• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, November 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?

ಪ್ರತಿಧ್ವನಿ by ಪ್ರತಿಧ್ವನಿ
August 13, 2026
in ಕರ್ನಾಟಕ
0
ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?
Share on WhatsAppShare on FacebookShare on Telegram

ಬೆಂಗಳೂರು: ಶಿವಗಂಗೆ ಬೆಟ್ಟಕ್ಕೆ ಏಕಾಂಗಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿರುವ ಟೆಕ್ಕಿ ಅದ್ವೈತ್ ಉಪಾಧ್ಯಾಯ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡಿವೆ. ಕಳೆದ ಹಲವು ದಿನಗಳಿಂದ ಬೆಟ್ಟದಲ್ಲಿ ನಿರಂತರ ಶೋಧ ಕಾರ್ಯಾಚರಣೆ ನಡೆಸಿದರೂ, ಅದ್ವೈತ್‌ ಅವರ ಬಗ್ಗೆ ಯಾವುದೇ ಖಚಿತ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿದ್ದಾರೆಯೇ ಎಂಬ ಎರಡು ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ADVERTISEMENT

ಅದ್ವೈತ್‌ ಕೊನೆಯದಾಗಿ ಶಿವಗಂಗೆ ಬೆಟ್ಟದಿಂದ ತಾವು ಮದುವೆಯಾಗಬೇಕಿದ್ದ ಯುವತಿಗೆ ಫೋಟೋ ಕಳುಹಿಸಿದ್ದರು ಎನ್ನಲಾಗಿದೆ. ಬಳಿಕ ಅವರ ಮೊಬೈಲ್‌ ಸಂಪರ್ಕ ಕಡಿತಗೊಂಡಿದ್ದು, ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ಬೆಟ್ಟದ ತಪ್ಪಲಿನಲ್ಲಿ ಅವರ ಮೋಟಾರ್‌ಸೈಕಲ್‌ ಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಅವರು ಬೆಟ್ಟ ಏರುತ್ತಿರುವುದು ಕಂಡುಬಂದಿದೆ.

Vatal Nagaraj : ಯಾರು ಏನೇ ಮಾಡಿದ್ರೂ ಬಂದ್ ಮಾಡೇ ಮಾಡ್ತೀವಿ #pratidhvani

ಪೊಲೀಸರ ತಂಡಗಳು ಕಳೆದ ಹಲವು ದಿನಗಳಿಂದ ಶಿವಗಂಗೆ ಬೆಟ್ಟದ ವಿವಿಧ ಪ್ರದೇಶಗಳಲ್ಲಿ ಶೋಧ ನಡೆಸುತ್ತಿವೆ. ಡ್ರೋನ್‌ಗಳ ಮೂಲಕವೂ ಪರಿಶೀಲನೆ ನಡೆಸಲಾಗಿದೆ. ಆದರೆ ಈವರೆಗೆ ಅದ್ವೈತ್‌ ಅವರ ಮೃತದೇಹ ಅಥವಾ ಆತ್ಮಹತ್ಯೆಗೆ ಸಂಬಂಧಿಸಿದ ಯಾವುದೇ ಪ್ರಮುಖ ಸಾಕ್ಷ್ಯ ಸಿಕ್ಕಿಲ್ಲ.ಡ್ರೋನ್‌ ದೃಶ್ಯದಲ್ಲಿ ದೇಹದಂತೆ ಕಾಣುವ ವಸ್ತುವೊಂದು ಕಂಡುಬಂದಿದೆ ಎನ್ನಲಾಗಿದ್ದರೂ, ಅದು ಅದ್ವೈತ್‌ ಅವರದ್ದೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಅದ್ವೈತ್‌ ಅವರ ಮನೆಯ ಲ್ಯಾಪ್‌ಟಾಪ್‌ ಪರಿಶೀಲನೆ ವೇಳೆ ಶಿವಗಂಗೆ ಬೆಟ್ಟ ಹಾಗೂ ಶಾಂತಲಾ ಡ್ರಾಪ್‌ಗೆ ಸಂಬಂಧಿಸಿದ ಮಾಹಿತಿಗಳನ್ನು ಹುಡುಕಿರುವುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ.ಅಲ್ಲದೆ, ChatGPTಯಲ್ಲಿ ಮಾಡಲಾಗಿದ್ದ ಕೆಲವು ಸರ್ಚ್‌ಗಳ ಹಿಸ್ಟರಿಯೂ ಪತ್ತೆಯಾಗಿದ್ದು, ಇದು ತನಿಖಾಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದೆ. ತಾಂತ್ರಿಕ ಪರಿಣತಿ ಹೊಂದಿರುವ ಅದ್ವೈತ್‌ ಉದ್ದೇಶಪೂರ್ವಕವಾಗಿ ಕೆಲವು ಸುಳಿವುಗಳನ್ನು ಬಿಟ್ಟು ಹೋಗುವಂತೆ ಯೋಜನೆ ರೂಪಿಸಿದ್ದಾರೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

Sudha Murty Speaks : ರಾಜ್ಯಸಭೆಯಲ್ಲಿ  ಸುಧಾ ಮೂರ್ತಿ   ಭಾಷಣಕ್ಕೆ ಎಲ್ಲರೂ ಫಿದಾ !! #pratidhvani

ಅದ್ವೈತ್‌ ಅವರ ವೈಯಕ್ತಿಕ ಹಿನ್ನೆಲೆ, ಸ್ನೇಹಿತರು ಹಾಗೂ ಸಂಬಂಧಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ನಾಪತ್ತೆಯಾಗುವ ಮುನ್ನ ಅವರ ವರ್ತನೆ, ಸಂಪರ್ಕದಲ್ಲಿದ್ದ ವ್ಯಕ್ತಿಗಳು ಹಾಗೂ ಇತ್ತೀಚಿನ ಚಟುವಟಿಕೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.ಐಐಟಿ ಪದವೀಧರ ಹಾಗೂ ಸೈಬರ್‌ ಸೆಕ್ಯುರಿಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅದ್ವೈತ್‌ ಜನವರಿಯಲ್ಲಿ ಮದುವೆಯಾಗಬೇಕಿತ್ತು ಎನ್ನಲಾಗಿದೆ. ಏಕಾಂಗಿ ಚಾರಣಕ್ಕೆ ತೆರಳಿದ್ದ ಅವರು ಬಳಿಕ ನಾಪತ್ತೆಯಾಗಿದ್ದಾರೆ.

