• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಜೆಪಿಯ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೋಟಿಸ್..?

ಕೃಷ್ಣ ಮಣಿ by ಕೃಷ್ಣ ಮಣಿ
December 2, 2024
in Top Story, ಕರ್ನಾಟಕ, ದೇಶ, ರಾಜಕೀಯ
0
ಬಿಜೆಪಿಯ ರೆಬೆಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೋಟಿಸ್..?
Share on WhatsAppShare on FacebookShare on Telegram

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌‌ಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ ಎನ್ನಲಾಗ್ತಿದೆ. ತಮ್ಮ ನಡೆ ಹಾಗೂ ಪಕ್ಷದ ವಿರುದ್ಧ ನಿಲುವಿನ ಬಗ್ಗೆ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದಾರೆ ಎನ್ನಲಾಗಿದೆ. ವಿಜಯೇಂದ್ರ ಹೋಗಿ ದೂರು ಕೊಟ್ಟು ಬಂದ ಬೆನ್ನಲ್ಲೆ ಯತ್ನಾಳ್‌ಗೆ ನೋಟಿಸ್ ಕೊಡಲಾಗಿದೆ ಎನ್ನಲಾಗಿದ್ದು, ನೋಟಿಸ್ ನಂತರ ಯತ್ನಾಳ್ ವಿರುದ್ಧ ಕ್ರಮ ಆಗುತ್ತಾ..? ಅನ್ನೋ ನಿರೀಕ್ಷೆ ಹುಟ್ಟುಹಾಕಿದೆ. ಇದ್ರ ಬೆನ್ನಲ್ಲೇ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಬಸನಗೌಡ ಪಾಟೀಲ್‌ ಯತ್ನಾಳ್‌.

ADVERTISEMENT

ದೆಹಲಿಯ ಬಿಜೆಪಿ ನಾಯಕರು ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ ಯತ್ನಾಳ್‌ಗೆ ದೆಹಲಿಗೆ ಬರುವಂತೆ ಬುಲಾವ್ ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮೂಲಕ ದೆಹಲಿಗೆ ತೆರಳಿದ್ದಾರೆ ಯತ್ನಾಳ್. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ಒಳಗೆ ಹೋಗಿದ್ದಾರೆ ಯತ್ನಾಳ್. ಯತ್ನಾಳ್‌ ಜೊತೆಗೆ ಒಂದೇ ವಿಮಾನದಲ್ಲಿ ಸಂಸದರಾದ ಜಗದೀಶ್ ಶೆಟ್ಟರ್ ಹಾಗು ಗೋವಿಂದ ಕಾರಜೋಳ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಪ್ರಯಾಣ ಮಾಡಿದ್ದಾರೆ. ಬಿಎಸ್‌ ಯಡಿಯೂರಪ್ಪ ಹಾಗು ವಿಜಯೇಂದ್ರ ವಿರುದ್ಧ ಬಂಡಾಯ ಎದ್ದ ಹಿನ್ನೆಲೆಯಲ್ಲಿ ದೆಹಲಿಗೆ ಬರುವಂತೆ ಬಿಜೆಪಿ ಹಿರಿಯ ನಾಯಕರು ಆಹ್ವಾನ ಕೊಟ್ಟ ಬೆನ್ನಲ್ಲೇ ದೆಹಲಿಗೆ ತೆರಳಿದ್ದಾರೆ. ಆದರೆ ಮೂವರು ಸಂಸದರು ಸಂಸತ್‌ ಅಧಿವೇಶನಕ್ಕೆ ತೆರಳುತ್ತಿದ್ದೇವೆ ಎಂದಿದ್ದಾರೆ.

HC Mahadevappa: ಯತ್ನಾಳ್ ಈ ಬಗ್ಗೆ ಸಾಕ್ಷಿ ಕೊಟ್ಟರೆ ನಾವು ಅದನ್ನ ತನಿಖೆ ಮಾಡಿಸುತ್ತೇವೆ‌..! #yatnal #bjp #jds

ದೆಹಲಿಗೆ ತೆರಳುವ ಮುನ್ನ ಬೆಳಗಾವಿಯ ಹೋಟೆಲ್‌ನಲ್ಲಿ ರೆಬೆಲ್ಸ್ ಮೀಟಿಂಗ್ ಮಾಡಿದ್ದಾರೆ.. ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಯತ್ನಾಳ್ ಟೀಂ ಸಭೆ ನಡೆಸಿ ಸಮಾಲೋಚನೆ ಮಾಡಿತು. ಯತ್ನಾಳ್ & ಟೀಂ ದೆಹಲಿಗೆ ಹೋಗಲು ನಿರ್ಧಾರ ಮಾಡಿದ್ದರು. ಹೈಕಮಾಂಡ್ ನಾಯಕರ ಜೊತೆಗೆ ಸಮಾಲೋಚನೆ ನಡೆಸಲು ಯೋಜನೆ ರೂಪಿಸಿದ್ದರು. ಆದರೆ ಹೈಕಮಾಂಡ್‌ ನಾಯಕರು ಏಕಾಂಗಿಯಾಗಿ ಬರುವಂತೆ ತಿಳಿಸಿದ್ರಿಂದ ಬಸನಗೌಡ ಪಾಟೀಲ್‌ ಯತ್ನಾಳ್‌ ಏಕಾಂಗಿಯಾಗಿ ದೆಹಲಿಗೆ ತೆರಳಿದ್ದಾರೆ.

ದೆಹಲಿಗೆ ತೆರಳುವ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಟಾಂಗ್‌ ಕೊಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾವು B.S ಯಡಿಯೂರಪ್ಪ, ಅವರ ಕುಟುಂಬದ ಬಗ್ಗೆ ಮಾತನಾಡಿಲ್ಲ.. ಅವರ ಬಗ್ಗೆ ಮಾತನಾಡಲು ನಮಗೆ ಕೆಲಸ ಇಲ್ವಾ..? ನಾವು ಮಾತನಾಡೋದು ವಕ್ಫ್ ವಿರುದ್ಧ ಅಂತಾ ತಿರುಗೇಟು ಕೊಟ್ಟಿದ್ದಾರೆ. ಇನ್ನು ಕಳೆದ 15 ವರ್ಷಗಳಿಂದ ಉಚ್ಛಾಟನೆ ಮಾತು ಬರ್ತಿದೆ. ಯಾಕೆ ಉಚ್ಛಾಟನೆ ಆಗಿಲ್ಲ ಅಂದ್ರೆ, ನಮ್ಮ ಹೋರಾಟ ಸರಿಯಿದೆ ಅಂತಾ ಹೇಳಿದ್ರು. ಈ ನಡುವೆ ದೆಹಲಿಯಲ್ಲಿ ವಿಜಯೇಂದ್ರ ಕಂಪ್ಲೀಟ್‌ ಮಾಹಿತಿ ಕೊಟ್ಟು ಬಂದಿದ್ದು, ಹೈಕಮಾಂಡ್‌ ನಾಯಕರ ಭೇಟಿ ಬಳಿಕ ಯಾವ ಕ್ರಮ ಆಗುತ್ತೆ ಅನ್ನೋದನ್ನು ಕಾದು ನೋಡ್ಬೇಕು.

Tags: Basanagouda patil Yatnalbasanagouda patil yatnal on by vijayendrabasangouda yatnal vs vijayendraBJPBY Vijayendraby vijayendra vs yatnalCongress Partyvijayendravijayendra newsvijayendra vs yatnalYatnalyatnal on by vijayendrayatnal slams vijayendrayatnal slams yediyurappa vijayendrayatnal speechyatnal today newsyatnal vijayendrayatnal vs by vijayendrayatnal vs murugesh niraniyatnal vs siddaramaiahyatnal vs vijayendraಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸ್ವಾಭಿಮಾನಿ ಸಮಾವೇಶದ ಮೇಲೆ ಹಿಡಿತ ಸಾಧಿಸಲು ಮುಂದಾದ್ರಾ ಡಿಕೆಶಿ..?

Next Post

ಜೀಪ್ ಪಲ್ಟಿಯಾಗಿ ಯುವ ಐಪಿಎಸ್ ಅಧಿಕಾರಿ ದಾರುಣ ಸಾವು

Related Posts

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ
ಕರ್ನಾಟಕ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

by ಪ್ರತಿಧ್ವನಿ
May 15, 2026
0

ಬೆಂಗಳೂರು: ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್, ಜನಿವಾರ, ಶಿವಧಾರ ಸೇರಿದಂತೆ ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ತೀವ್ರ...

Read moreDetails
ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

ಕೇರಳದ ನೂತನ ಸಿಎಂ: ವೇಣುಗೋಪಾಲ್‌ಗೆ ನಿರಾಸೆ? ಫಸ್ಟ್ ರಿಯಾಕ್ಷನ್ ಏನು

May 15, 2026
64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

64ನೇ ವಸಂತಕ್ಕೆ ಡಿಕೆಶಿ; ಸಿಎಂ ಕುರ್ಚಿ ಕನಸು ಈಡೇರುತ್ತಾ ಎಂಬ ಕುತೂಹಲ

May 15, 2026
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

‘ಚಿನ್ನ ಖರೀದಿ ನಿಲ್ಲಿಸಿ’ ಮೋದಿ ಕರೆ: ಮಧ್ಯಮ ವರ್ಗಕ್ಕೆ ಸಂಕಷ್ಟ ಎಚ್ಚರಿಕೆ

May 14, 2026
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

May 14, 2026
Next Post

ಜೀಪ್ ಪಲ್ಟಿಯಾಗಿ ಯುವ ಐಪಿಎಸ್ ಅಧಿಕಾರಿ ದಾರುಣ ಸಾವು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada