
ಕಲಬುರಗಿ:ಆಳಂದ ತಾಲ್ಲೂಕು ವ್ಯಾಪ್ತಿಯಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿರುವ ಘಟನೆ ಬೆಳಿಗ್ಗೆ ಬಂದಿದ್ದು, ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ವೇಳೆ ಕಲಹ ಉಂಟಾಗಿ ಫೈರಿಂಗ್ ಆಗಿರುವ ಘಟನೆ ಕಡಗಂಚಿ ಗ್ರಾಮದಲ್ಲಿ ನಡೆದಿದೆ.

ಕಡಗಂಚಿ ಗ್ರಾಮದ ಶಾಂತಪ್ಪ ಪೂಜಾರಿ (28) ಎಡಗೈಗೆ ಒಂದು ಗುಂಡು ತಾಗಿದೆ.ಗಾಯಗೊಂಡ ಶಾಂತಪ್ಪಗೆ ಕಲಬುರಗಿ ಆಸ್ಪತ್ರೆ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಶಾಂತಪ್ಪ ವಿರುದ್ಧ ದರೋಡೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬುಧವಾರ ತಡರಾತ್ರಿ ಕಡಗಂಚಿ ಗ್ರಾಮದ ಮನೆಯೊಂದರಲ್ಲಿ ಶ್ರೀಕಾಂತ್, ಮಾಳಪ್ಪ, ಸೇರಿದಂತೆ ಆರೇಳು ಜನ ಸೇರಿಕೊಂಡು ಪಾರ್ಟಿ ಮಾಡುತ್ತಿರುವಾಗ ಜಗಳ ವಿಕೋಪಕ್ಕೆ ಹೋಗಿ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಗನ್ ಸಹಿತ ಆರೋಪಿಗಳಾದ ಕಾಂತಪ್ಪ ಮತ್ತು ಮಾಳಪ್ಪ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.