ದಲಿತ ಎಂಬ ಕಾರಣಕ್ಕೆ ಶವ ಹೂಳಲು ಗ್ರಾಮಸ್ಥರು ಅಡ್ಡ ಪಡಿಸಿದ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಮಂಗಿಪಚ್ಚನಹುಂಡಿಯಲ್ಲಿ ನಡೆದಿದೆ.
2012 ರಲ್ಲಿ ಆದಿಜಾಂಭವ ಸಮುದಾಯಕ್ಕೆ 30 ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಸರ್ಕಾರ ಮಂಜೂರು ಮಾಡಿದೆ. ಆದರೆ, ಸರ್ಕಾರ ಮಂಜೂರು ಮಾಡಿದ್ದ ಜಾಗವನ್ನು ಪ್ರಭಾವಿಗಳು ಕಬಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಈ ಬೆನ್ನಲ್ಲೇ ಕೇಳಿಬಂದಿವೆ.

ಶವ ಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಪರಿಣಾಮ ಗ್ರಾಮದಲ್ಲಿ ಕೆಲ ಕಾಲ ಅಶಾಂತಿ ವಾತಾವರಣ ಸೃಷ್ಟಿಯಾಗಿತ್ತು. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೆ ಸಾಕಷ್ಟು ಭಾರೀ ದೂರು ನೀಡಿದರು ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಒಟ್ಟಾರೆ ಸ್ಮಶಾನ ಒತ್ತುವರಿಯಾಗುವ ಜಾಗಕ್ಕೆ ತಡೆಗೋಡೆ ನಿರ್ಮಾಣ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.