ಬೇವಿನ ಮರದ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿದೆ, ಇದರಿಂದ ಆರೋಗ್ಯಕ್ಕೆ ತುಂಬಾನೇ ಲಾಭಗಳಿವೆ. ಬೇವಿನ ಮರದ ಎಲೆ ,ಹೂವು ,ತೊಗಟೆ ,ಹಣ್ಣು ಹೀಗೆ ಪ್ರತಿಯೊಂದನ್ನು ಕೂಡ ಹಲವಾರು ಔಷಧಿಗಳಲ್ಲಿ ಬಳಸಲಾಗಿದ್ದು ಆಯುರ್ವೇದದಲ್ಲಿ ಉತ್ತಮ ಎನಿಸಿಕೊಂಡಿದೆ.
ಮುಖ್ಯವಾಗಿ ಬೇವಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು ,ಪ್ರತಿ ರಕ್ಷಕ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿ. ಬೇವಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶಗಳು ಹೆಚ್ಚಿದ್ದು ಸ್ನಾನ ಮಾಡುವಾಗ ಬಿಸಿನೀರಿನಲ್ಲಿ ಬೇವಿನ ಎಲೆಗಳನ್ನ ಹಾಕಿ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಚರ್ಮಕ್ಕೆ ಒಳ್ಳೆಯದು
ಸ್ನಾನ ಮಾಡುವಾಗ ಒಂದು ಬಕೆಟ್ ನೀರಿಗೆ ಒಂದಿಷ್ಟು ಬೇವಿನ ಎಲೆಗಳನ್ನು ಹಾಕಿ, ನಂತರ ಆ ನೀರಿನಿಂದ ಸ್ನಾನ ಮಾಡುವುದರಿಂದ ಚರ್ಮದಲ್ಲಾಗಿರುವ ಅಲರ್ಜಿಗಳು ಅಂದ್ರೆ ಗುಳ್ಳೆಗಳು ಅಥವಾ ಯಾವುದೇ ಸ್ಕಿನ್ ಇನ್ಫೆಕ್ಷನ್ ತಕ್ಷಣಕ್ಕೆ ನಿವಾರಣೆ ಆಗುತ್ತದೆ. ಚರ್ಮದಲ್ಲಾಗಿರುವ ಕಲೆಗಳು ಚಿಕನ್ ಬಾಕ್ಸ್ ಮಾರ್ಕಳು ಹೀಗೆ ಯಾವುದಿದ್ರೂ ಕೂಡ ಶಮನಗೊಳ್ಳುತ್ತದೆ. ಹಾಗೂ ಮುಖದಲ್ಲಿ ಆಗಿರುವಂತಹ ಕಪ್ಪು ಕಲೆಗಳು , ಏಜಿಂಗ್ ಪ್ರಾಬ್ಲಮ್ ಎಲ್ಲವುದಕ್ಕು ಕೂಡ ರಾಮಬಾಣ.
ಮೊಡವೆಗಳು
ತ್ವಜೆಯ ಬಗ್ಗೆ ಹೆಚ್ಚು ಚೆನ್ನಾಗಿ ಕಾಳಜಿವಹಿಸುತ್ತಾರೆ ಹಾಗೂ ತ್ವಚೆಯಲ್ಲಿ ಯಾವುದೇ ಕಲೆಗಳಿರಬಾರದು ಎಂದು ಬಯಸುವವರ ಸಂಖ್ಯೆ ಕೂಡ ಹೆಚ್ಚಿದೆ. ಇನ್ನು ಸಾಕಷ್ಟು ಜನಕ್ಕೆ ಮೊಡವೆಗಳು ಸಮಸ್ಯೆ ಹೆಚ್ಚಿರುತ್ತದೆ. ಅಂಥವರು ಪ್ರತಿ ದಿನ ಸ್ನಾನ ಮಾಡುವಾಗ ಬಿಸಿ ನೀರಿನಲ್ಲಿ ಬೇವಿನ ಎಲೆಯನ್ನು ಹಾಕಿ ಸ್ನಾನ ಮಾಡುವುದರಿಂದ ಅಥವಾ ಮುಖವನ್ನು ತೊಳೆಯುವುದರಿಂದ ಮೊಡವೆಗಳು ಹಾಗೂ ಮೊಡವೆ ಕಲೆಗಳು ಶಮನಗೊಳ್ಳುತ್ತವೆ,ಕಾರಣ ಬೇವಿನ ಎಲೆಯಲ್ಲಿ ಆಂಟಿಬಾಗ್ತಿರಲ್ ಅಂಶ ಹೆಚ್ಚಿದೆ.
