• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, June 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕರ್ನಾಟಕ ರಾಜಕಾರಣದಲ್ಲಿ ಹೊಸ ಸಂಚಲನ; ನಟ ಚೇತನ್ ಪಕ್ಷ ಸ್ಥಾಪನೆ ಘೋಷಣೆ

ಪ್ರತಿಧ್ವನಿ by ಪ್ರತಿಧ್ವನಿ
June 22, 2026
in ಕರ್ನಾಟಕ
0
ಕರ್ನಾಟಕ ರಾಜಕಾರಣದಲ್ಲಿ ಹೊಸ ಸಂಚಲನ; ನಟ ಚೇತನ್ ಪಕ್ಷ ಸ್ಥಾಪನೆ ಘೋಷಣೆ
Share on WhatsAppShare on FacebookShare on Telegram

ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ದಲಿತ, ಬಹುಜನ ಹಾಗೂ ಪ್ರಗತಿಪರ ಸಂಘಟನೆಗಳನ್ನು ಒಗ್ಗೂಡಿಸಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿರುವ ಅವರು, 2027ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷಕ್ಕೆ ಅಧಿಕೃತ ಚಾಲನೆ ನೀಡುವುದಾಗಿ ತಿಳಿಸಿದ್ದಾರೆ.ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್, ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಘಟನೆ ನಿರ್ಮಿಸುವ ಗುರಿಯೊಂದಿಗೆ ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಆರಂಭಿಸಿರುವುದಾಗಿ ಹೇಳಿದರು.

ADVERTISEMENT

“ವಿವಿಧ ಸಮಾಜಪರ ಸಂಘಟನೆಗಳು, ದಲಿತ ಮತ್ತು ಬಹುಜನ ಪರ ಹೋರಾಟಗಾರರನ್ನು ಒಟ್ಟುಗೂಡಿಸಿ ಹೊಸ ರಾಜಕೀಯ ಶಕ್ತಿಯನ್ನು ಕಟ್ಟುತ್ತಿದ್ದೇವೆ. ಜನರಿಗೆ ಪರ್ಯಾಯ ರಾಜಕೀಯ ನೀಡುವ ಉದ್ದೇಶ ನಮ್ಮದು” ಎಂದು ಅವರು ಹೇಳಿದರು.

DK Shivakumar: 136 ಸೀಟುಗಳನ್ನು ಕೇವಲ ಸಿದ್ರಾಮಯ್ಯ, ಡಿಕೆ ಶಿವಕುಮಾರ್‌ ಗೆದ್ದಿಲ್ಲೆಂದ ಮುಖ್ಯಮಂತ್ರಿ #pratidhvani

 

2027ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ 25 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಬೃಹತ್ ಸಮಾವೇಶ ಆಯೋಜಿಸಲಾಗುವುದು. ಇದೇ ವೇದಿಕೆಯಲ್ಲಿ ಪಕ್ಷದ ಹೆಸರು, ಧ್ವಜ, ಚಿಹ್ನೆ, ಪ್ರಣಾಳಿಕೆ ಹಾಗೂ ರಾಜ್ಯ ಸಮಿತಿಯನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗುವುದು ಎಂದು ಚೇತನ್ ಮಾಹಿತಿ ನೀಡಿದರು.“ನಮ್ಮ ಪಕ್ಷದ ಹೆಸರಿನಲ್ಲಿ ಭಾರತೀಯ ಸಂವಿಧಾನದ ಆಶಯಗಳನ್ನು ಪ್ರತಿಬಿಂಬಿಸುವ ಪದಗಳು ಇರಲಿವೆ. ಪಕ್ಷದ ನೋಂದಣಿ ಪ್ರಕ್ರಿಯೆಯೂ ಈಗಾಗಲೇ ನಡೆಯುತ್ತಿದೆ” ಎಂದು ತಿಳಿಸಿದರು.

ತಮ್ಮ ಪಕ್ಷದ ಪ್ರಮುಖ ಆಶಯಗಳನ್ನು ವಿವರಿಸಿದ ಚೇತನ್, ಲಿಂಗ ಸಮಾನತೆ, ಜಾತಿ ಸಮಾನತೆ, ಆರ್ಥಿಕ ನ್ಯಾಯ, ಧರ್ಮನಿರಪೇಕ್ಷತೆ, ಭದ್ರತೆ, ಪರಿಸರ ಸಂರಕ್ಷಣೆ, ಭ್ರಷ್ಟಾಚಾರ ವಿರೋಧ, ಮಾಧ್ಯಮ ಸ್ವಾತಂತ್ರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಸೇರಿದಂತೆ ಹತ್ತು ಪ್ರಮುಖ ಗುರಿಗಳನ್ನು ಮುಂದಿಟ್ಟಿದ್ದಾರೆ.

ಇದರ ಜೊತೆಗೆ ಪೊಲೀಸ್ ಹಾಗೂ ಜೈಲು ವ್ಯವಸ್ಥೆಯಲ್ಲಿ ಸುಧಾರಣೆ, ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೂ ಆದ್ಯತೆ ನೀಡುವುದಾಗಿ ಹೇಳಿದರು.

DK Shivakumar : ಹರಿಪ್ರಸಾದ್ ಗೆ ಅಧಿಕಾರ ಹಸ್ತಾಂತರಿಸೋಕೆ ಓಡೋಡಿ ಬಂದ ಸಿಎಂ ಡಿಕೆಶಿ..! #bkhariprasad

ತಮ್ಮ ರಾಜಕೀಯ ಹೋರಾಟದ ಬಗ್ಗೆ ಮಾತನಾಡಿದ ಚೇತನ್, “ಮನುವಾದಿ ಚಿಂತನೆ ಮತ್ತು ಕಾಂಗ್ರೆಸ್ ರಾಜಕಾರಣದ ವಿರುದ್ಧ ನಾವು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ದೇಶದಲ್ಲಿರುವ ಅನೇಕ ಪಕ್ಷಗಳು ಸಾಮಾನ್ಯ ಜನರ ಆಶಯಗಳನ್ನು ಈಡೇರಿಸಲು ವಿಫಲವಾಗಿವೆ. ಸಮ ಸಮಾಜ ನಿರ್ಮಾಣಕ್ಕಾಗಿ ಪ್ರಬಲ ಪರ್ಯಾಯ ಧ್ವನಿಯನ್ನು ಕಟ್ಟುವ ಉದ್ದೇಶ ನಮ್ಮದು” ಎಂದು ಹೇಳಿದರು.

ಚೇತನ್ ಅವರ ಹೊಸ ರಾಜಕೀಯ ಪಕ್ಷದ ಘೋಷಣೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ದಲಿತ, ಬಹುಜನ ಮತ್ತು ಪ್ರಗತಿಪರ ಸಂಘಟನೆಗಳು ಅವರೊಂದಿಗೆ ಯಾವ ಮಟ್ಟಿಗೆ ಕೈಜೋಡಿಸುತ್ತವೆ ಎಂಬುದು ಕುತೂಹಲ ಮೂಡಿಸಿದೆ.

Tags: #2027Politics#BahujanMovement#DalitPolitics#KannadaNews#NewPoliticalParty#PoliticalEntry#PoliticalUpdate#trendingnewsACTORCHETANbreakingnewschetanahimsaHubballikarnatakanewskarnatakapoliticsStatePolitics
Previous Post

“ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು, ಕಾಂಗ್ರೆಸ್‌ ಸಿದ್ಧಾಂತಗಳ ಉಳಿವಿಗಾಗಿ ಹರಿಪ್ರಸಾದ್‌ ಆಯ್ಕೆ ಮಾಡಲಾಗಿದೆ”

