• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತೆಗೆ ಹೊಸ ರೂಲ್ಸ್: ಈ ನಿಯಮ ಮೀರಿದ್ರೆ ಕಾನೂನು ಕ್ರಮ!

ಪ್ರತಿಧ್ವನಿ by ಪ್ರತಿಧ್ವನಿ
August 12, 2026
in Top Story
0
ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತೆಗೆ ಹೊಸ ರೂಲ್ಸ್: ಈ ನಿಯಮ ಮೀರಿದ್ರೆ ಕಾನೂನು ಕ್ರಮ!
Share on WhatsAppShare on FacebookShare on Telegram

ಬೆಂಗಳೂರು: ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು ಮತ್ತು ಡಾಬಾಗಳಲ್ಲಿ ನೈರ್ಮಲ್ಯದ ಕೊರತೆ ಹಾಗೂ ಕಳಪೆ ಗುಣಮಟ್ಟದ ಆಹಾರ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ 2011ರ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆಯ ಆಯುಕ್ತರು ಮಂಗಳವಾರ ಸುತ್ತೋಲೆ ಹೊರಡಿಸಿದ್ದಾರೆ.

ADVERTISEMENT

ಅವಧಿ ಮೀರಿದ ಆಹಾರ ಪದಾರ್ಥಗಳ ಬಳಕೆ ಅಥವಾ ಸಂಗ್ರಹಣೆ, ಕಳಪೆ ನೈರ್ಮಲ್ಯ, ಅಸುರಕ್ಷಿತ ನೀರಿನ ಬಳಕೆ ಸೇರಿದಂತೆ ಆಹಾರ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

K. Venkatesh : ನಮ್ಮ ಜಿಲ್ಲೆಗೆ ಯಾಕೆ ಹಿಂಗಾಯ್ತು ಅಂತ ನಮಗೂ ಚಿಂತೆ ಇದೆ.. #pratidhvani

 

ಹೋಟೆಲ್‌, ರೆಸ್ಟೊರೆಂಟ್‌ ಸೇರಿದಂತೆ ಆಹಾರ ಉದ್ಯಮಗಳು ತಮ್ಮ ಪರವಾನಗಿಯನ್ನು ಗ್ರಾಹಕರಿಗೆ ಕಾಣುವ ರೀತಿಯಲ್ಲಿ ಆವರಣದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ವ್ಯವಹಾರದ ಪ್ರಕ್ರಿಯೆ ಅಥವಾ ಚಟುವಟಿಕೆಗಳಲ್ಲಿ ಬದಲಾವಣೆ ಮಾಡಿದರೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

Tanveer Sait : ಜಿಲ್ಲೆಯ ಪ್ರಗತಿಗೆ ನಮ್ಮದೇ ಹೆಜ್ಜೆಗಳನ್ನು ಹಾಕ್ತೀವಿ.. #pratidhvani

ಆಹಾರ ತಯಾರಿಕಾ ಸ್ಥಳ ಸ್ವಚ್ಛ ಹಾಗೂ ಉತ್ತಮ ಗಾಳಿಯಾಡುವಂತಿರಬೇಕು. ಪಾತ್ರೆ, ಅಡುಗೆ ಉಪಕರಣ ಮತ್ತು ಕಚ್ಚಾ ಆಹಾರ ಪದಾರ್ಥಗಳನ್ನು ತೊಳೆಯಲು ಪ್ರತ್ಯೇಕ ಸಿಂಕ್‌ ವ್ಯವಸ್ಥೆ ಇರಬೇಕು. ಸ್ವಚ್ಛತೆಗೆ ಸುರಕ್ಷಿತ ಹಾಗೂ ಬಿಸಿ ನೀರನ್ನು ಬಳಸಬೇಕು.

ಕಚ್ಚಾ ಆಹಾರ ಪದಾರ್ಥಗಳನ್ನು ವಿಶ್ವಾಸಾರ್ಹ ಮೂಲದಿಂದ ಖರೀದಿಸಿ, ಸೂಕ್ತ ತಾಪಮಾನದಲ್ಲಿ ಸ್ವಚ್ಛ ಸ್ಥಳದಲ್ಲಿ ಸಂಗ್ರಹಿಸಬೇಕು. ಹಣ್ಣು ಮತ್ತು ತರಕಾರಿಗಳನ್ನು ಬಳಕೆಗೆ ಮುನ್ನ ಚೆನ್ನಾಗಿ ತೊಳೆಯಬೇಕು.

Krishna Byre Gowda : ನಮ್ಮ ರೇಟ್ ಗಿಂತ ತುಂಬಾ ಕಡಿಮೆ ಬೆಲೆಯಲ್ಲಿ ನೀವೇ ಕ್ಲೀನ್ ಮಾಡ್ಕೊಳ್ಳಿ. #pratidhvani

ಆಹಾರವನ್ನು ಸಮರ್ಪಕವಾಗಿ ಬೇಯಿಸಿ ತಯಾರಿಸಬೇಕು. ಸಸ್ಯಾಹಾರ ಮತ್ತು ಮಾಂಸಾಹಾರ ತಯಾರಿಕೆಯನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು. ಅಡುಗೆ ಎಣ್ಣೆಯ ಮರುಬಳಕೆಯನ್ನು ತಪ್ಪಿಸುವಂತೆ ಸೂಚಿಸಲಾಗಿದೆ.ತಣ್ಣನೆಯ ಆಹಾರವನ್ನು 5 ಡಿಗ್ರಿ ಸೆಲ್ಸಿಯಸ್‌ನಲ್ಲಿ, ಫ್ರೋಜನ್ ಆಹಾರವನ್ನು -18 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಹಾಗೂ ಬಿಸಿ ಆಹಾರವನ್ನು 60 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಇರಿಸಬೇಕು.ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರಕ್ಕೆ ಪ್ರತ್ಯೇಕ ಕತ್ತರಿಸುವ ಮಣೆ, ಚಾಕು ಹಾಗೂ ಪಾತ್ರೆಗಳನ್ನು ಬಳಸಬೇಕು. ತಯಾರಿಸಿದ ಆಹಾರವನ್ನು ಪ್ರತ್ಯೇಕ ಪಾತ್ರೆಗಳಲ್ಲಿ ಸಂಗ್ರಹಿಸಬೇಕು.

ಆಹಾರ ತಯಾರಿಸುವ ಸಿಬ್ಬಂದಿ ಸ್ವಚ್ಛ ಸಮವಸ್ತ್ರ, ತಲೆಗವಸು, ಮಾಸ್ಕ್ ಹಾಗೂ ಏಪ್ರನ್ ಧರಿಸಬೇಕು. ಉಗುರುಗಳನ್ನು ಚಿಕ್ಕದಾಗಿ ಹಾಗೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸಿಬ್ಬಂದಿಯ ಆರೋಗ್ಯ ದಾಖಲೆಗಳನ್ನು ಪ್ರತಿವರ್ಷ ನವೀಕರಿಸಬೇಕು.ಆಹಾರ ಸುರಕ್ಷತೆ ಮತ್ತು ನೈರ್ಮಲ್ಯವನ್ನು ಪ್ರತಿನಿತ್ಯ ಪರಿಶೀಲಿಸಲು ಮೇಲ್ವಿಚಾರಕರನ್ನು ನೇಮಿಸುವಂತೆ ಸೂಚಿಸಲಾಗಿದೆ.

ಅಡುಗೆ, ಪಾತ್ರೆ ತೊಳೆಯುವುದು ಹಾಗೂ ಸ್ವಚ್ಛತಾ ಕಾರ್ಯಗಳಿಗೆ ಕುಡಿಯಲು ಯೋಗ್ಯವಾದ ಸುರಕ್ಷಿತ ನೀರನ್ನೇ ಬಳಸಬೇಕು. ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ, ಅದರ ದಾಖಲೆಗಳನ್ನು ನಿರ್ವಹಿಸಬೇಕು.ಗ್ರಾಹಕರಿಗೆ ಉಚಿತ ಕುಡಿಯುವ ನೀರು ಒದಗಿಸಬೇಕು. ಬಿಸಿ ನೀರಿನ ವ್ಯವಸ್ಥೆ, ಕೈತೊಳೆಯಲು ನೀರು ಮತ್ತು ಸಾಬೂನು ಹಾಗೂ ಶೌಚಾಲಯದ ವ್ಯವಸ್ಥೆ ಇರಬೇಕು.

Krishna Byre Gowda : HBR ಲೇಔಟ್ ಥೀಮ್ ಪಾರ್ಕ್ ಮೆಚ್ಚಿದ ಸಚಿವ ಕೃಷ್ಣ ಭೈರೇಗೌಡ.. #pratidhvani

ಅಡುಗೆಮನೆ ಮತ್ತು ಆಹಾರ ದಾಸ್ತಾನು ಪ್ರದೇಶವನ್ನು ಸ್ವಚ್ಛವಾಗಿಡಬೇಕು. ನೊಣ, ಜಿರಳೆ, ಇಲಿ ಸೇರಿದಂತೆ ಕೀಟಗಳು ಪ್ರವೇಶಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಿಯಮಿತ ಕೀಟ ನಿಯಂತ್ರಣ ಕಾರ್ಯಗಳ ದಾಖಲೆಗಳನ್ನು ನಿರ್ವಹಿಸಬೇಕು. ಹೋಟೆಲ್‌, ರೆಸ್ಟೊರೆಂಟ್‌ ಹಾಗೂ ಡಾಬಾಗಳ ಗೋಡೆ, ನೆಲ ಮತ್ತು ಚಾವಣಿಯನ್ನು ಸ್ವಚ್ಛವಾಗಿಡಬೇಕು. ಉದುರುವ ಬಣ್ಣ, ಬಿರುಕುಗಳು ಹಾಗೂ ನೇತಾಡುವ ವಿದ್ಯುತ್ ತಂತಿಗಳು ಇರದಂತೆ ನೋಡಿಕೊಳ್ಳಬೇಕು.ಧೂಳು ಹಾಗೂ ಕೀಟಗಳ ಪ್ರವೇಶ ತಡೆಯಲು ಕಿಟಕಿ ಮತ್ತು ಬಾಗಿಲುಗಳಿಗೆ ಜಾಲರಿ ಪರದೆ ಅಳವಡಿಸಬೇಕು.

BY Vijayendra On Vinay Kulkarni ಬಡವರ ಮಕ್ಕಳಿಗೆ ಇಷ್ಟೊಂದು ಸ್ಪೀಡ್ ರೆಸ್ಪಾನ್ಸ್ ಇರಲ್ಲ..! |  Pratidhvani

ಕಚ್ಚಾ ಮಾಂಸ, ಮೀನು, ಸಮುದ್ರ ಆಹಾರ ಹಾಗೂ ತರಕಾರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಆಹಾರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಬೇಕು.ಅವಧಿ ಮೀರಿದ ಆಹಾರ, ಹಾಳಾದ ಹಣ್ಣು–ತರಕಾರಿ ಹಾಗೂ ಶಿಲೀಂಧ್ರ ಕಾಣಿಸಿಕೊಂಡ ಆಹಾರವನ್ನು ತಕ್ಷಣ ವಿಲೇವಾರಿ ಮಾಡಬೇಕು. ಆಹಾರ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ನಿಯಮಾನುಸಾರ ವಿಲೇವಾರಿ ಮಾಡಬೇಕು.ಅನುಮತಿಯಿಲ್ಲದ ಕೃತಕ ಬಣ್ಣಗಳು ಅಥವಾ ಅಸುರಕ್ಷಿತ ಪದಾರ್ಥಗಳನ್ನು ಆಹಾರ ತಯಾರಿಕೆಯಲ್ಲಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ಹೋಟೆಲ್‌ಗಳು ಮತ್ತು ಆಹಾರ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ.

