ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಹೆಣ್ಣು ಮಗುವನ್ನ ಕೊಲೆ ಮಾಡಿರುವ ಘಟನೆ
ವೈಟ್ ಫೀಲ್ಡ್ ಬಳಿಯ ನಲ್ಲೂರಳ್ಳಿಯಲ್ಲಿ ನಡೆದಿದೆ. ಕೊಲ್ಕತ್ತ ಮೂಲದ ಶಹಜಾನ್ ಕತೂನ್ ಮೃತ ಬಾಲಕಿ
ವೈಟ್ ಫೀಲ್ಡ್ ಬಳಿಯ ನಲ್ಲೂರಳ್ಳಿಯಲ್ಲಿ ನಡೆದಿದೆ. ಕೊಲ್ಕತ್ತ ಮೂಲದ ಶಹಜಾನ್ ಕತೂನ್ ಮೃತ ಬಾಲಕಿ.
ನಲ್ಲೂರಳ್ಳಿಯಲ್ಲಿ ವಾಸವಿದ್ದ ಮಗುವಿನ ತಾಯಿಗೆ ಅಕ್ಕ ಪಕ್ಕದವರ ಜೊತೆಗೆ ಜಗಳ ಆಗಿತ್ತು.. ಗಲಾಟೆ ಹಿನ್ನಲೆ
ತಾಯಿಗೆ ಬುದ್ದಿ ಕಲಿಸುತ್ತೇನೆ ಎಂದು ಆರೋಪಿಗಳು ಮಗುವನ್ನ ಕಿಡ್ನಾಪ್ ಮಾಡಿದ್ದರು. ಈ ಬಗ್ಗೆ ಮಗುವಿನ ತಂದೆ ಇಂಜಮುಲ್ ಶೇಕ್ ವೈಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ಪಡೆದು ಮಗುವಿಗಾಗಿ ಹುಡುಕಾಟ ನಡೆಸಿದ್ದ ವೈಟ್ ಫೀಲ್ಡ್ ಪೊಲೀಸರಿಗೆ ತಡರಾತ್ರಿ ಚರಂಡಿ ಬಳಿ ಬಿದ್ದಿದ್ದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಮಗುವಿನ ದೇಹ ಪತ್ತೆಯಾಗಿದೆ. ಪರಿಶೀಲನೆ ವೇಳೆ ಮಗುವಿನ ಕುತ್ತಿಯಲ್ಲಿ ಪ್ಲಾಸ್ಟಿಕ್ ಹಗ್ಗಗಳು ಸಹ ಪತ್ತೆಯಾಗಿದ್ದು, ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆ ಬಗ್ಗೆ ಮೊದಲು ಕಿಡ್ನಾಪ್ ಕೇಅ್ ದಾಖಲು ಮಾಡಿದ್ದ ಪೊಲೀಸರು..
ಮೃತದೇಹ ಸಿಕ್ಕ ಬಳಿಕ ಕೊಲೆ ಕೇಸ್ ದಾಖಲಿಸಿ
ವಿಶೇಷ ತಂಡಗಳಿಂದ ಕೊಲೆ ಆರೋಪಿಗಾಗಿ ಹುಡುಕಾಟ ನಡೆಸಲಾಗ್ತಿದೆ.












