಿದೆ. ಇಂತಹ ರಾಷ್ಟ್ರಧ್ವಜದ ಬಗ್ಗೆ ದೇಶಭಕ್ತಿಯ ಉಪದೇಶ ನೀಡುವವರು ತಮ್ಮದೇ ಸಂಘಟನೆಯ ಹಿಂದಿನ ನಿಲುವು ಮತ್ತು ಆಚರಣೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಪೂರ್ಣ ಸಮವಸ್ತ್ರದಲ್ಲಿ, ಕೈಯಲ್ಲಿ ಹೆಮ್ಮೆಯಿಂದ ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿದು ಸಾಗುವ ಸ್ವಯಂಸೇವಕರನ್ನು ಒಳಗೊಂಡ ಎಷ್ಟು ಆರ್‌ಎಸ್‌ಎಸ್ ಪಥಸಂಚಲನಗಳನ್ನು ನೀವು ನೋಡಿದ್ದೀರಿ? ಈ ಪ್ರಶ್ನೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಉತ್ತರಿಸಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.

CM DK Shivakumar :ಸದನದಲ್ಲಿ ಸಿದ್ದರಾಮಯ್ಯರನ್ನೇ ಮೀರಿಸಿದ ಡಿ.ಕೆ ಶಿವಕುಮಾರ್ #pratidhvani

ಆರ್‌ಎಸ್‌ಎಸ್‌ನ ರಾಷ್ಟ್ರಧ್ವಜ ಕುರಿತ ಹಿಂದಿನ ನಿಲುವು ಹಲವು ವರ್ಷಗಳಿಂದ ಸಾರ್ವಜನಿಕ ಮತ್ತು ರಾಜಕೀಯ ಚರ್ಚೆಯ ವಿಷಯವಾಗಿದೆ. 2002ರಲ್ಲಿ ನಾಗಪುರದ ಆರ್‌ಎಸ್‌ಎಸ್ ಕೇಂದ್ರ ಕಚೇರಿಯಲ್ಲಿ 52 ವರ್ಷಗಳ ಬಳಿಕ ತ್ರಿವರ್ಣ ಧ್ವಜ ಹಾರಿಸಿದ ಘಟನೆ ಆ ಕಾಲದಲ್ಲೇ ವ್ಯಾಪಕವಾಗಿ ವರದಿಯಾಗಿತ್ತು.

CM DK Shivakumar : ಅಧಿವೇಶನದ ಆರಂಭದಲ್ಲೇ ಬಿಜೆಪಿ ನಾಯಕರಿಗೆ ಕೈ ಮುಗಿದ ಸಿಎಂ ಡಿಕೆಶಿ... #pratidhvani

ದೇಶಭಕ್ತಿಯ ಪ್ರಮಾಣಪತ್ರಗಳನ್ನು ಇತರರಿಗೆ ನೀಡುವ ಮೊದಲು, ದೇಶದ ರಾಷ್ಟ್ರಧ್ವಜದ ಬಗ್ಗೆ ತಮ್ಮದೇ ಸಂಘಟನೆಯ ಇತಿಹಾಸವನ್ನು ಬಿಜೆಪಿ ಜನರಿಗೆ ಸ್ಪಷ್ಟಪಡಿಸಲಿ. ದೇಶಭಕ್ತಿ ಎನ್ನುವುದು ಕೇವಲ ಘೋಷಣೆ ಅಥವಾ ಪ್ರಚಾರದ ವಿಷಯವಲ್ಲ; ಅದು ರಾಷ್ಟ್ರದ ಸಂವಿಧಾನ ಮತ್ತು ರಾಷ್ಟ್ರಧ್ವಜ ಸೇರಿದಂತೆ ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳ ತೋರಿಸುವ ಗೌರವದಲ್ಲೂ ವ್ಯಕ್ತವಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಮೊದಲು ಆರ್‌ಎಸ್‌ಎಸ್ ಕೇಂದ್ರ ಕಚೇರಿಯಿಂದಲೇ ಹರ್ ಘರ್ ತಿರಂಗಾ ಅಭಿಯಾನ ಆರಂಭಿಸಿ; ನಂತರ ದೇಶದ ಜನರಿಗೆ ದೇಶಭಕ್ತಿಯ ಪಾಠ ಹೇಳಿ ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Tags: KarnatakaKarntaka PoliticsPoliticsPriyank KhargeRSS
Previous Post

ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

Next Post

ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

Related Posts

ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌
Top Story

ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

by ಪ್ರತಿಧ್ವನಿ
August 13, 2026
0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಿಸಿಹೆಚ್‌ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್‌ ಕರ್ನಾಟಕ...

Read moreDetails
ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

August 13, 2026
BREAKING NEWS : ಮನೆಯಿಂದಲೇ ವಾಟಾಳ್‌ ನಾಗರಾಜ್‌ ಪೊಲೀಸ್‌ ವಶಕ್ಕೆ ; ಕುತೂಹಲ ಮೂಡಿಸಿದ ಬಂದ್‌ ಭವಿಷ್ಯ..!

BREAKING NEWS : ಮನೆಯಿಂದಲೇ ವಾಟಾಳ್‌ ನಾಗರಾಜ್‌ ಪೊಲೀಸ್‌ ವಶಕ್ಕೆ ; ಕುತೂಹಲ ಮೂಡಿಸಿದ ಬಂದ್‌ ಭವಿಷ್ಯ..!

August 13, 2026
ಇಂದಿನಿಂದ ಮುಂಗಾರು ಅಧಿವೇಶನ: ಸದನದಲ್ಲಿ ಬಿಸಿ ಬಿಸಿ ಚರ್ಚೆ ವಿಷಯಗಳು ಇವು !

ಇಂದಿನಿಂದ ಮುಂಗಾರು ಅಧಿವೇಶನ: ಸದನದಲ್ಲಿ ಬಿಸಿ ಬಿಸಿ ಚರ್ಚೆ ವಿಷಯಗಳು ಇವು !

August 13, 2026
ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?

August 13, 2026
Next Post
ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada