ನ್ಯೂಜಿಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಗ್ಲೆನ್ ಫಿಲಿಪ್ಸ್ ಸ್ಪೋಟಿಸಿದ ಆಕರ್ಷಕ ಶತಕದ ನೆರವಿನಿಂದಾಗಿ ಕಿವೀಸ್ ತಂಡವು ಶ್ರೀಲಂಕಾ ವಿರುದ್ದ 65 ರನ್‌ಗಳ ಜಯ ಸಾಧಿಸಿದೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಆರಂಭಿಕ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಗ್ಲೆನ್ ಫಿಲಿಪ್ಸ್(104ರನ್, 64 ಎಸೆತ, 10 ಬೌಂಡರಿ, 4 ಸಿಕ್ಸರ್) ಶತಕದ ಫಲವಾಗಿ 7 ವಿಕೆಟ್ ನಷ್ಟಕ್ಕೆ 167 ರನ್‌ಗಳಿಸಿದೆ.
ಗುರಿ ಬೆನ್ನಟ್ಟಿದ ಶ್ರೀಲಂಕಾವನ್ನ ಕಾಡಿದ ಕಿವೀಸ್ ಬೌಲರ್‌ಗಳು 102 ರನ್‌ಗಳಲ್ಲಿ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ವೇಗಿಗಳಾದ ಟ್ರೆಂಟ್ ಬೌಲ್ಟ್(4-0-13-4), ಲಾಕಿ ಫರ್ಗ್ಯೂಸನ್(4-0-35-1), ಮಿಚೆಲ್ ಸ್ಯಾಂಟ್ನರ್(4-0-21-2), ಟಿಮ್ ಸೌಥಿ(4-1-12-1) ಹಾಗೂ ಇಶ್ ಸೋಧಿ(3.2-0-21-2) ನಿಖರ ದಾಳಿಯಿಂದಾಗಿ 19.2 ಓವರ್‌ಗಳಲ್ಲಿ 102 ರನ್‌ಗಳಿಗೆ ಸರ್ವಪತನವಾಯಿತು.