ಸದ್ಯ ಪೊಲೀಸರು ಹಲವು ತಂಡಗಳನ್ನು ನಿಯೋಜಿಸಿ ಶಿವಗಂಗೆ ಬೆಟ್ಟದ ಸುತ್ತಮುತ್ತ ಶೋಧ ಮುಂದುವರಿಸಿದ್ದಾರೆ. ಅದ್ವೈತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ, ಅಪಘಾತಕ್ಕೀಡಾಗಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿದ್ದಾರೆಯೇ ಎಂಬುದಕ್ಕೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸುಳಿವು ದೊರೆತರೆ ಮುಂದಿನ ದಿನಗಳಲ್ಲಿ ತನಿಖೆಗೆ ಹೊಸ ತಿರುವು ಸಿಗುವ ಸಾಧ್ಯತೆಯಿದೆ.

 

Tags: Advait Missing CaseAdvait Upadhyayabengaluru crime newsbengaluru newsBreaking NewsCRIME NEWSCyber Security ExpertIIT Graduatekarnataka newsKarnataka Policelatest karnataka newsMissing Casemissing personpolice investigationShivagangeshivagange hillsShivagange MissingShivagange Police SearchShivagange TrekkingTechie MissingTrekking News
Previous Post

ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

Next Post

ಇಂದಿನಿಂದ ಮುಂಗಾರು ಅಧಿವೇಶನ: ಸದನದಲ್ಲಿ ಬಿಸಿ ಬಿಸಿ ಚರ್ಚೆ ವಿಷಯಗಳು ಇವು !

Related Posts

Why was ₹2,000 in drought relief credited to farmers' accounts? Here is the clarification from DCM Parameshwara
Top Story

ರೈತರ ಖಾತೆಗೆ ₹2,000 ಬರ ಪರಿಹಾರ ಬಂದಿದ್ದೇಕೆ? ಉಳಿದ ಹಣ ಯಾವಾಗ? ಇಲ್ಲಿದೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ!

by Shivakumar
November 10, 2026
0

ಬೆಂಗಳೂರು : ನಮ್ಮ ಸರ್ಕಾರ ರೈತರ ಪರವಾಗಿ ದೃಢವಾಗಿ ನಿಂತಿದೆ. ಬರಗಾಲದಿಂದಾಗಿ ರೈತ (Farmer) ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಈ ಸಂದರ್ಭದಲ್ಲಿ ಪರಿಹಾರ ಘೋಷಣೆ ಮಾಡುವುದಷ್ಟೇ...

Read moreDetails
Why do you feel nauseous when looking at your phone while traveling in a car? Here is the scientific reason

ಕಾರಿನಲ್ಲಿ ಪ್ರಯಾಣಿಸುವಾಗ ಫೋನ್ ನೋಡಿದರೆ ವಾಕರಿಕೆ ಬರುವುದು ಏಕೆ? ಇಲ್ಲಿದೆ ವೈಜ್ಞಾನಿಕ ಕಾರಣ

November 10, 2026
Comprehensive Aviation Policy to be Presented at Next Cabinet Meeting: Minister M.B. Patil

ಮುಂದಿನ ಸಂಪುಟ ಸಭೆಯಲ್ಲಿ ಸಮಗ್ರ ವಿಮಾನಯಾನ ನೀತಿ ಮಂಡನೆ: ಸಚಿವ ಎಂ.ಬಿ. ಪಾಟೀಲ

November 10, 2026
Another shock for KSRTC passengers: Luggage transport charges doubled, effective today

ಕೆಎಸ್ಆರ್‌ಟಿಸಿ ಪ್ರಯಾಣಿಕರಿಗೆ ಮತ್ತೊಂದು ಶಾಕ್: ಇಂದಿನಿಂದ ಲಗೇಜ್ ಸಾಗಣೆ ದರ ದುಪ್ಪಟ್ಟು ಹೆಚ್ಚಳ

November 10, 2026
Prices of cancer medicines to decrease across the country following a report by the state government: Minister U.T. Khader

ರಾಜ್ಯ ಸರ್ಕಾರದ ವರದಿಯ ಫಲದಿಂದ ದೇಶಾದ್ಯಂತ ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ : ಸಚಿವ ಯು.ಟಿ. ಖಾದರ್

November 10, 2026
Next Post
ಇಂದಿನಿಂದ ಮುಂಗಾರು ಅಧಿವೇಶನ: ಸದನದಲ್ಲಿ ಬಿಸಿ ಬಿಸಿ ಚರ್ಚೆ ವಿಷಯಗಳು ಇವು !

ಇಂದಿನಿಂದ ಮುಂಗಾರು ಅಧಿವೇಶನ: ಸದನದಲ್ಲಿ ಬಿಸಿ ಬಿಸಿ ಚರ್ಚೆ ವಿಷಯಗಳು ಇವು !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada