• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಕಾಂಗ್ರೆಸ್​ ಸರ್ಕಾರದಲ್ಲಿ ಹಳೇ ಟ್ಯಾಂಕರ್​ಗೆ ಹೊಸ ಬಣ್ಣ.. ಅಸಲಿಯತ್ತು ಬಯಲು..

ಕೃಷ್ಣ ಮಣಿ by ಕೃಷ್ಣ ಮಣಿ
May 10, 2025
in Top Story, ಕರ್ನಾಟಕ, ರಾಜಕೀಯ
0
ಕಾಂಗ್ರೆಸ್​ ಸರ್ಕಾರದಲ್ಲಿ ಹಳೇ ಟ್ಯಾಂಕರ್​ಗೆ ಹೊಸ ಬಣ್ಣ.. ಅಸಲಿಯತ್ತು ಬಯಲು..
Share on WhatsAppShare on FacebookShare on Telegram
Lawyer Jagadesh Kumar : ಮುನಿರತ್ನ ಬಗ್ಗೆ, ಸ್ಪೋಟಕ ಹೇಳಿಕೆ ನೀಡಿದ ಲಾಯರ್‌ ಜಗದೀಶ್  #pratidhvani

ಹೊಸ ಯೋಜನೆ ಹೆಸರಿನಲ್ಲಿ ಹಳೆ ಟ್ಯಾಂಕರ್​ಗಳಿಗೆ ಬಣ್ಣ ಬಳಿದು ಬೆಂಗಳೂರು ಅಭಿವೃದ್ಧಿ ಸಚಿವ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್​ ಬೆಂಗಳೂರಿನ ನಾಗರೀಕರಿಗೆ ಯಾಮಾರಿಸಿದ್ರಾ..? ಅನ್ನೋ ಪ್ರಶ್ನೆ ಎದುರಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಕಳಪೆ ಯೋಜನೆಯ ಬಣ್ಣ ಬಯಲು ಮಾಡಿದ್ದಾರೆ ಬಿಜೆಪಿ ನಾಯಕರು. ತುಕ್ಕು ಹಿಡಿದ ಟ್ಯಾಂಕರ್‌ಗಳಲ್ಲಿ ಅಶುದ್ಧ ನೀರನ್ನು ಪೂರೈಸಲು ಮುಂದಾಗಿರುವುದು ಕಾಂಗ್ರೆಸ್ ಸರ್ಕಾರದ 8ನೇ ಗ್ಯಾರಂಟಿ ಎಂದು ನಾಯಕರ ಕಿಡಿಕಾರಿದ್ದಾರೆ.

ADVERTISEMENT

ನಿನ್ನೆಯಷ್ಟೇ ಟ್ಯಾಂಕರ್ ಬಿಡುಗಡೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್​, hಒಸ ಯೋಜನೆ ಬಗ್ಗೆ ಕೊಂಡಾಡಿದ್ದರು. ಮನೆ ಬಾಗಿಲಿಗೆ ಕಾವೇರಿ ಎಂದು ಭಾಷಣ ಮಾಡಿದ್ದರು. ಇದೀಗ ಹಳೆ ಟ್ಯಾಂಕರ್ ಗಳಲ್ಲಿ ನೀರು ಪೂರೈಸುವ ಯೋಜನೆ ಬಗ್ಗೆ ಈಗ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾರ್​ ಟ್ಯಾಂಕರ್​ಗಳ ರಿಯಾಲಿಟಿ ಚೆಕ್ ಮಾಡಿದ್ದು, ರಿಯಾಲಿಟಿ ಚೆಕಿಂಗ್ ವೇಳೆ ತುಕ್ಕು ಹಿಡಿದ ಟ್ರಾಕ್ಟರ್ ಟ್ಯಾಂಕರ್​ಗಳ ಬಣ್ಣ ಬಯಲಾಗಿದೆ.

ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ ಹೆಸರಿನಲ್ಲಿ ತುಕ್ಕು ಹಿಡಿದ ಹಳೆಯ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು ನವೀಕರಿಸಿದಂತೆ ತೋರಿಸಿ ಸಂಚಾರಿ ಕಾವೇರಿ ಎಂಬ ಯೋಜನೆಯನ್ನು ವಿಧಾನಸೌಧದಿಂದ ಆರಂಭಿಸಿದ ಕಾಂಗ್ರೆಸ್ ಸರ್ಕಾರವನ್ನು ಖಂಡಿಸುತ್ತೇವೆ. ಜನಪರ ಯೋಜನೆ ಎಂಬ ಮಂತ್ರ ಜಪಿಸುತ್ತಲೇ, ಸರ್ಕಾರ ನಿಜವಾದ ಜನಪರತೆಯಿಂದ ದೂರವಾಗಿ, ಟ್ಯಾಂಕರ್‌ಗಳ ಮೇಲ್ಮೈ ಬಣ್ಣವನ್ನು ಬದಲಾಯಿಸುವ ಮೂಲಕ ಜನರ ಆರೋಗ್ಯಕ್ಕೆ ಬಣ್ಣದ ಲೇಪನವನ್ನು ಹಾಕುತ್ತಿದ್ದಾರೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Vikram Misri: ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ಮಾಡ್ತಿದೆ..! #ForeignSecretary #pakistan #india

ಈ ಯೋಜನೆಯ ರೂವಾರಿಯಾದ ಮಂತ್ರಿಗಳ ಚಿಂತನೆಗೂ ಈಗಾಗಲೇ ತುಕ್ಕು ಹಿಡಿದಿದೆ ಎಂಬುದು ಸ್ಪಷ್ಟ, ಮಾನ್ಯ ಸಚಿವರಾದ D.K ಶಿವಕುಮಾರ್​ ಅವರು ಈ ಯೋಜನೆಯನ್ನು, “ಮನೆ ಬಾಗಿಲಿಗೆ ಶುದ್ಧ ನೀರನ್ನು ತಲುಪಿಸುವ” ಯೋಜನೆ ಎಂದು ಹೇಳುವ ಬದಲಿಗೆ “ತುಕ್ಕು ಹಿಡಿದ ಟ್ಯಾಂಕರ್​ಗಳಲ್ಲಿ, ಮನೆ ಬಾಗಿಲಿಗೆ ಅಶುದ್ಧ ನೀರನ್ನು ತಲುಪಿಸುವ” ಯೋಜನೆ ಎಂದು ಹೇಳುವುದು ಸೂಕ್ತ ಎಂದು ವ್ಯಂಗ್ಯವಾಡಿದ್ದಾರೆ. ಅದಲ್ಲದೆ ಟ್ಯಾಂಕರ್​ಗಳ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರವನ್ನು ಊಹಿಸಲು ಅಸಾಧ್ಯವಾಗಿದೆ.

ಶುದ್ಧವಾದ ಟ್ಯಾಂಕರ್​ಗಳಲ್ಲಿ ಶುದ್ಧವಾದ ನೀರನ್ನು ಕಳುಹಿಸಬೇಕಾದ ಸರ್ಕಾರ, ಅಶುದ್ಧವಾದ ಟ್ಯಾಂಕರ್​ಗಳಲ್ಲು ಇವರ ಜಾಹಿರಾತನ್ನು ಶುದ್ಧವಾಗಿ ಹಾಕಿಕೊಂಡಿರುವುದು ಹಾಸ್ಯಾಸ್ಪದ. ತುಕ್ಕು ಹಿಡಿದ ಟ್ಯಾಂಕರ್‌ಗಳಿಗೆ ಬಣ್ಣ ಬಳಿದು ಅವುಗಳಲ್ಲಿ ಬಿ.ಐ.ಎಸ್ ಪ್ರಮಾಣಿತ ನೀರನ್ನು ಪೂರೈಸಲಾಗುತ್ತಿದೆ ಎಂಬ ನಾಟಕವನ್ನು ಜನರು ನಂಬಲಾರರು. ವಿಧಾನಸೌಧದ ಆವರಣದಲ್ಲೇ ಇಂತಹ ತುಕ್ಕು ಹಿಡಿದ ಟ್ಯಾಂಕರ್‌ಗಳನ್ನು ಪ್ರದರ್ಶಿಸಿದ್ದು,ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯ ನಿಲುವನ್ನು ಸ್ಪಷ್ಟಪಡಿಸುತ್ತದೆ. ಈ ಯೋಜನೆಯ ಟ್ಯಾಂಕರ್‌ಗಳಿಗೆ ಮಾತ್ರ ತುಕ್ಕು ಹಿಡಿದಿಲ್ಲ, ಯೋಜನೆ ರೂಪಿಸುವ ಕಲ್ಪನೆಗೂ, ಜವಾಬ್ದಾರಿ ನಿಯೋಜನೆಗೂ, ಸಿದ್ದರಾಮಯ್ಯ ಸರ್ಕಾರದ ಸಾರ್ವಜನಿಕ ಸೇವೆಯ ಮಾನವೀಯ ದೃಷ್ಟಿಕೋನಕ್ಕೂ ತುಕ್ಕು ಹಿಡಿದಿದೆ ಎಂದು ಕಿಡಿಕಾರಿದ್ದಾರೆ.

