ಬೆಂಗಳೂರಿನ ನೈಸ್ ರಸ್ತೆಯಲ್ಲಿ (Nice road) ವಕೀಲನ ಮೃತದೇಹ ಪತ್ತೆಯಾಗಿದೆ. ಜಗದೀಶ್ ಎಂಬ ವಕೀಲ (Lawyer Jagadeesh) ಶವವಾಗಿ ಪತ್ತೆಯಾಗಿದ್ದು, ಬನ್ನೇರುಘಟ್ಟ-ಕನಕಪುರ ನೈಸ್ ರಸ್ತೆಯಲ್ಲಿ ಈ ಶವ ಪತ್ತೆಯಾಗಿದೆ. ತನ್ನ ಕಿಯಾ ಸೆಲ್ಟಾಸ್ ಕಾರಿನಲ್ಲಿ ಬರ್ತಿದ್ದ ವಕೀಲ ಜಗದೀಶ್ ಮೃತದೇಹ ಕಾರು ನಿಂತಿದ್ದ 200 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.

ಇನ್ನು ಕಾರಿನ ಹಲವೆಡೆ ಅಪಘಾತವಾದ ಗುರುತುಗಳು ಪತ್ತೆಯಾಗಿದೆ. ನಿನ್ನೆ (ಮೇ.2) ರಾತ್ರಿ 8ಗಂಟೆ ವೇಳೆ ಮೃತದೇಹ ಪತ್ತೆಯಾಗಿದೆ. ಇನ್ನು ಇದು ಕೊಲೆನಾ ಅಥವಾ ಅಪಘಾತನ ಎಂಬ ಅನುಮಾನಗಳು ಮೂಡಿದೆ.
ಈ ಮೃತದೇಹ ಪತೆಯಾದ ಸ್ಥಳ, ಸನ್ನಿವೇಶ ಗಮನಿಸಿದರೆ, ಕಾರು ಟಚ್ ಆದ ವಿಚಾರಕ್ಕೆ ಗಲಾಟೆಯಾಗಿ ಮರ್ಡರ್ ನಡೆದಿದ್ದ ಅಥವಾ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಲಾಗಿದ್ಯಾ? ಎಂಬ ಆಯಾಮದಲ್ಲೂ ಗುಮಾನಿ ಮೂಡಿದೆ.

ಈ ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲನೆಗೆ ಮುಂದಾಗಿದ್ದಾರೆ. ಇನ್ನು ಮೇಲ್ನೋಟಕ್ಕೆ ಕೊಲೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.