• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ ಗಾಂಧಿನಗರದ ಬಿಬಿಎಂಪಿ ಬಹುಮಹಡಿ ಪಾರ್ಕಿಂಗ್

ಕರ್ಣ by ಕರ್ಣ
July 20, 2022
in ಕರ್ನಾಟಕ
0
ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ ಗಾಂಧಿನಗರದ ಬಿಬಿಎಂಪಿ ಬಹುಮಹಡಿ ಪಾರ್ಕಿಂಗ್
Share on WhatsAppShare on FacebookShare on Telegram

ಗಾಂಧಿನಗರ, ಮೆಜೆಸ್ಟಿಕ್ ಸುತ್ತ ಮುತ್ತಲಿನ ಸಂಚಾರದ ಕಿರಿಕಿರಿ ತಪ್ಪಿಸಲು ಬಿಬಿಎಂಪಿ ಬಹುಮಹಡಿಯ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಿದೆ. ಸುಮಾರು 70 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಪಾರ್ಕಿಂಗ್ ಕಟ್ಟಡ ಕಟ್ಟಲಾಗಿದೆ. ಇದು ಈಗ ಲೋಕಾರ್ಪಣೆಗೊಳ್ಳಲು ಸಿದ್ಧಗೊಳ್ಳುತ್ತಿದೆ.

ADVERTISEMENT

ಪಾರ್ಕಿಂಗ್‌ನಿಂದಾಗಿ ಸಂಚಾರ ದಟ್ಟಣೆ ಬೆಂಗಳೂರಿನಲ್ಲಿ ಮಾಮೂಲು. ಅದರಲ್ಲಿ ರಾಜಧಾನಿಯ ಹೃದಯ ಭಾಗ ಗಾಂಧಿನಗರ, ಮೆಜೆಸ್ಟಿಕ್ ಕಡೆ ಕಂಡಕಂಡಲ್ಲಿ ವಾಹನ ನಿಲ್ಲಿಸಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಭಾಗದಲ್ಲಿ ಇದಕ್ಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ಮನವಿಯ ಮೇರೆಗೆ ಬಿಬಿಎಂಪಿ ಬಹುಮಹಡಿ ಪಾರ್ಕಿಂಗ್ ಕಟ್ಟಡ ನಿರ್ಮಿಸಲು ತೀರ್ಮಾನಿಸಿತ್ತು. ಕೊನೆಗೆ ಬೇಡಿಕೆಯಂತೆ ಮಲ್ಟಿ ಫ್ಲೋರ್ಡ್ ಪಾರ್ಕಿಂಗ್ ಬಿಲ್ಡಿಂಗ್ ನಿರ್ಮಾಣವನ್ನೂ ಪಾಲಿಕೆ ಮುಗಿಸಿದೆ. ಆದರೆ ಇದೀಗ ಅದೇ ಪಾಲಿಕೆ ಪಾಲಿಗೆ ತಲೆ ನೋವಾಗಿ ಪರಿಣಮಿಸಿದೆ. ಅಂದಹಾಗೆ, ಈ ಬಹುಮಹಡಿ ಪಾರ್ಕಿಂಗ್ ಕಟ್ಟಡವಿರುವುದು ಫ್ರೀಡಂ ಪಾರ್ಕ್ ಪಕ್ಕದಲ್ಲಿ.

ಟೆಂಡರ್ ಪಡೆಯಲು ಗುತ್ತಿಗೆದಾರರ ಹಿಂದೇಟಿನಿಂದ ಪಾಲಿಕೆಗೆ ಟೆನ್ಷನ್ !

ಬಿಬಿಎಂಪಿ ಅಂದಾಜು 79 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬಹುಮಹಡಿ ಪಾರ್ಕಿಂಗ್ ಬಿಲ್ಡಿಂಗ್ ಅನ್ನು ನಿರ್ಮಾಣ ಮಾಡಿದೆ. ಇಷ್ಟೂ ದೊಡ್ಡ ಮೊತ್ತದಲ್ಲಿ ಕಟ್ಟಡ ನಿರ್ಮಾಣ ಮಾಡಿ ಇದೀಗ ಟೆಂಡರ್ ನೀಡಲಾಗದೆ ಟೆನ್ಷನ್ ನಲ್ಲಿದೆ ಪಾಲಿಕೆ. ಹೌದು, ಪಾಲಿಕೆಯ ಈ ಹೊಸ ಕಟ್ಟಡ ಗುತ್ತಿಗೆ ಪಡೆಯಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಕೋಟಿ ಕೋಟಿ ವೆಚ್ಚದಲ್ಲಿ ಪಾರ್ಕಿಂಗ್ ಕಟ್ಟಡ ನಿರ್ಮಾಣ ಮಾಡಿ, ಕಾಂಟ್ರ್ಯಾಕ್ಟರ್ಸ್ ಇಲ್ಲದೆ ಪರದಾಡುತ್ತಿದೆ ಪಾಲಿಕೆ. ಪ್ರತಿಭಟನೆ, ಸಮಾವೇಶ ಸೇರಿದ ಸಾರ್ವಜನಿಕ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡ ನಿರ್ಮಾಣ ಮಾಡಿದರೂ ಟೆಂಡರ್ ಪಡೆಯಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ.

79 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಹುಮಹಡಿ ಕಟ್ಟಡ !

ಪಾಲಿಕೆ ವತಿಯಿಂದ ಸುಮಾರು 79 ಕೋಟಿ ಹಣದಲ್ಲಿ ನಿರ್ಮಿಸಿರುವ ಈ ಪಾರ್ಕಿಂಗ್ ಕಟ್ಟಡದಿಂದ ಮೆಜೆಸ್ಟಿಕ್, ಗಾಂಧಿನಗರ,  ಫ್ರೀಡಂ ಪಾರ್ಕ್ ಸುತ್ತಮುತ್ತ ಪಾರ್ಕಿಂಗ್ ದಟ್ಟಣೆ ಕಡಿಮೆ ಮಾಡುವ ಯೋಜನೆ ಹಾಕಿಕೊಂಡಿತ್ತು ಪಾಲಿಕೆ. ಕಾರು, ಧ್ವಿಚಕ್ರ ವಾಹನಗಳು ಸೇರಿದಂತೆ ಸುಮಾರು ಒಂದು ಸಾವಿರಕ್ಕೂ ಅಧಿಕ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲಿ ಮಾಡಲಾಗಿದೆ. ಪಾಲಿಕೆಯಿಂದ ವಾರ್ಷಿಕ 4.5 ಕೋಟಿ ಅದಾಯ ನಿರೀಕ್ಷೆ ಇಡಲಾಗಿದೆ. ಹೀಗಾಗಿ ಇಷ್ಟೊಂದು ದೊಡ್ಡ ಮೊತ್ತದ ಆದಾಯ ಗುತ್ತಿಗೆದಾರರಿಗೆ ಇಲ್ಲಿಂದ ಸಿಗುತ್ತೋ ಇಲ್ಲವೋ ಎಂಬುವುದೇ ಅನುಮಾನ. ಹೀಗಾಗಿ ಗುತ್ತಿಗೆದಾರರು ಟೆಂಡರ್ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಪಾರ್ಕಿಂಗ್ ಟೆಂಡರ್ ಕರೆದರೂ ಯಾವುದೇ ಗುತ್ತಿಗೆ ಕಂಪೆನಿಗಳು ಮುಂದೆ ಬಂದಿಲ್ಲ.

ಟೆಂಡರ್ ಆಗದ ಭಾರವನ್ನು ಜನರ ಮೇಲೆ ಹೊರೆಸಲು ಬಿಬಿಎಂಪಿ ಪ್ಲ್ಯಾನ್ !

ಈ ಭಾಗದಲ್ಲಿ ಕೆಲವು ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಕ್ಕದಲ್ಲೇ ಫ್ರೀಡಂ ಪಾರ್ಕ್ ಕೂಡ ಇರುವುದರಿಂದ ಸಾರ್ವಜನಿಕ ವಾಹನಗಳು ನಿಲುಗಡೆಯಾಗುತ್ತಿದೆ. ಇದರಿಂದಾಗಿ ಗುತ್ತಿಗೆದಾರರಿಗೆ ಟೆಂಡರ್ ಪಡೆಯಲು ಮುಳುವಾಯ್ತು ಎಂದು ಹೇಳಲಾಗಿದೆ. ಈ ಉಚಿತ ವಾಹನ ನಿಲುಗಡೆಯಲ್ಲಿ ವಾಹನ ನಿಲ್ಲಿಸಿದರೆ ಶುಲ್ಕ ವಿಧಿಸುವ ಬಹುಮಹಡಿ ಪಾರ್ಕಿಂಗ್‌ಗೆ ಜನ ಬರುವುದಿಲ್ಲ ಎಂಬುವುದು ಗುತ್ತಿಗೆದಾರರ ವಾದ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ‌. ಹೀಗಾಗಿ ಬಿಬಿಎಂಪಿ ಮೆಜೆಸ್ಟಿಕ್, ಗಾಂಧಿನಗರ ಸುತ್ತಮುತ್ತ ರಸ್ತೆಗಳಲ್ಲಿ ನಿಲುಗಡೆಗೆ ಪಾರ್ಕಿಂಗ್ ಶುಲ್ಕ ಹೇರಲು ತೀರ್ಮಾನಿಸಿದೆ. ಈ ಮೂಲಕ ಸದ್ಯಕ್ಕೆ ಶುರುವಾಗಿರುವ ಬಹುಮಹಡಿ ಪಾರ್ಕಿಂಗ್ ಟೆಂಡರ್ ತಲೆ ನೋವನ್ನು ನಿಭಾಯಿಸುವ ಲೆಕ್ಕಾಚಾರ ಹಾಕಿಕೊಂಡಿದೆ ಬಿಬಿಎಂಪಿ.

