
ಗ್ಯಾಂಗ್ಸ್ ಆಫ್ ಗೋದಾವರಿ(Gangs of godavari) ಸಿನಿಮಾಕ್ಕೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ತೆಲುಗಿನ ಖ್ಯಾತ ನಟ, ರಾಜಕಾರಣಿ ನಂದಮೂರಿ ಬಾಲಕೃಷ್ಣ(nandamuri balakrishna) ಯುವ ನಟಿ ಅಂಜಲಿಯನ್ನು ಪಕ್ಕಕ್ಕೆ ತಳ್ಳಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ಸಂದರ್ಭ ವೇದಿಕೆಯಲ್ಲಿದ್ದ ಅಂಜಲಿ(anjali) ನಕ್ಕರೂ ಸೋಷಿಯಲ್ ಮೀಡಿಯಾದಲ್ಲಿ ಹಿರಿಯ ನಟನ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಚಲನಚಿತ್ರರಂಗದ ಯುವ ಕಲಾವಿದರನ್ನು ಈ ರೀತಿ ನಡೆಸಿಕೊಳ್ಳುವುದೇ? ಎಂದು ಪ್ರಶ್ನಿಸಿದ್ದಾರೆ. ಇದು ಅಸಭ್ಯ ಮತ್ತು ಅಗೌರವದ ವರ್ತನೆ ಎಂದು ನೆಟ್ಟಿಗರು ಕ್ರೋಧ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಸ್ಟೇಜ್‌ನ ಮಧ್ಯ ಭಾಗಕ್ಕೆ ಬಾಲಯ್ಯ ಆಗಮಿಸುತ್ತಾರೆ. ಅಲ್ಲಿ ನಟಿ ನೇಹಾ ಶೆಟ್ಟಿ ಮತ್ತು ಅಂಜಲಿ ಇರುತ್ತಾರೆ. ಅಂಜಲಿಯನ್ನು ಪಕ್ಕಕ್ಕೆ ಹೋಗುವಂತೆ ಬಾಲಯ್ಯ ಹೇಳುತ್ತಾರೆ. ಈ ಸಮಯದಲ್ಲಿ ಅಂಜಲಿಯನ್ನು ಜೋರಾಕ್ಕೆ ಪಕ್ಕಕ್ಕೆ ತಳ್ಳಿದ್ದಾರೆ. ವೇದಿಕೆಯ ಕೆಳಗಿದ್ದವರು ಈ ಸಂದರ್ಭ ತಮಾಷೆಯೆಂಬಂತೆ ಜೋರಾಗಿ ಹೋ ಅಂದಿದ್ದಾರೆ. ನಟಿ ಅಂಜಲಿ ಕೂಡ ಜೋರಾಗಿ ನಕ್ಕಿದ್ದಾರೆ. ವೈರಲ್ ಆಗಿರುವ ವಿಡಿಯೋದ ಪೂರ್ಣ ವಿಡಿಯೋದಲ್ಲಿ ತಕ್ಷಣ ಬಾಲಯ್ಯ ಅಂಜಲಿಯಲ್ಲಿ ತಮಾಷೆ ಮಾತನಾಡುತ್ತಿರುವ ದೃಶ್ಯವೂ ಇದೆ.
ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮಕ್ಕೆ ಬಾಲಯ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಗೆ ಬಂದು ಮಾತನಾಡುವಂತೆ ಇವರಿಗೆ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಸಿನಿಮಾ ತಂಡವು ಬಾಲಯ್ಯರ ಜತೆ ಫೋಟೋ ತೆಗೆದುಕೊಳ್ಳಲು ಬಯಸಿತು. ವೇದಿಕೆಯ ಮಧ್ಯಭಾಗಕ್ಕೆ ಬಂದ ನಂದಮೂರಿ ಬಾಲಕೃಷ್ಣ ಅವರು ಅಲ್ಲಿದ್ದ ಅಂಜಲಿಯನ್ನು ಪಕ್ಕಕ್ಕೆ ಸರಿಯುವಂತೆ ಹೇಳಿ ತಳ್ಳಿದ್ದಾ