ಭಾನುವಾರ ಸಂಜೆ ಬೆಂಗಳೂರಿನ ಕೋರಮಂಗಲದ 17ನೇ ಎಸಿಎಂಎಂ ನ್ಯಾಯಾಲಯದ (ACMM Court) ನ್ಯಾಯಾಧೀಶರ ಮನೆಗೆ ರೇವಣ್ಣರನ್ನ (Revanna) ಹಾಜರು ಪಡಿಸಲಾಯ್ತು. ಎಸ್ಐಟಿ (SIT) ಪರ ವಕೀಲರು, ಹೆಚ್ಚಿನ ವಿಚಾರಣೆಗಾಗಿ ರೇವಣ್ಣ ಅವರನ್ನ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ರು. ಆರೋಪಿಯನ್ನ ಮೇ 8ರ ವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದ್ರು.
ಇದಕ್ಕೂ ಮುನ್ನ ರೇವಣ್ಣರನ್ನ ವೈದ್ಯಕೀಯ ತಪಾಸಣೆಗಾಗಿ (Medial checkup) ಬೌರಿಂಗ್ ಆಸ್ಪತ್ರೆಗೆ ಕರೆತರಲಾಗಿತ್ತು.ಈ ವೇಳೆ ಇಡೀ ಬೆಳವಣಿಗೆ ಬಗ್ಗೆ ರೇವಣ್ಣ ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.ಯಾವುದೇ ಪುರಾವೆ ಇಲ್ಲದೇ ದುರುದ್ದೇಶದಿಂದ ನನ್ನ ಮೇಲೆ ಕೇಸ್ ದಾಖಲಿಸಲಾಗಿದೆ. ಇದು ಸುಳ್ಳು ಪ್ರಕರಣ, ರಾಜಕೀಯ ಷಡ್ಯಂತ್ರ ಅಂತ ಆರೋಪಿಸಿದ್ರು. ಮುಂದೆ ಎಲ್ಲಾ ಸತ್ಯ ಹೊರಬರಲಿದೆ ಅಂತ ಕಿಡಿಕಾರಿದ್ರು..
ಸದ್ಯ 4 ದಿನಗಳ ಕಸ್ಟಡಿ ಪಡೆದ ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ಕೈಗೊಂಡಿದ್ದಾರೆ.11 ಗಂಟೆ ಬಳಿಕ ಹಾಸನ, ಕೆ.ಆರ್.ನಗರ, ಅಥವಾ ಹುಣಸೂರಿಗೆ ರೇವಣ್ಣರನ್ನ ಅಧಿಕಾರಿಗಳು ಕರೆದೊಯ್ಯುವ ಸಾಧ್ಯತೆ ಇದೆ. ಮಹಜರು ಪ್ರಕ್ರಿಯೆಗೆ ಕೆ.ಆರ್.ನಗರಕ್ಕೆ ಕರೆದೊಯ್ಯಬೇಕಾಗಿದೆ ಅಂತ ನ್ಯಾಯಾಧೀಶರೆದುರು ಎಸ್ಐಟಿ ಮನವಿ ಮಾಡಿತ್ತು.ಹೀಗಾಗಿ ಸಂತ್ರಸ್ತ ಮಹಿಳೆಯನ್ನು ಪಿಕ್ ಮಾಡಿದ ಸ್ಥಳ ಹಾಗೂ ಕೂಡಿಟ್ಟ ಸ್ಥಳದಲ್ಲಿ ಮಹಜರು ನಡೆಯೋ ಸಾಧ್ಯತೆ ಇದೆ.