2021ರಲ್ಲಿ ದೇಶದಲ್ಲಿ ವಶಪಡಿಸಿಕೊಂಡ ಎಲ್ಲಾ ನಕಲಿ ನೋಟುಗಳಲ್ಲಿ ಸುಮಾರು 60ರಷ್ಟು ನೋಟುಗಳು 2,000 ರುಪಾಯಿ ಮುಖಬೆಲೆಯದ್ದಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ ಹೇಳಿದೆ.
2021ರಲ್ಲಿ ವಶಪಡಿಸಿಕೊಂಡ ಒಟ್ಟು 20.39 ಕೋಟಿ ರುಪಾಯಿ ಮೌಲ್ಯದ ನಕಲಿ ಬಾರತೀಯ ನೋಟುಗಳಲ್ಲಿ 12.18 ಕೋಟಿ ರುಪಾಯಿ ಮೌಲ್ಯದ ನೋಟುಗಳು 2,000 ರುಪಾಯಿ ಮುಖಬೆಲೆಯದ್ದೇ ಆಗಿದೆ ಎಂದು ವರದಿ ತಿಳಿಸಿದೆ.
ನಕಲಿ ಭಾರತೀಯ ನೋಟುಗಳ ಚಲಾವಣೆಯನ್ನು ತಡೆಯುವುದಕ್ಕಾಗಿ 2016 ರಲ್ಲಿ ನೋಟು ಅಮಾನ್ಯೀಕರಣ ಮಾಡಲಾಯಿತು ಮತ್ತಿದು ಸರ್ಕಾರಕ್ಕೆ ಪ್ರಾಥಮಿಕ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಸರ್ಕಾರವೇ ಅಂದು ಹೇಳಿತ್ತು. ಆದರೆ 2016 ನೋಟು ಅಮಾನ್ಯೀಕರಣದ ನಂತರ ಭಾರತದಲ್ಲಿ ನಕಲಿ ಹಣ ಪತ್ತೆಯಾಗುತ್ತಿರುವ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಬಹಿರಂಗಪಡಿಸಿವೆ.

2016ರಲ್ಲಿ ಹಳೆಯ 500 ಮತ್ತು 1,000 ರುಪಾಯಿ ಮೌಲ್ಯದ ನೋಟುಗಳನ್ನು ಸರ್ಕಾರ ರದ್ದುಗೊಳಿಸಿದ ನಂತರ 2,000 ರುಪಾಯಿ ಮತ್ತು 500 ರುಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಲಾಯಿತು.