ಮನೆಯಲ್ಲೇ ಕುಳಿತು ಓದಿ, ಯುಪಿಎಸ್ಸಿ ಪಡೆದ ವಿದ್ಯಾರ್ಥಿನಿ. ಯುಪಿಎಸ್ಸಿ ಯಲ್ಲಿ 390ನೇ ರ್ಯಾಂಕ್ ಪಡೆದ ವಿಧ್ಯಾರ್ಥಿನಿ. ಸತತ ಎರಡನೇ ಪ್ರಯತ್ನದಲ್ಲಿ ಮೈಸೂರಿನ ಪೂಜಾ ರ್ಯಾಂಕ್ ಪಡೆದಿದ್ದಾರೆ. ಮೈಸೂರಿನ ಪೂಜಾ ಮುಕುಂದ್, ಸತತ ಮೂರು ವರ್ಷಗಳ ಪ್ರಯತ್ನದ ಫಲವಾಗಿ ತೇರ್ಗಡೆ. ಓದಿದ್ದು ಇಂಜಿನಿಯರಿಂಗ್ ಆದ್ರೇ ಯುಪಿಎಸ್ಸಿ ಪಾಸ್ ಮಾಡಿದ್ದು ಸಮಾಜಶಾಸ್ತ್ರ. ತಾಯಿಯ ಆಸೆಯಂತೆ ಪರೀಕ್ಷೆ ಮಾಡಿದ್ದಿನಿ ಎಂದು ಹೇಳಿದ್ದಾರೆ.
ಹೆಚ್ಚು ಓದಿದ ಸ್ಟೋರಿಗಳು


ನಾನು ಯಾವುದೇ ಕೋಚಿಂಗ್ ಸೆಂಟರ್ ಗೆ ಹೋಗಿ ತಯಾರಿ ಮಾಡಿಲ್ಲ. ಮನೆಯಲ್ಲೇ ಎಲ್ಲಾ ತಯಾರಿ ಓದಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದೇನೆ. ತಂದೆ, ತಾಯಿ, ಅಕ್ಕ, ಭಾವ ಸೇರಿ ಕುಟುಂಬದ ಸಹಕಾರದಿಂದ ಪಾಸ್ ಮಾಡಲು ಸಹಕರಿಸಿದ್ದಾರೆ. ಈಗ ನನ್ನ ಮುಂದೆ ಸಾಕಷ್ಟು ಆಯ್ಕೆಗಳು ಇವೆ. ಐಎಎಸ್ ಅಥವಾ ಐಪಿಎಸ್ ಸಿಗಬಹುದು. ದಕ್ಷಿಣ ಭಾರತೀಯರು ಹೆಚ್ಚು ಹೆಚ್ಚು ಮಂದಿ ಪರೀಕ್ಷೆ ತೆಗೆದುಕೊಳ್ಳಬೇಕು ಎಂದು ಪೂಜಾ ಮುಕುಂದ್ ಹೇಳಿಕೆ.
ಯುಪಿಎಸ್ಸಿ ಪರೀಕ್ಷೆ.
ವಿದ್ಯಾರ್ಥಿ : ಪೂಜಾ.ಎಂ (390 ರ್ಯಾಂಕ್ )
ತಂದೆ : ಮುಕುಂದ್ರಾವ್ ಬೇದ್ರೆ
ತಾಯಿ : ರೋಹಿಣಿ.
ಇಂಜಿನಿಯರಿಂಗ್ : ವಿದ್ಯಾವರ್ಧಕ ಕಾಲೇಜು.