Tags: bangalore newsFood AdulterationFood DepartmentFood HygieneFood QualityFood SafetyFood Safety ActFood Safety DepartmentFood Safety GuidelinesFood Safety RulesFSSAIHotel GuidelinesHotel InspectionHotel RulesHygiene RulesKarnataka Food Safetykarnataka newsRestaurant GuidelinesRestaurant InspectionRestaurant Rules
Previous Post

ಬಿಡದಿ ಟೌನ್‌ಶಿಪ್‌ ಜಟಾಪಟಿ: ಜೆಡಿಎಸ್ ಪಾದಯಾತ್ರೆಗೆ ಯೂತ್ ಕಾಂಗ್ರೆಸ್ ಸ್ಟಿಕರ್ ದಾಳಿ!

Next Post

ಶಿಕ್ಷ ಣ ಕೇಂದ್ರೀಕರಣ-ರಾಜ್ಯಗಳ ಮೇಲಿನ ಪರಿಣಾಮಗಳು

Related Posts

ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌
Top Story

ಪ್ರದೋಷ್‌ ಮಾಫಿ ಸಾಕ್ಷಿ ಪ್ರಕರಣ: ಹೈಕೋರ್ಟ್‌ ಮೆಟ್ಟಿಲೇರಿದ ದರ್ಶನ್‌

by ಪ್ರತಿಧ್ವನಿ
August 13, 2026
0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಿಸಿಹೆಚ್‌ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ನಟ ದರ್ಶನ್‌ ಕರ್ನಾಟಕ...

Read moreDetails
ವಿರೋಧ ಪಕ್ಷಗಳಿಗೆ ಮಾತಿನಲ್ಲೇ ಚಡಿ ಏಟು ಕೊಟ್ಟ ಪ್ರಿಯಾಂಕ್​ ಖರ್ಗೆ..

RSS ಕೇಂದ್ರ ಕಚೇರಿಯಿಂದಲೇ ‘ಹರ್ ಘರ್ ತಿರಂಗಾ’ ಆರಂಭಿಸಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲು

August 13, 2026
ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

ಮೊಬೈಲ್ ಪತ್ತೆ ಕೇಸ್: ಪ್ರಜ್ವಲ್ ರೇವಣ್ಣ VIP ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಶಿಫ್ಟ್

August 13, 2026
BREAKING NEWS : ಮನೆಯಿಂದಲೇ ವಾಟಾಳ್‌ ನಾಗರಾಜ್‌ ಪೊಲೀಸ್‌ ವಶಕ್ಕೆ ; ಕುತೂಹಲ ಮೂಡಿಸಿದ ಬಂದ್‌ ಭವಿಷ್ಯ..!

BREAKING NEWS : ಮನೆಯಿಂದಲೇ ವಾಟಾಳ್‌ ನಾಗರಾಜ್‌ ಪೊಲೀಸ್‌ ವಶಕ್ಕೆ ; ಕುತೂಹಲ ಮೂಡಿಸಿದ ಬಂದ್‌ ಭವಿಷ್ಯ..!

August 13, 2026
ಇಂದಿನಿಂದ ಮುಂಗಾರು ಅಧಿವೇಶನ: ಸದನದಲ್ಲಿ ಬಿಸಿ ಬಿಸಿ ಚರ್ಚೆ ವಿಷಯಗಳು ಇವು !

ಇಂದಿನಿಂದ ಮುಂಗಾರು ಅಧಿವೇಶನ: ಸದನದಲ್ಲಿ ಬಿಸಿ ಬಿಸಿ ಚರ್ಚೆ ವಿಷಯಗಳು ಇವು !

August 13, 2026
Next Post
ಶಿಕ್ಷ ಣ ಕೇಂದ್ರೀಕರಣ-ರಾಜ್ಯಗಳ ಮೇಲಿನ ಪರಿಣಾಮಗಳು

ಶಿಕ್ಷ ಣ ಕೇಂದ್ರೀಕರಣ-ರಾಜ್ಯಗಳ ಮೇಲಿನ ಪರಿಣಾಮಗಳು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada