• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಜ್ಯದಲ್ಲಿ 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ..

ಒಟ್ಟು 3,395 ಹುದ್ದೆಗಳಲ್ಲಿ ಪುರುಷ ಅಭ್ಯರ್ಥಿಗಳಿಗೆ 2266, ಮಹಿಳಾ ಅಭ್ಯರ್ಥಿಗಳಿಗೆ 755 : ಪ್ರಿಯಾಂಕ್‌ ಖರ್ಗೆ ಮಾಹಿತಿ..

ಪ್ರತಿಧ್ವನಿ by ಪ್ರತಿಧ್ವನಿ
June 7, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ಸರ್ಕಾರಿ ಗೆಜೆಟ್
0
ರಾಜ್ಯದಲ್ಲಿ 3,395 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ..
Share on WhatsAppShare on FacebookShare on Telegram

ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮಿಕ್ಕುಳಿದ (ಉಳಿದ ಮೂಲ) ವೃಂದದಲ್ಲಿನ ವಿವಿಧ ಜಿಲ್ಲಾ, ನಗರ ಹಾಗೂ ಘಟಕಗಳಲ್ಲಿ ಖಾಲಿ ಇರುವ ಒಟ್ಟು 3,395 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ADVERTISEMENT
Satish Jarkiholi : ಹೊಸ ಮುಖ್ಯಮಂತ್ರಿ ಬಂದಿದ್ದಾರೆ ಏನ್ಮಾಡ್ತಾರೆ ನೊಡೋಣ..! #pratidhvani

ಈ ನೇಮಕಾತಿಯ ಪ್ರಮುಖ ಪ್ರಕ್ರಿಯೆಯಾದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ನಡೆಸಲಿದ್ದು, ಆಫ್‌ಲೈನ್-ಒಎಂಆರ್ (Offline-OMR) ಮಾದರಿಯಲ್ಲಿ ಪರೀಕ್ಷೆಗಳು ಜರುಗಲಿವೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟು 3,395 ಹುದ್ದೆಗಳಲ್ಲಿ ಪುರುಷ ಅಭ್ಯರ್ಥಿಗಳಿಗೆ 2266, ಮಹಿಳಾ ಅಭ್ಯರ್ಥಿಗಳಿಗೆ 755, ಸೇವಾನಿರತ ಪುರುಷರಿಗೆ 257, ಸೇವಾನಿರತ ಮಹಿಳೆಯರಿಗೆ 82 ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 35 ಹುದ್ದೆಗಳನ್ನು ಕಾಯ್ದಿರಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರೂಪಾಯಿ 37,500 ರಿಂದ 76,100 ರವರೆಗಿನ ವೇತನ ಶ್ರೇಣಿ ಅನ್ವಯವಾಗಲಿದ್ದು, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯ ದೊರೆಯಲಿದೆ ಎಂದು ಖರ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ : ನಕಲಿ ಹಿಂದೂತ್ವ, ದೇಶಪ್ರೇಮಿಗಳ ಆಟ ಇನ್ನು ರಾಜ್ಯದಲ್ಲಿ ನಡೆಯಲ್ಲ : ಬಿಜೆಪಿ ವಿರುದ್ಧ ಗುಡುಗಿದ ಹರಿಪ್ರಸಾದ್..

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಪಿ.ಯು.ಸಿ (PUC) ಅಥವಾ ಸಿ.ಬಿ.ಎಸ್.ಇ, ಐ.ಎಸ್.ಸಿ, ಎನ್.ಐ.ಓ.ಎಸ್ ಹಾಗೂ ಮೂರು ವರ್ಷಗಳ ಡಿಪ್ಲೊಮಾ ಸೇರಿದಂತೆ ಸರ್ಕಾರದ ನಿಯಮಾವಳಿಗಳನ್ವಯ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಜನ್ಮ ದಿನಾಂಕದ ಆಧಾರದ ಮೇಲೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು, ಸರ್ಕಾರವು ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಿದೆ ಎಂದು ವಿವರಿಸಿದ್ದಾರೆ.

ಇದರನ್ವಯ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 33 ವರ್ಷಗಳು, ಎಸ್‌ಸಿ/ಎಸ್‌ಟಿ (SC/ST) ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 35 ವರ್ಷಗಳು ಹಾಗೂ ಬುಡಕಟ್ಟು ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ನೇಮಕಾತಿಯು ಸಂಪೂರ್ಣವಾಗಿ ಪಾರದರ್ಶಕವಾಗಿರಲಿದೆ ಎಂದೂ ಸಚಿವರು ಹೇಳಿದ್ದಾರೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಜೂನ್ 08, 2026 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 03, 2026 ಕೊನೆಯ ದಿನಾಂಕವಾಗಿರುತ್ತದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ ಲಿಂಕ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿ ಹಾಗೂ ತಾಂತ್ರಿಕ ನೆರವಿಗಾಗಿ ಪ್ರಾಧಿಕಾರದ ಮಾಹಿತಿ ಕೇಂದ್ರದ ದೂರವಾಣಿ ಸಂಖ್ಯೆ: 080-23460460 ಅನ್ನು ಸಂಪರ್ಕಿಸಬಹುದು ಅಥವಾ ಅಧಿಕೃತ  ಟ್ವಿಟ್ಟರ್ (‘X’) ಖಾತೆ @KEA_KARNATAKA ವೀಕ್ಷಿಸಬಹುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ..

Tags: CM DK Shivakumarcongress karnatakahome ministerKarnataka Governmentkarnataka state police jobsPolice constable recruitmentPolice departmentPratidhvaniPriyank Kharge
Previous Post

ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಇಲ್ಲಿ ಮುಖ್ಯಮಂತ್ರಿ ಅಲ್ಲ, ನಿಮ್ಮ ಮನೆ ಮಗ : ಭಾವನಾತ್ಮಕವಾಗಿ ಕ್ಷೇತ್ರದ ಜನರಿಗೆ ಡಿಕೆ‌ ಶಿವಕುಮಾರ್ ಥ್ಯಾಂಕ್ಸ್..!

Next Post

“ಭಾರತ ಜನಬಂಧನ್’ ಸಂಯುಕ್ತ ಸಭೆ” : ಇಂಡಿಯಾ ಕೂಟದ ಹೈವೋಲ್ಟೇಜ್‌ ಮೀಟಿಂಗ್‌ ಮೇಲೆ ಎಲ್ಲರ ಕಣ್ಣು..!

Related Posts

ಜೈಲಿನಲ್ಲಿ ನಟ ದರ್ಶನ್‌ ಆರೋಗ್ಯ ಕ್ಷೀಣವೇ? ವೈರಲ್ ಫೋಟೋ ನೋಡಿ ಅಭಿಮಾನಿಗಳ ಆತಂಕ
Top Story

ಇನ್‌ಸ್ಟಾಗ್ರಾಮ್‌ ಬಳಕೆದಾರರಿಗೆ ಹೊಸ ಶಾಕ್; ವಿಶೇಷ ಫೀಚರ್‌ಗೆ ಹಣ ಪಾವತಿ ಕಡ್ಡಾಯ!

by ಪ್ರತಿಧ್ವನಿ
June 7, 2026
0

ಸಾಮಾಜಿಕ ಜಾಲತಾಣಗಳ ಲೋಕದಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ಇನ್‌ಸ್ಟಾಗ್ರಾಮ್‌ ಇದೀಗ ತನ್ನ ಬಳಕೆದಾರರಿಗೆ ಹೊಸ ಪ್ರೀಮಿಯಂ ಸೇವೆಯನ್ನು ಪರಿಚಯಿಸಿದೆ. ‘Instagram Plus’ ಹೆಸರಿನ ಈ ಚಂದಾದಾರಿಕೆ ಯೋಜನೆಯ...

Read moreDetails
ಜೈಲಿನಲ್ಲಿ ನಟ ದರ್ಶನ್‌ ಆರೋಗ್ಯ ಕ್ಷೀಣವೇ? ವೈರಲ್ ಫೋಟೋ ನೋಡಿ ಅಭಿಮಾನಿಗಳ ಆತಂಕ

ಜೈಲಿನಲ್ಲಿ ನಟ ದರ್ಶನ್‌ ಆರೋಗ್ಯ ಕ್ಷೀಣವೇ? ವೈರಲ್ ಫೋಟೋ ನೋಡಿ ಅಭಿಮಾನಿಗಳ ಆತಂಕ

June 7, 2026
ನಾನು ಈ ಕ್ಷೇತ್ರ ದಾಟಿದಾಗ ಮಾತ್ರ ಸಿಎಂ, ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ : ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್‌ ಭಾವುಕ ಮಾತು..!

ನಾನು ಈ ಕ್ಷೇತ್ರ ದಾಟಿದಾಗ ಮಾತ್ರ ಸಿಎಂ, ‌ಇಲ್ಲಿಗೆ ಬಂದಾಗ ನಿಮ್ಮ ಮನೆ ಸೇವಕ : ಕನಕಪುರ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್‌ ಭಾವುಕ ಮಾತು..!

June 7, 2026
“ಭಾರತ ಜನಬಂಧನ್’ ಸಂಯುಕ್ತ ಸಭೆ” : ಇಂಡಿಯಾ ಕೂಟದ ಹೈವೋಲ್ಟೇಜ್‌ ಮೀಟಿಂಗ್‌ ಮೇಲೆ ಎಲ್ಲರ ಕಣ್ಣು..!

“ಭಾರತ ಜನಬಂಧನ್’ ಸಂಯುಕ್ತ ಸಭೆ” : ಇಂಡಿಯಾ ಕೂಟದ ಹೈವೋಲ್ಟೇಜ್‌ ಮೀಟಿಂಗ್‌ ಮೇಲೆ ಎಲ್ಲರ ಕಣ್ಣು..!

June 7, 2026
ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಇಲ್ಲಿ ಮುಖ್ಯಮಂತ್ರಿ ಅಲ್ಲ, ನಿಮ್ಮ ಮನೆ ಮಗ : ಭಾವನಾತ್ಮಕವಾಗಿ ಕ್ಷೇತ್ರದ ಜನರಿಗೆ ಡಿಕೆ‌ ಶಿವಕುಮಾರ್ ಥ್ಯಾಂಕ್ಸ್..!

ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಇಲ್ಲಿ ಮುಖ್ಯಮಂತ್ರಿ ಅಲ್ಲ, ನಿಮ್ಮ ಮನೆ ಮಗ : ಭಾವನಾತ್ಮಕವಾಗಿ ಕ್ಷೇತ್ರದ ಜನರಿಗೆ ಡಿಕೆ‌ ಶಿವಕುಮಾರ್ ಥ್ಯಾಂಕ್ಸ್..!

June 7, 2026
Next Post
“ಭಾರತ ಜನಬಂಧನ್’ ಸಂಯುಕ್ತ ಸಭೆ” : ಇಂಡಿಯಾ ಕೂಟದ ಹೈವೋಲ್ಟೇಜ್‌ ಮೀಟಿಂಗ್‌ ಮೇಲೆ ಎಲ್ಲರ ಕಣ್ಣು..!

"ಭಾರತ ಜನಬಂಧನ್' ಸಂಯುಕ್ತ ಸಭೆ" : ಇಂಡಿಯಾ ಕೂಟದ ಹೈವೋಲ್ಟೇಜ್‌ ಮೀಟಿಂಗ್‌ ಮೇಲೆ ಎಲ್ಲರ ಕಣ್ಣು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!