• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಗೆದ್ದಿದ್ದು NDA .. BJP ಸೋಲಿನ ಹೊಣೆ ಯಾರದ್ದು..? ನಾಯಕನ ಪಾತ್ರವೇನು..?

ಪ್ರತಿಧ್ವನಿ by ಪ್ರತಿಧ್ವನಿ
June 8, 2024
in ಕರ್ನಾಟಕ, ದೇಶ, ರಾಜಕೀಯ
0
ಗೆದ್ದಿದ್ದು NDA .. BJP ಸೋಲಿನ ಹೊಣೆ ಯಾರದ್ದು..? ನಾಯಕನ ಪಾತ್ರವೇನು..?
Share on WhatsAppShare on FacebookShare on Telegram

ಲೋಕಸಭಾ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯ ಆಗುವ ಕೊನೇ ಹಂತದಲ್ಲಿ ಭಾರತೀಯರು ಬಂದು ನಿಂತಿದ್ದಾರೆ. NDA ಮೈತ್ರಿಕೂಟಕ್ಕೆ ಬಹುಮತ ಬಂದಿದ್ದು, ಎನ್​ಡಿಎ ಮೈತ್ರಿಕೂಟದಿಂದ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರಿಗೆ ಎನ್​ಡಿಎ ಮೈತ್ರಿಕೂಟದ ಸಂಪೂರ್ಣ ಬೆಂಬಲ ಇದೆ ಎಂದು ಈಗಾಗಲೇ ಮೈತ್ರಿಕೂಟದ ನಾಯಕರು ಸಹಿ ಹಾಕಿ ಕೊಟ್ಟಿದ್ದಾರೆ ಎನ್ನುವ ಮಾಹಿತಿ ದೆಹಲಿಯ ಕೆಂಪುಕೋಟೆಯಿಂದ ಹೊರ ಬಿದ್ದಿದೆ. ಆದರೆ ಎನ್​ಡಿಎ ಮೈತ್ರಿಕೂಟ ಆಯ್ಕೆ ಮಾಡಿದ ವ್ಯಕ್ತಿ ಪ್ರಧಾನಿ ಆಗುವುದರಲ್ಲಿ ಯಾವುದೇ ಕಾನುನು ತೊಡಕು ಇರುವುದಿಲ್ಲ. ಆದರೆ ನೈತಿಕತೆ ಪ್ರಶ್ನೆ ಎನ್ನುವುದು ಬಂದಾಗ ಬಿಜೆಪಿ ಸೋಲಿನ ಹೊಣೆಯನ್ನು ಹೊರುವುದು ಯಾರು..? ಅನ್ನೋ ಪ್ರಶ್ನೆ ಎದುರಾಗಿದೆ.

ADVERTISEMENT

ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ ಹಾಗು ಎನ್​ಸಿಪಿ ಪಾರ್ಟಿಯನ್ನು ಇಬ್ಭಾಗ ಮಾಡಿ ಅಧಿಕಾರ ಹಿಡಿದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ಬಾರಿ ಲೋಕಸಭೆಯಲ್ಲಿ ಬಿಜೆಪಿ ಸೇರಿದಂತೆ ಸರ್ಕಾರದಲ್ಲಿ ಭಾಗಿಯಾಗಿರುವ ಎನ್​ಸಿಪಿ ಹಾಗು ಶಿವಸೇನೆ ಹೀನಾಯ ಫಲಿತಾಂಶ ಪಡೆದಿವೆ. ಇಬ್ಭಾಗದಿಂದ ಹಿಂಸೆ ಅನುಭವಿಸಿದ್ದ ಉದ್ಧವ್​ ಠಾಕ್ರೆ ಬಣದ ಶಿವಸೇನೆ ಹಾಗು ಶರದ್​ ಪವಾರ್​ ಬಣದ ಎನ್​ಸಿಪಿ ಜೊತೆಗೆ ಕಾಂಗ್ರೆಸ್​ ಭರ್ಜರಿ ಸ್ಥಾನಗಳಲ್ಲಿ ಗೆದ್ದು ಬೀಗುತ್ತಿದೆ. ಈ ಸೋಲಿನ ಹೊಣೆಯನ್ನು ನಾನು ಹೊರುತ್ತೇನೆ ಎಂದು ಡಿಸಿಎಂ ಆಗಿರುವ ದೇವೇಂದ್ರ ಫಡ್ನಾವಿಸ್​ ಬಹಿರಂಗವಾಗಿ ಹೇಳಿದ್ದಾರೆ. ಜೊತೆಗೆ ಡಿಸಿಎಂ ಸ್ಥಾನದಿಂದ ಹೊರಬರುವುದಕ್ಕೆ ಹೈಕಮಾಂಡ್​ ಅನುಮತಿಯನ್ನೂ ಕೇಳಿದ್ದಾರೆ. ಇದು ನೈತಿಕತೆ ಇರುವ ನಾಯಕ ಮಾಡಬೇಕಿರುವ ಕೆಲಸ. ಹೈಕಮಾಂಡ್​ ಒಪ್ಪುವುದು ಬಿಡುವುದು ಬೇರೆ ವಿಚಾರ. ಆದರೆ ಸೋಲಿನ ಹೊಣೆಯನ್ನು ಹೊರುವ ಕೆಲಸ ಮಾಡಿದ್ದಾರೆ.