ಕಣ್ಣಿನ ಆರೋಗ್ಯಕ್ಕೆ ಉತ್ತಮ
ತ್ವಜೆಗೆ ಮಾತ್ರವಲ್ಲದೇ ಬೇವಿನ ಎಲೆಯನ್ನು ಹಾಕಿದ ಸ್ನಾನ ಮಾಡುವುದರಿಂದ ಕಣ್ಣಿಗೂ ಕೂಡ ಉತ್ತಮ ಕಾರಣ ಇದರಲ್ಲಿ ಆಂಟಿ ಮೈಕ್ರೋಬಿಯಲ್ ಅಂಶಗಳು ಹೆಚ್ಚಿದ್ದು ಇವು ಕಣ್ಣುಗಳಲ್ಲಿರುವ ಇನ್ಫೆಕ್ಷನ್ ಅನ್ನ ದೂರ ಮಾಡುತ್ತದೆ ಹಾಗೂ ಆರೋಗ್ಯಕರ ಕಣ್ಣು ನಿಮ್ಮದಾಗುತ್ತದೆ.
ಕೂದಲ ಬೆಳವಣಿಗೆಗೆ ಉತ್ತಮ
ಹೆಚ್ಚು ಜನ ಬಯಸುವುದು ಕೂದಲ ಆರೋಗ್ಯ ಉತ್ತಮವಾಗಿ ಇರಬೇಕೆಂದು ಹಾಗಾಗಿ..ತಲೆಗೆ ಸ್ನಾನ ಮಾಡುವ ಪ್ರತಿಭಾರಿಯು ಕೂಡ ಬೇವಿನ ಎಲೆಗಳ್ಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಿ. ಇದರಿಂದ ಕೂದಲು ಉದ್ದವಾಗಿ ಹಾಗೂ ದಟ್ಟವಾಗಿ ಬೆಳೆಯುತ್ತದೆ ಡ್ಯಾಂಡ್ರಫ್ ರಹಿತ ಕೂದಲು ನಿಮ್ಮದಾಗುತ್ತದೆ.ಹಾಗೂ ಸ್ಕ್ಯಾಲ್ಪ್ ಅಲ್ಲಿ ಇರುವಂತಹ ಪೋರ್ಸ್ ನ ಟೈಟ್ ಮಾಡುತ್ತದೆ.
ದೇಹದ ದುರ್ಗಂಧ
ಕೆಲವರು ತುಂಬಾನೆ ಬೆವರುತ್ತಾರೆ ಮಾತ್ರವಲ್ಲದೇ ಬೆವರಿನ ದುರ್ಗಂಧ ಅತಿಯಾಗಿರುತ್ತದೆ. ಎದಕ್ಕೆ ಪ್ರಮುಖ ಕಾರಣ ದೇಹದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ಗಳು. ಇಂಥ ಸಂದರ್ಭದಲ್ಲಿ ಬೇವಿನ ಎಲೆಗಳನ್ನು ಹಾಕಿದ ನೀರಿನಿಂದ ಸ್ನಾನ ಮಾಡುವುದರಿಂದ ಬೆವರಿನ ದುರ್ಗಂಧ ದೂರವಾಗುತ್ತದೆ.