ಭಾರತ ತಂಡದ ಮಧ್ಯಮ ವೇಗಿ ಮೊಹಮದ್ ಶಮಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದಾರೆ.
ಮೊಹಮದ್ ಶಮಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಟಿ-20 ಕ್ರಿಕೆಟ್ ಗೆ ಮರಳುವುದು ಮತ್ತಷ್ಟು ದಿನ ತಡವಾಗಲಿದೆ.
ಸೆಪ್ಟೆಂಬರ್ 20ರಿಂದ ಮೊಹಲಿಯಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಶಮಿ ಸ್ಥಾನ ಪಡೆದಿದ್ದರು. ಆದರೆ ಕೋವಿಡ್ ಕಾರಣ ಈ ಸರಣಿಯಿಂದ ಹೊರಬಿದ್ದಿದ್ದು, ಮತ್ತೊಬ್ಬ ವೇಗಿ ಉಮೇಶ್ ಯಾದವ್ ಸ್ಥಾನ ತುಂಬಲಿದ್ದಾರೆ.

2019ರಲ್ಲಿ ಕೊನೆಯ ಬಾರಿಗೆ ಟಿ-20 ಪಂದ್ಯ ಆಡಿರುವ ಮೊಹಮದ್ ಶಮಿ ಟಿ-20 ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ಮೀಸಲು ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.
ಮೊಹಮದ್ ಶಮಿಗೆ ಕೋವಿಡ್ ಲಕ್ಷಣಗಳು ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು, ಆತಂಕಪಡುವ ಅವಶ್ಯಕತೆ ಇಲ್ಲ. ಆದರೆ ಅವರು ಮುನ್ನೆಚ್ಚರಿಕಾ ಕ್ರಮವಾಗಿ ಐಸೋಲೇಷನ್ ನಲ್ಲಿ ಇರಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.