ಏರ್ ಪೋರ್ಟ್ ನಲ್ಲಿ (Airport) ಪೂರಕ ದಾಖಲೆಗಳೊಂದಿಗೆ ಬಂಧನ ಪ್ರಕ್ರಿಯೆ ನಡೆಸಿ ಕರೆತರಲು ಎಸ್ ಐಟಿ (SIT) ಟೀಮ್ ಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಪ್ರಜ್ವಲ್ ರೇವಣ್ಣ ಬಂಧನದ ಜೊತೆಗೆ ಅವರ ಮೊಬೈಲ್ ನ (Mobile) ಕೂಡಾ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ. ಹೀಗೆ ವಶಕ್ಕೆ ಪಡೆದ ಮೊಬೈಲ್ ಸಹ ರಿಟ್ರೀವ್ (Mobile retrieve) ಗೆ ಕಳಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಪ್ರಜ್ವಲ್ ಬಳಸ್ತಿದ್ದದ್ದು ಒಂದು ಮೊಬೈಲ್ ಅಥವಾ ಎರಡು ಮೊಬೈಲ್ ಬಳಸುತ್ತಿದ್ದರಾ ಎಂಬ ಬಗ್ಗೆ ತನಿಖೆ ಮಾಡಿ,ಮೊಬೈಲ್ ನಲ್ಲಿ ಸಿಕ್ಕ ಮಾಹಿತಿ ಆಧರಿಸಿ ತನಿಖೆ ನಡೆಯಲಿದೆ.

ಈ ವೇಳೆ ಏರ್ ಪೋರ್ಟ್ ನಿಂದ ಎಸ್ ಐಟಿವರೆಗೂ ಕಛೇರಿವರೆಗೂ ಭದ್ರತೆಯಲ್ಲಿ ಪ್ರಜ್ವಲ್ ರೇವಣ್ಣ ಕರೆತರಲು ಬೆಂಗಾವಲು ವಾಹನದಲ್ ಸಿದ್ದತೆ ಕೂಡ ಮಾಡಿಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳ ಪ್ರತ್ಯೇಕ ತನಿಖಾಧಿಕಾರಿಗಳು ಈಗಾಗಲೇ ಸೂಕ್ತ ಸಾಕ್ಷ್ಯಗಳ ಸಂಗ್ರಹ ಕೂಡ ಮಾಡಿದ್ದಾರೆ.
ಪ್ರಾಥಮಿಕವಾಗಿ ಪ್ರಜ್ವಲ್ ರೇವಣ್ಣ ವಿಚಾರಣೆ ಮಾಡಿ ಮೊದಲು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲು ಪ್ಲಾನ್ ಮಾಡಲಾಗಿದ್ದು, ಬಳಿಕ ಮೂರು ಪ್ರಕರಣಗಳ ಪ್ರತ್ಯೇಕ ವಿಚಾರಣೆ ನಡೆಸಲಿದ್ದಾರೆ.

ಒಂದ್ವೇಳೆ ತನಿಖೆಗೆ ಸಹಕರಿಸಿದಿದ್ದಲ್ಲಿ ಟೆಕ್ನಿಕಲ್ ಸಾಕ್ಷ್ಯಗಳ (Technical evidence) ಸಂಗ್ರಹಿಸಲು ಎಸ್ ಐಟಿ ಸಿದ್ದತೆ ಮಾಡಿಕೊಂಡಿದೆ.ವಿದೇಶಕ್ಕೆ ಹೋಗಿದ್ದು, ಯಾರ ಆಶ್ರಯದಲ್ಲಿದ್ದು, ಹಣಕಾಸು ಸಹಾಯ ಮಾಡಿದ್ಯಾರು? 34 ದಿನಗಳ ವಿದೇಶದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಲು ಟೀಮ್ ಪ್ಲಾನ್ ಮಾಡಿಕೊಂಡಿದೆ.