ಸ್ವಚ್ಛತೆ, ಸುರಕ್ಷತೆ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಬೇಕಾದ ಸರ್ಕಾರ, ಭ್ರಷ್ಟಾಚಾರದಲ್ಲಿ ಮುಳುಗಿ ಸಾರ್ವಜನಿಕರ ಜೀವನಕ್ಕೆ ಗ್ಯಾರಂಟಿ ಇಲ್ಲದಂತೆ ಮಾಡಿದೆ ಎಂದು ಸರ್ಕಾರದ ಮನೆ ಬಾಗಿಲಿಗೆ ಶುದ್ಧ ನೀರು ಪೂರೈಕೆ ಯೋಜನೆ ಬಗ್ಗೆ ವಿಧಾನ ಪರಿಷತ್​ ವಿಪಕ್ಷ ನಾಯಕ ಛಲವಾದ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದು, ಸರ್ಕಾರ ಈ ಕಳಪೆ ಟ್ಯಾಂಕರ್​ಗಳನ್ನು ಪೂರೈಸಿರುವ ಗುತ್ತಿಗೆದಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಸರ್ಕಾರವೇ ಈ ಹಳೇ ಟ್ಯಾಂಕರ್​ಗೆ ಹೊಸ ಬಣ್ಣ ಹಚ್ಚಿಸಿ ಗೋಲ್ಮಾಲ್​ ಮಾಡ್ತಿದೆ ಎನ್ನುವುದು ಜನರ ಭಾವನೆ ಆಗಲಿದೆ.

Tags: breaking news livebut not for you...china in focuschina in focus ntdfbi clinton cover-upGovernmentimmortalityindian expressinternet securitykeith olbermannliving in chinanational security advisernews stationnimisha bansal editorialpolitical sciencePoliticsthe hinduthe hindu analysisthe hindu news analysis todaythe hindu newspaperthe viewthe view celebratesthey want it allvice president penceworld news
Previous Post

ಅಮೆರಿಕ ಸಂಧಾನ.. ಕದನ ವಿರಾಮ ಘೋಷಿಸಿದ ಭಾರತ – ಪಾಕ್​..

Next Post

ಭಾರತ – ಪಾಕ್​ ಕದನ ವಿರಾಮ ಸ್ವಾಗತಿಸಿದ ಸಿಎಂ.. ಆದರೂ ಕಟ್ಟೆಚ್ಚರ..

Related Posts

Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
0

https://youtube.com/live/Sh2S-y9CYsE

Read moreDetails

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

July 2, 2025

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

July 2, 2025
Next Post
ಭಾರತ – ಪಾಕ್​ ಕದನ ವಿರಾಮ ಸ್ವಾಗತಿಸಿದ ಸಿಎಂ.. ಆದರೂ ಕಟ್ಟೆಚ್ಚರ..

ಭಾರತ - ಪಾಕ್​ ಕದನ ವಿರಾಮ ಸ್ವಾಗತಿಸಿದ ಸಿಎಂ.. ಆದರೂ ಕಟ್ಟೆಚ್ಚರ..

Recent News

Top Story

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

by ಪ್ರತಿಧ್ವನಿ
July 2, 2025
Top Story

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
July 2, 2025
‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 
Top Story

‘I have no other option’ – ಸಿಎಂ ಬದಲಾವಣೆ ಬಗ್ಗೆ ಹಿಂಗಂದಿದ್ದ್ಯಾಕೆ ಡಿಕೆ ಶಿವಕುಮಾರ್ ..?! 

by Chetan
July 2, 2025
ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 
Top Story

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ವಾಕ್ಸಿನ್ ಗೂ ಯಾವುದೇ ಸಂಬಂಧವಿಲ್ಲ : ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ 

by Chetan
July 2, 2025
Top Story

Mitra: “ಮಹಾನ್” ಚಿತ್ರದಲ್ಲಿ ಮಿತ್ರ. .

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಂದಿ ಗಿರಿಧಾಮದಲ್ಲಿ ಸಿಎಂ, ಡಿಸಿಎಂ ಸಚಿವ ಸಂಪುಟ ಸಭೆ..!

July 2, 2025

CM Siddaramaiah: ಬಿಜೆಪಿ ಹಗಲುಗನಸು ಕಾಣುತ್ತಿದೆ: ಸಿ.ಎಂ.ಸಿದ್ದರಾಮಯ್ಯ

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada