ಈ ಹಿಂದೆ ಬಿಜೆಪಿ ಸರ್ಕಾರ ಬರುವ ಮೊದಲು ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಕೆಗೆ ಉದಾಸೀನ ವಾತಾವರಣ ನಿರ್ಮಾಣವಾಗಿತ್ತು. ಅದರಿಂದಾಗಿ ಬಡ ಹಾಗು ಮಧ್ಯಮ ವರ್ಗದವರು ಹೆಚ್ಚು ತೊಂದರೆಯನ್ನ ಅನುಭವಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಡ್ರೋನ್ ಪ್ರಗತಿ ಉತ್ಸವವನ್ನು ಉದ್ಘಾಟನೆಯಲ್ಲಿ ಹೇಳಿದ್ದಾರೆ.
ಡ್ರೋನ್ ಬಳಕೆ ಬಗ್ಗೆ ದೇಶದಲ್ಲಿ ಅದ್ಬುತ ಪ್ರತಿಕ್ರಿಯೆ ದೊರೆತಿದೆ ಇದು ಉದ್ಯೋಗ ಸೃಷ್ಟಿಯ ಸಾಧ್ಯೆತಗಳನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ನಾವು ಆಡಳಿತದಲ್ಲಿ ಉತ್ತಮ ಮಂತ್ರ ಹಾಗು ಸುಧಾರಣೆಯನ್ನು ತರಲು ಆರಂಭಿಸಿದ್ದೇವೆ. ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಎಂಬ ಮಂತ್ರದೊಂದಿಗೆ ಚಲಿಸುತ್ತಿದ್ದೇವೆ ಸುಲಭ ಜೀವನ ಹಾಗು ಉತ್ತಮ ವ್ಯವಹಾರಕ್ಕೆ ನಾವು ಆದ್ಯತೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಹಿಂದಿನ ಸರ್ಕಾರಗಳು ತಂತ್ರಜ್ಞಾನವನ್ನು ಒಂದು ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದ್ದವು ಮತ್ತು ಅದನ್ನು ಬಡವರ ವಿರೋಧಿ ಎಂಬ ಹಣೆಪಟ್ಟಿಯನ್ನು ಸಹ ಕಟ್ಟಲಾಗಿತ್ತು. ಇದರಿಂದಾಗಿ ಬಡ ಹಾಗು ಮಧ್ಯಮ ವರ್ಗದ ಜನರು ತೀವ್ರ ಸಮಸ್ಯೆಯನ್ನು ಎದುರಿಸಿದ್ದರು ಆದ್ದರಿಂದಾಗಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ತಂತ್ರಜ್ಞಾನ ಬಳಕೆ ಬಹಳಷ್ಟು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.