ಕೆಲವೊಬ್ಬರಿಗೆ ಹೊಸ ಚಪ್ಪಲಿಗಳನ್ನ ಧರಿಸಿದಾಗ ಕಾಲಿನಲ್ಲಿ ಗುಳ್ಳೆಗಳು ಅಥವಾ ಗಾಯಗಳು ಆಗುತ್ತವೆ.. ಇದನ್ನು ಚಪ್ಪಲಿ ಕಡಿಯುವುದು ಅಂತ ಕೂಡ ಹೇಳ್ತಾರೆ.. ಕೆಲವು ಬಾರಿ ಹೀಗಾಗುವುದು ಫುಟ್ವಾರ್ಗಳ ಸೈಜ್ ಆಗದೆ ಇದ್ದಾಗ.. ಈ ರೀತಿ ಗಾಯಗಳಾದಾಗ ಇತರೆ ಚಪ್ಪಲಿ ಧರಿಸುವುದು ಸ್ವಲ್ಪ ಕಷ್ಟ ಆಗುತ್ತೆ, ಉರಿ ಹಾಗೂ ನೋವು ಕಾಣಿಸಿಕೊಳ್ಳುತ್ತದೆ. ಅದು ಕಡಿಮೆಯಾಗುವ ವರೆಗೂ ಒಂಥರಾ ಹಿಂಸೆ ಅಂತಾನೆ ಹೇಳಬಹುದು. ಹಾಗಿದ್ರೆ ಈ ಹೊಸ ಚಪ್ಪಲಿಗಳಿಂದ ಆಗುವಂಥ ಗಾಯಗಳನ್ನ ಹೇಗೆ ಕಡಿಮೆ ಮಾಡಿಕೊಳ್ಳುವಂತದ್ದು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.
ಅಲೋವೆರಾ
ಹೊಸ ಚಪ್ಪಲಿ ಧರಿಸಿದ ಗಾಯಗಳು ಅಥವಾ ಗುಳ್ಳೆಗಳಾದ ಜಾಗದಲ್ಲಿ ಅಲೋವೆರವನ್ನ ಹಚ್ಚಿ. ಅಲೋವೆರದಲ್ಲಿ ಆಂಟಿ ಇನ್ಫಾಮೇಟರಿ ಅಂಶಗಳು ಹೆಚ್ಚಿದ್ದು ಬೇಗನೆ ಗಾಯ ಗುಣವಾಗುತ್ತದೆ ಹಾಗೂ ಉರಿ ಹೆಚ್ಚಿರುವುದಿಲ್ಲ. ಮುಖ್ಯವಾಗಿ ಅಲೋವೆರವನ್ನ ಸಾಕಷ್ಟು ಸೌಂದರ್ಯವರ್ಧಕ ಮದ್ದುಗಳಲ್ಲಿ ಬಳಸಲಾಗುತ್ತದೆ ಹಾಗಾಗಿ ಚರ್ಮದ ಆರೋಗ್ಯಕ್ಕೆ ಅಲೋವೆರಾ ಬೆಸ್ಟ್.
ತೆಂಗಿನ ಎಣ್ಣೆ
ಗಾಯವಾದ ಜಾಗಕ್ಕೆ ತೆಂಗಿನ ಎಣ್ಣೆ ಲೇಪಿಸುವುದು ತುಂಬಾನೇ ಒಳ್ಳೆಯದು. ಇದರಿಂದ ಗಾಯ ಬೇಗನೆ ಒಣಗುತ್ತದೆ ಉರಿ ಅಥವಾ ನೋವನ್ನು ಕಡಿಮೆ ಮಾಡುತ್ತದೆ. ತೆಂಗಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯ ವಿರೋಧಿ ಅಂಶಗಳು ಹೆಚ್ಚಿರುತ್ತದೆ. ಹಾಗಾಗಿ ಗಾಯಗಳು ಬೇಗನೆ ಗುಣಮುಖವಾಗುತ್ತದೆ.
ಅರಿಶಿಣ
ಅರಿಶಿಣದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಇನ್ಫಾಮೇಟರಿ ಅಂಶಗಳೇದ್ದು ಗಾಯಗಳು ಬೇಗನೆ ವಾಸಿಯಾಗುತ್ತದೆ. ಚಪ್ಪಲಿಯಿಂದ ಆಗುವಂಥ ಗಾಯಗಳಲ್ಲಿ ನೀರು ಸೋರುಹಂತದ್ದು ಹೆಚ್ಚಿರುತ್ತದೆ ಇದನ್ನು ಕಡಿಮೆ ಮಾಡಲು ಅರಿಶಿಣ ಬೆಸ್ಟ್.