ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಸ್ರೇಲ್ ಪ್ರಧಾನಿಯವರ ಆರೋಗ್ಯ ಹಾಗೂ ಸಾವಿನ ವದಂತಿಗಳನ್ನು ತಳ್ಳಿಹಾಕಿರುವ ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಗ್ಯವಾಗಿದ್ದು ಜೀವಂತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ನೆತನ್ಯಾಹು ಅವರ ಸಾರ್ವಜನಿಕ ಭಾಷಣವು ಎಐ ತಂತ್ರಜ್ಞಾನ ಬಳಸಿ ರಚಿಸಲಾಗಿದೆ ಹಾಗೂ ಅವರು ಮೃತಪಟ್ಟಿದ್ದಾರೆ ಎಂಬಂತೆ ಕೆಲವು ಸಾಮಾಜಿಕ ಜಾಲತಾಣ ಪೋಸ್ಟ್ಗಳು ಹರಿದಾಡುತ್ತಿದ್ದವು. ಈ ವದಂತಿಗಳು ವಿವಿಧ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಡಿ ಅಧಿಕೃತ ವಿಡಿಯೋಗಳ ವಿಶ್ವಾಸಾರ್ಹತೆ ಕುರಿತು ಚರ್ಚೆಗೆ ಕಾರಣವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೆಫೆಯಲ್ಲಿ ಪ್ರಧಾನಿ ನೆತನ್ಯಾಹು ಕಾಣಿಸಿಕೊಂಡಿರುವ ವಿಡಿಯೋ ಅಸಲಿಯೇ ಆಗಿದ್ದು, ಅದನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ನಿರ್ಮಿಸಲಾಗಿದೆ ಎಂಬ ಆರೋಪಗಳು ತಪ್ಪು ಎಂದು ಹೇಳಿದರು.

“ಪ್ರಧಾನಿ ನೆತನ್ಯಾಹು ಜೀವಂತವಾಗಿದ್ದಾರೆ. ನಾನು ಇಸ್ರೇಲ್ನಲ್ಲಿ ಇದ್ದಾಗ ಅವರನ್ನು ಒಂದಕ್ಕಿಂತ ಹೆಚ್ಚು ಬಾರಿ ಖುದ್ದಾಗಿ ನೋಡಿದ್ದೇನೆ. ಕೆಫೆಯಲ್ಲಿನ ಈ ವಿಡಿಯೋ ಎಐ ಮೂಲಕ ಸೃಷ್ಟಿಸಲ್ಪಟ್ಟದ್ದಲ್ಲ. ಆನ್ಲೈನ್ನಲ್ಲಿ ಸಾಕಷ್ಟು ಅಪಪ್ರಚಾರ ಹರಡುತ್ತಿದೆ,” ಎಂದು ರಾಯಭಾರಿ ಅಜರ್ ತಿಳಿಸಿದ್ದಾರೆ.
ಇದನ್ನೂ ಓದಿ
ಭಾರತದ ಹಡಗಿಗೆ ಮಾತ್ರ ಹಾರ್ಮುಜ್ ದಾಟಲು ಅನುಮತಿ ಹೇಗೆ ಸಿಕ್ತು?






