ಬಸ್ ಪಲ್ಟಿ ಆಗಿದ್ದರಿಂದ 27 ಮಂದಿ ಮೃತಪಟ್ಟ ಆಘಾತಕಾರಿ ಘಟನೆ ಚೀನಾದಲ್ಲಿ ಸಂಭವಿಸಿದ್ದು, ಇದು ಈ ವರ್ಷದ ಅತೀ ಭೀಕರ ಅಪಘಾತವಾಗಿದೆ ಎಂದು ಹೇಳಲಾಗಿದೆ.
47 ಪ್ರಯಾಣಿಕರಯನ್ನು ಹೊತ್ತೊಯ್ಯುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದರಿಂದ 27 ಮಂದಿ ಮೃತಪಟ್ಟಿದ್ದು, ಸುಮಾರು ೨೦ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ನೈಋತ್ಯ ಚೀನಾದ ಗ್ರಾಮೀಣ ಭಾಗವಾದ ಗೈಝೌ ಪ್ರಾಂತ್ಯದ ಹೆದ್ದಾರಿಯಲ್ಲಿ ಶನಿವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ದೂರದ ಪರ್ವತ ಪ್ರದೇಶದಲ್ಲಿ ಈ ಅಪಘಾತ ಆಗಿರುವುದರಿಂದ ರಕ್ಷಣೆಗೆ ತುರ್ತು ವೈದ್ಯಕೀಯ ತಂಡ ರವಾನಿಸಲಾಗಿದೆ.