ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸಿದ್ದರಾಮಯ್ಯ ಭೇಟಿಯಾದ ಬಳಿಕ ಸಿದ್ದರಾಮಯ್ಯ ಅವರು ರಾಷ್ಟ್ರೀಯ ರಾಜಕಾರಣಕ್ಕಾಗಿ ರಾಜಕಾರಣದಿಂದ ನಿರ್ಗಮಿಸುವ ಊಹಾಪೋಹಗಳು ಎದ್ದಿದ್ದವು.
ಆದಾಗ್ಯೂ, ಇದು ಕೇವಲ ಊಹಾಪೋಹ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದೀಗ ಮತ್ತೆ ರಾಷ್ಟ್ರೀಯ ರಾಜಕಾರಣದಲ್ಲಿ ಆಸಕ್ತಿಯಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ದಿ ಪ್ರಿಂಟ್ಗೆ ನೀಡಿದ ಸಂದರ್ಶದ ವೇಳೆ “ಅಂತಹ ಯಾವುದೇ ಪ್ರಸ್ತಾಪವಿಲ್ಲ ಅಥವಾ ರಾಷ್ಟ್ರೀಯ ರಾಜಕಾರಣದಲ್ಲಿ ನನಗೆ ಆಸಕ್ತಿಯಿಲ್ಲ. ನನ್ನ ರಾಜಕೀಯ ಜೀವನವು ಕರ್ನಾಟಕದಲ್ಲಿದೆ ಮತ್ತು ಅದು ಹಾಗೆಯೇ ಮುಂದುವರಿಯುತ್ತದೆ.” ಎಂದು ತಿಳಿಸಿದ್ದಾರೆ.
ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿ ಬಿಜೆಪಿ ಹೈಕಮಾಂಡ್ ಬಿಎಸ್ವೈ ರಾಜೀನಾಮೆ ಪಡೆದಿದೆ: ಸಿದ್ದರಾಮಯ್ಯ
ಮತ್ತೆ ಮುಖ್ಯಮಂತ್ರಿಯಾಗುವ ಆಸೆಯನ್ನು ನಿರಾಕರಿಸದ ಅವರು, “ಹೈಕಮಾಂಡ್ ಮುಖ್ಯಮಂತ್ರಿಯನ್ನು ನಿರ್ಧರಿಸುತ್ತದೆ ಆದರೆ, ಮೊದಲು, ನಾವು ಬಹುಮತದಿಂದ ಗೆಲ್ಲಬೇಕು. ನಂತರ ಶಾಸಕರು ಅವರ ಆಯ್ಕೆಯನ್ನು ನಿರ್ಧರಿಸಬೇಕು, ”ಎಂದು ಅವರು ಹೇಳಿದ್ದಾರೆ.
ಮೋದಿಯ ಜನಪ್ರಿಯತೆ ಕುಸಿದಿದೆ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಲಿದೆ – ಸಿದ್ದರಾಮಯ್ಯ