ಓರ್ವ ರಾಜ್ಯ ನಾಯಕನಿ9ಗೆ ಇರುವ ಸೂಕ್ಷ್ಮತೆ ರಾಷ್ಟ್ರೀಯ ನಾಯಕರಿಗೆ ಇಲ್ಲದಂತಾಗಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿ ಕಳೆದ ಬಾರಿ 282 ಸ್ಥಾನಗಳನ್ನು ಗೆದ್ದು ಅಧಿಕಾರ ನಡೆಸಿತ್ತು. ಆದರೆ ಈ ಬಾರಿ ಸರಳ ಬಹುಮತದ ಗೆರೆಯನ್ನು ದಾಟುವುದಕ್ಕೆ ಸಾಧ್ಯವಾಗಿಲ್ಲ. ಅಂದ ಮೇಲೆ ದೇಶದ ಜನರು ಬಿಜೆಪಿಯನ್ನು ತಿರಸ್ಕಾರ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಸೋಲಿನ ಹೊಣೆಯನ್ನು ಹೊರಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಎನ್​ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಪ್ರಧಾನಿ ಆಗುವುದಕ್ಕೆ ಪೇಟ ಕಟ್ಟಿಕೊಂಡು ಸಜ್ಜಾಗಿದ್ದಾರೆ. ಅಂದರೆ ನೈತಿಕತೆ ವಿಚಾರ ಬರುವುದಿಲ್ಲ ಎನ್ನುವುದನ್ನು ಸಾಬೀತು ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲೇ ಪ್ರಧಾನಿ ಆಗಬೇಕು ಎಂದರೆ ಬೇರೆಯವರಿಗೆ ಅವಕಾಶ ಕೊಡಬಹುದು ಅಲ್ಲವೇ..?

ಯುದ್ಧಕ್ಕೆ ಹೋದ ರಾಜನ ಮೇಲೆ ಜನರು ಅಥವಾ ಸೇನೆ ದಂಗೆ ಎದ್ದರೆ ರಾಜನ ವಿರುದ್ಧ ಜನಾಭಿಪ್ರಾಯವಿದೆ ಎಂದು ಅರ್ಥ. ಆದರೆ ನಾನು ಮತ್ತೆ ಬೇರೊಬ್ಬರ ಸಪೋರ್ಟ್​ನಿಂದ ರಾಜನೇ ಆಗ್ತೀನಿ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ ಎನ್ನಬಹುದು. ತಿರಸ್ಕೃತಗೊಂಡ ನಾಯಕ ಬೇರೊಂದು ಮಾರ್ಗದಲ್ಲಿ ಅಧಿಕಾರ ಹಿಡಿದರೆ ಮುಂದಿನ ದಿನಗಳಲ್ಲಿ ಯಾವ ಮಾರ್ಗವೂ ಇಲ್ಲದಂತೆ ಸಂಪೂರ್ಣವಾಗಿ ಮುಚ್ಚಿಬಿಡುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಎನ್​ಡಿಎ ಮೈತ್ರಿಕೂಟ ಎಲ್ಲರೂ ಸೇರಿದರೂ ಅಧಿಕಾರ ಸಿಗಬಾರದು ಆ ರೀತಿಯ ನಿರ್ಧಾರವನ್ನು ದೇಶದ ಜನರೇ ತೆಗೆದುಕೊಂಡರೆ ಅಚ್ಚರಿಯಿಲ್ಲ. ಹೀಗಾಗಿ NDA ಮೈತ್ರಿಕೂಟಕ್ಕೆ ಬಹುಮತವಿದೆ. ಆದರೆ ಬಿಜೆಪಿಗೆ ಬಹುಮತ ಹೋಗಿದೆ. ಎನ್​ಡಿಎ ಮೈತ್ರಿಕೂಟದ ನಾಯಕನಾಗಿ ಬೇರೊಬ್ಬರ ಆಯ್ಕೆ ಮಾಡಬಹುದಿತ್ತು. ಮೋದಿಯೇ ಸ್ವತಃ ನೈತಿಕತೆ ಆಧಾರದಲ್ಲಿ ಬೇರೊಬ್ಬರನ್ನು ಆಯ್ಕೆ ಮಾಡಲು ಸೂಚಿಸಬೇಕಿತ್ತು. ದೇಶದ ಜನರು ತಿರಸ್ಕಾರ ಮಡಿದ್ದಾರೆ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕು ಅಲ್ಲವೇ..?

ಕೃಷ್ಣಮಣಿ

Tags: BJPcongressElectionModiNDA
Previous Post

ಜೂನ್ 11ರ ವರೆಗೆ ಈ ಜಿಲ್ಲೆಗಳಿಗೆ ರೆಡ್ ಅಲರ್ಟ್!

Next Post

ಮೂರನೇ ಬಾರಿಗೆ ಪ್ರಧಾನ ಸೇವಕನಾಗಿ ಅಧಿಕಾರ ಸ್ವೀಕರಿಸಲಿರುವ ಮೋದಿ

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

by ಪ್ರತಿಧ್ವನಿ
April 28, 2026
0

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಆಡಳಿತ ವಿರೋಧಿ ಅಲೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ All India Trinamool Congress ಸರ್ಕಾರದ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

April 28, 2026
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
Next Post
ಮೂರನೇ ಬಾರಿಗೆ ಪ್ರಧಾನ ಸೇವಕನಾಗಿ ಅಧಿಕಾರ ಸ್ವೀಕರಿಸಲಿರುವ ಮೋದಿ

ಮೂರನೇ ಬಾರಿಗೆ ಪ್ರಧಾನ ಸೇವಕನಾಗಿ ಅಧಿಕಾರ ಸ್ವೀಕರಿಸಲಿರುವ ಮೋದಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada