ನೆಚ್ಚಿನ ಗೆಳೆಯನಿಗಾಗಿ ಶಾಲೆಗೆ ರಜೆ ಹಾಕಿ ಮೂವರು ವಿದ್ಯಾರ್ಥಿನಿಯರು ವಿಷ ಕುಡಿದು ಇಬ್ಬರು ಮೃತಪಟ್ಟು ಓರ್ವಳ ಸ್ಥಿತಿ ಗಂಭಿರವಾಗಿರುವ ಘಟನೆ ಮಧ್ಯಪ್ರದೇಶದ ಸಿಹೋರ್ ಜಿಲ್ಲೆಯಲ್ಲಿ ನಡೆದಿದೆ.
ಮೂವರು ವಿದ್ಯಾರ್ಥಿನಿಯರು ಸಹಪಾಠಿಗಳಾಗಿದ್ದು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇದರಲ್ಲಿ ಓರ್ವ ವಿದ್ಯಾರ್ಥಿನಿಗೆ ಇಂದೋರ್ನಲ್ಲಿ ಸ್ನೇಹಿತನಿದ್ದು ಆತನನ್ನು ಭೇಟಿ ಮಾಡಲು ಶಾಲೆಗೆ ಚಕ್ಕರ್ ಹಾಕಿ ತೆರಳಿದ್ದರು. ಈ ವೇಳೆ ಆತನ ಬರುವಿಕೆಗಾಗಿ ಕಾದ ವಿಒದ್ಯಾರ್ಥಿನಿಯರು ಭವಾರ್ ಕೌನ್ ಪ್ರದೇಶದ ಉದ್ಯಾನವನದಲ್ಲಿ ಆತನಿಗೆ ಕಾದಿದ್ದಾರೆ.
ಸ್ನೇಹಿತ ಬಾರದೆ ಇದ್ದಾಗ ಮನನೊಂದ ವಿದ್ಯಾರ್ಥಿನಿಯೂ ವಿಷ ಸೇವಿಸಿದ್ದಾಳೆ ಇದನ್ನು ಕಂಡ ಮತ್ತೊಬ್ಬ ವಿದ್ಯಾರ್ಥಿನಿಯೂ ತಮ್ಮ ಮನೆಯಲ್ಲಿರುವ ಸಮಸ್ಯೆಗಳ ಗಂಭಿರವಾಗಿದೆ ಎಂದು ಹೇಳಿ ಕುಡಿದಿದ್ದಾಳೆ. ಇದನ್ನು ಕಂಡ ಮತ್ತೋರ್ವ ವಿದ್ಯಾರ್ಥಿನಿ ಸ್ನೇಹಿತೆಯರನ್ನು ಕಲೆದುಕೊಳ್ಳುತ್ತಿರುವ ದುಃಖದಲ್ಲಿ ವಿಷ ಕುಡಿದಿದ್ದಾಳೆ.

ಇದನ್ನು ಗಮನಿಸಿದ ಸ್ಥಳೀಯರು ಕೂಡಲ್ಲೇ ಹತ್ತಿರದ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯರನ್ನು ದಾಖಲಿಸಿದ್ದಾರೆ ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೊದಲು ವಿಷ ಕುಡಿದ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದು ಕೊನೆಯಲ್ಲಿ ವಿಷ ಕುಡಿದ ವಿದ್ಯಾರ್ಥನಿಯೂ ಬದುಕುಳಿದಿದ್ದು ತನಿಖೆ ವೇಳೆ ತಿಳಿದು ಬಂದಿದೆ.
ಸದ್ಯ ಪ್ರಕರಣವನ್ನ ದಾಖಲಿಸಿಕೊಂಡಿರುವ ಪೊಲೀಸರು ಯುವಕನನ್ನು ಪತ್ತೆ ಹಚ್ಚಲು ತಂಡಗಳನ್ನು ರಚಿಸಿದ್ದಾರೆ.