ವಾಹನ ಕಳ್ಳರ ಕಾಟ !

ಗಾಂಧಿನಗರ ಹಾಗೂ ಫ್ರೀಡಂ ಪಾರ್ಕ್‌ ಸುತ್ತ ಮುತ್ತ ನಕಲಿ ಕೀಲಿ ಕೈ ಬಳಸಿ ದ್ವಿಚಕ್ರ ವಾಹನ ಕಳವು ಮಾಡುವ ಪ್ರಕರಣಗಳು ನಡೆಯುತ್ತಿದ್ದವು. ಬೆಳ್ಳಗ್ಗೆ ರಸ್ತೆ ಬದಿ ವಾಹನ ನಿಲುಗಡೆ ಮಾಡಿ ತೆರಳಿದ್ದರೆ ಸಾಯಂಕಾಲದ ವೇಳೆಗೆ ವಾಹನಗಳು ನಿಲ್ಲಿಸಿದ ಜಾಗದಲ್ಲಿ ಇರುತ್ತಿರಲಿಲ್. ಪೊಲೀಸರಿಗೆ ದೂರು ನೀಡಿದರು ಸಹ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ ಈ ಕಟ್ಟಡವು ವಾಹನ ಸವಾರರ ಬಳಕೆಗೆ ಲಭಿಸಿದ ನಂತರ ವಾಹನಗಳು ಸುರಕ್ಷಿತವಾಗಿರಲಿವೆ.

ವಿದ್ಯುತ್‌ ಉತ್ಪಾದನೆ !

ಕಟ್ಟಡದಲ್ಲಿ ಒಟ್ಟು 556 ಕಾರು ಹಾಗೂ 445 ದ್ವಿಚಕ್ರ ವಾಹನಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದು. ಕಟ್ಟಡದ ಚಾವಣಿಯಲ್ಲಿ ಸೋಲಾರ್‌ ಪ್ಯಾನಲ್‌ಗಳನ್ನು ಅಳವಡಿಸಲಾಗಿದ್ದು ಪ್ರತಿನಿತ್ಯ 500ಕಿಲೋ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುವುದು ಲಿಫ್ಟ್‌ ಹಾಗೂ ಬೆಳಕಿನ ವ್ಯವಸ್ಥೆಗೆ ಇದೇ ವಿದ್ಯುತ್‌ ಬಳಸಲಾಗುವುದು.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಸಂಕಷ್ಟ ಕಾಲದಲ್ಲಿ ಶ್ರೀಲಂಕಾದ ಕೈ ಬಿಟ್ಟ ಚೀನಾ: ಭಾರತ ಆಗಲಿದೆಯೇ ಅದರ ಮಿತ್ರರಾಷ್ಟ್ರ? ಭಾಗ – 1

Next Post

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿಗೆ ಸವಾಲಾಗಿರುವ ಎಎಪಿ ಮತ್ತು ಎಐಎಂಎಐಎಂ

Related Posts

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು
Top Story

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

by ಪ್ರತಿಧ್ವನಿ
April 30, 2026
0

ಬೆಂಗಳೂರು : ವಿಜಯಪುರದಲ್ಲಿ 227.91 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆ.ಎಸ್.ಡಿ.ಎಲ್) ನೂತನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಗೆ...

Read moreDetails
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

April 30, 2026
ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

ರಾಜ್ಯ ಅಬಕಾರಿ ನೀತಿ ಸುಧಾರಣೆ ಕರಡು ಬಿಡುಗಡೆ : ನೂತನ ಮಸೂದೆಯಲ್ಲಿನ ಅಂಶಗಳೇನು..?

April 30, 2026
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
Next Post
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿಗೆ ಸವಾಲಾಗಿರುವ ಎಎಪಿ ಮತ್ತು ಎಐಎಂಎಐಎಂ

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-ಬಿಜೆಪಿಗೆ ಸವಾಲಾಗಿರುವ ಎಎಪಿ ಮತ್ತು ಎಐಎಂಎಐಎಂ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada