• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

BREAKING NEWS : ಮನೆಯಿಂದಲೇ ವಾಟಾಳ್‌ ನಾಗರಾಜ್‌ ಪೊಲೀಸ್‌ ವಶಕ್ಕೆ ; ಕುತೂಹಲ ಮೂಡಿಸಿದ ಬಂದ್‌ ಭವಿಷ್ಯ..!

ಹೋರಾಟಕ್ಕೂ ಹಿರಿಯ ನಾಯಕನನ್ನು ಡಾಲರ್ಸ್‌ ಕಾಲೋನಿ ನಿವಾಸದಿಂದ ವಶಕ್ಕೆ ಪಡೆದ ಖಾಕಿ..

ಪ್ರತಿಧ್ವನಿ by ಪ್ರತಿಧ್ವನಿ
August 13, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
BREAKING NEWS : ಮನೆಯಿಂದಲೇ ವಾಟಾಳ್‌ ನಾಗರಾಜ್‌ ಪೊಲೀಸ್‌ ವಶಕ್ಕೆ ; ಕುತೂಹಲ ಮೂಡಿಸಿದ ಬಂದ್‌ ಭವಿಷ್ಯ..!
Share on WhatsAppShare on FacebookShare on Telegram

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಮತ್ತು ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಆದರೆ ವಾಟಾಳ್‌ ಹೋರಾಟಕ್ಕೂ ಬರುವ ಮುನ್ನವೇ ಅವರನ್ನು ಮನೆಯಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.‌

ADVERTISEMENT
Taraanuradha On Darshan : Kannada ಸಿನಿರಂಗ ಸ್ಪರ್ಶಕ್ಕೆ 40 ವರುಷ..! ನೆನಪು ಬಿಚ್ಚಿಟ್ಟ ತಾರಾ..! #pratidhvani

ಆರಂಭದಲ್ಲೇ ಬಂದ್‌ಗೆ ಪೂರ್ಣ ಬೆಂಬಲ ಸಿಗದೆ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ. ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಸಂಘಟನೆಗಳು, ಕೆಲವು ರೈತ ಸಂಘಟನೆಗಳು ಬೆಂಬಲಿಸಿವೆ. ಮಂಡ್ಯ, ಹುಬ್ಬಳ್ಳಿ, ಧಾರವಾಡ, ರಾಯಚೂರು, ಬಳ್ಳಾರಿ ಮುಂತಾದ ಕೆಲವು ಜಿಲ್ಲೆಗಳಲ್ಲಿ ಬಲವಾದ ಬೆಂಬಲ ನಿರೀಕ್ಷಿಸಲಾಗಿದೆ. ಆದರೆ ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ಹಲವು ಆಟೋ-ಟ್ಯಾಕ್ಸಿ ಒಕ್ಕೂಟಗಳು, ಹೋಟೆಲ್ ಸಂಘಟನೆಗಳು ಮತ್ತು ಶಾಲಾ ನಿರ್ವಹಣಾ ಸಂಘಗಳು (KAMS) ಪೂರ್ಣ ಬೆಂಬಲ ನೀಡಿಲ್ಲ, ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿವೆ.

ಆದರೆ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಟೌನ್‌ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಹೋರಾಟ ಆರಂಭವಾಗುವ ರೂಪುರೇಷೆ ಹಾಕಿಕೊಳ್ಳಲಾಗಿತ್ತು. ವಾಟಾಳ್‌ ನಾಗರಾಜ್‌ ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿರುವ ಪರಿಣಾಮ ಬಂದ್‌ ಮೇಲೆ ಸಾಕಷ್ಟು ಬೀರುವ ಸಾಧ್ಯತೆಗಳಿವೆ. ವಾಟಾಳ್‌ ನಾಗರಾಜ್‌ ಬೀದಿಗೆ ಇಳಿದಿದ್ದರೆ ಹೋರಾಟ ಮತ್ತಷ್ಟು ಕಾವು ಪಡೆದುಕೊಳ್ಳುತ್ತಿತ್ತು. ಆದರೆ ಸದ್ಯ ಅವರನ್ನು ಬಂಧಿಸಿರುವ ಪೊಲೀಸರು ಬಂದ್‌ ಮೇಲೆ ಹೆಚ್ಚಿನ ನಿಗಾವಹಿಸಿದ್ದಾರೆ.

ಮೆಜೆಸ್ಟಿಕ್‌ಗೆ ತೆರಳಲು ಸಜ್ಜಾಗಿದ್ದ ವಾಟಾಳ್..

ಮೆಜೆಸ್ಟಿಕ್ ಗೆ ಪ್ರತಿಭಟನೆ ನಡೆಸಲು ತೆರಳಲು ಸಜ್ಜಾಗಿದ್ದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಅವರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದರು ಎನ್ನಲಾಗಿದೆ. ಬಾಯಿಗೆ ಟೇಪ್ ಅಂಟಿಸಿಕೊಂಡು ಮೌನವಾಗಿ ಪ್ರತಿಭಟನೆ ನಡೆಸಲು ವಾಟಾಳ್ ರೆಡಿಯಾಗಿದ್ದರು. ಸದಾಶಿವನಗರ ಠಾಣೆ ಪೊಲೀಸರು ವಾಟಾಳ್ ನಾಗರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ.

ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಪ್ರತಿಭಟನೆಗೆ ತೆರಳುತ್ತಿದ್ದ ವಾಟಾಳ್ ನಾಗರಾಜ್ ಅವರನ್ನು ಮನೆಯಿಂದ ಹೊರಬರುತ್ತಿದ್ದಂತೆಯೇ ವಶಕ್ಕೆ ಪಡೆದಿದ್ದಾರೆ. ವಾಟಾಳ್ ನಾಗರಾಜ್ ಅವರ ವಶಕ್ಕೆ ಪಡೆದಿರುವ ಕ್ರಮದ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳ ಮುಂದಿನ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

Previous Post

ಇಂದಿನಿಂದ ಮುಂಗಾರು ಅಧಿವೇಶನ: ಸದನದಲ್ಲಿ ಬಿಸಿ ಬಿಸಿ ಚರ್ಚೆ ವಿಷಯಗಳು ಇವು !

Next Post

ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

Related Posts

ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್
Top Story

ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

by ಪ್ರತಿಧ್ವನಿ
August 13, 2026
0

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ನಡೆಸಿದ ದಾಳಿ ವೇಳೆ ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ...

Read moreDetails
ಇಂದಿನಿಂದ ಮುಂಗಾರು ಅಧಿವೇಶನ: ಸದನದಲ್ಲಿ ಬಿಸಿ ಬಿಸಿ ಚರ್ಚೆ ವಿಷಯಗಳು ಇವು !

ಇಂದಿನಿಂದ ಮುಂಗಾರು ಅಧಿವೇಶನ: ಸದನದಲ್ಲಿ ಬಿಸಿ ಬಿಸಿ ಚರ್ಚೆ ವಿಷಯಗಳು ಇವು !

August 13, 2026
ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?

ಶಿವಗಂಗೆ ಬೆಟ್ಟದಲ್ಲಿ ನಾಪತ್ತೆಯಾದ ಟೆಕ್ಕಿ ಅದ್ವೈತ್‌ ಪ್ರಕರಣಕ್ಕೆ ಟ್ವಿಸ್ಟ್‌: ಆತ್ಮಹತ್ಯೆಯೇ, ಉದ್ದೇಶಪೂರ್ವಕ ನಾಪತ್ತೆಯೇ?

August 13, 2026
ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

ಆಗಸ್ಟ್ 15ರ ಸ್ವಾತಂತ್ರ್ಯ ಹಬ್ಬಕ್ಕೆ ಸಜ್ಜಾದ ಬೆಂಗಳೂರು: ಭದ್ರತೆಗೆ ಪ್ರಿಯಾಂಕ್ ಖರ್ಗೆ ಸೂಚನೆ

August 13, 2026
ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

ಶೋಷಣೆಯ ಪರ್ವ ಮತ್ತು ಶ್ರಮಿಕ ವರ್ಗಗಳ ಸಂಘರ್ಷ

August 13, 2026
Next Post
ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!