Next Post

‘ನನ್ನ ಹೋರಾಟ ಸಿದ್ದರಾಮಯ್ಯ ವಿರುದ್ಧವಲ್ಲ, ರೈತರ ಭೂಮಿ ಉಳಿಸಲು’ : ಹೆಚ್‌ಡಿಕೆ ಸ್ಪಷ್ಟನೆ

Related Posts

“ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು, ಕಾಂಗ್ರೆಸ್‌ ಸಿದ್ಧಾಂತಗಳ ಉಳಿವಿಗಾಗಿ ಹರಿಪ್ರಸಾದ್‌ ಆಯ್ಕೆ ಮಾಡಲಾಗಿದೆ”
Top Story

“ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು, ಕಾಂಗ್ರೆಸ್‌ ಸಿದ್ಧಾಂತಗಳ ಉಳಿವಿಗಾಗಿ ಹರಿಪ್ರಸಾದ್‌ ಆಯ್ಕೆ ಮಾಡಲಾಗಿದೆ”

by ಪ್ರತಿಧ್ವನಿ
June 21, 2026
0

ಬೆಂಗಳೂರು : ವಿರೋಧ ಪಕ್ಷದವರು ನಮ್ಮನ್ನು ಟೀಕೆ ಮಾಡುತ್ತಿದ್ದರು. ನಮ್ಮಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎನ್ನುತ್ತಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆದಿಯಾಗಿ ಕರ್ನಾಟಕದ ವಿರೋಧ...

Read moreDetails
BREAKING NEWS : ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ : ಸ್ಥಳದಲ್ಲಿ ಆತಂಕದ ವಾತಾವರಣ..!

BREAKING NEWS : ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬೆಂಕಿ ಅವಘಡ : ಸ್ಥಳದಲ್ಲಿ ಆತಂಕದ ವಾತಾವರಣ..!

June 21, 2026
BREAKING NEWS : ನಟ ವಿನೋದ್‌ ಪ್ರಭಾಕರ್‌ ಆರೋಗ್ಯವಾಗಿದ್ದಾರೆ ಅಭಿಮಾನಿಗಳಲ್ಲಿ ಆತಂಕ ಬೇಡ..!

BREAKING NEWS : ನಟ ವಿನೋದ್‌ ಪ್ರಭಾಕರ್‌ ಆರೋಗ್ಯವಾಗಿದ್ದಾರೆ ಅಭಿಮಾನಿಗಳಲ್ಲಿ ಆತಂಕ ಬೇಡ..!

June 20, 2026
ʼಇದು ನಮ್ಮ ಐದಾರು ಜನರ ನಡುವಿನ ಗುಟ್ಟುʼ: ಸುಳಿವು ಬಿಟ್ಟುಕೊಟ್ಟ ಡಿ.ಕೆ ಶಿವಕುಮಾರ್

ಸಾರ್ವಜನಿಕರ ಕುಂದುಕೊರತೆ ನಿವಾರಣೆಗೆ ಪ್ರಜಾಸೇವೆ ಇಲಾಖೆ: ಸಿಎಂ ಡಿ.ಕೆ ಶಿವಕುಮಾರ್

June 20, 2026
ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಕುಮಾರಸ್ವಾಮಿ: ಸಿಎಂ ಡಿ.ಕೆ ಶಿವಕುಮಾರ್

ಬಿಡದಿ ಟೌನ್‌ಶಿಪ್ ಯೋಜನೆಯ ಪಿತಾಮಹ ಕುಮಾರಸ್ವಾಮಿ: ಸಿಎಂ ಡಿ.ಕೆ ಶಿವಕುಮಾರ್

June 20, 2026
Next Post
‘ನನ್ನ ಹೋರಾಟ ಸಿದ್ದರಾಮಯ್ಯ ವಿರುದ್ಧವಲ್ಲ, ರೈತರ ಭೂಮಿ ಉಳಿಸಲು’ : ಹೆಚ್‌ಡಿಕೆ ಸ್ಪಷ್ಟನೆ

'ನನ್ನ ಹೋರಾಟ ಸಿದ್ದರಾಮಯ್ಯ ವಿರುದ್ಧವಲ್ಲ, ರೈತರ ಭೂಮಿ ಉಳಿಸಲು' : ಹೆಚ್‌ಡಿಕೆ ಸ್ಪಷ್ಟನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada