ಶುಕ್ರವಾರ ಬೆಳಗಿನ ಜಾವ 3:00 ಘಂಟೆ ಸುಮಾರಿಗೆ ವಿಧಿವಶರಾದ ಪ್ರಧಾಣೀ ನರೇಂದ್ರ ಮೋದಿ ತಾಯಿ ಶತಾಯುಷಿ ಹೀರಾ ಬೆನ್ ಮೋದಿ(100) ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಬೆಳ್ಳಗ್ಗೆ 9:30ರ ಸುಮಾರಿಗೆ ಗಾಂಧಿನಗರದಲ್ಲಿರುವ ಚಿತಾಗಾರಾದಲ್ಲಿ ಅಂತ್ಯಸಂಸ್ಕಾರ ನಡೆದಿದ್ದು ಪ್ರಧಾನಿ ಮೋದಿ ಸೇರಿದಂತೆ ಅವರ ಸಹೋದರರು ತಾಯಿಯ ಅಂತಿಮ ಯಾತ್ರೆಯ ವೇಳೆ ಹೆಗಲು ಕೊಟ್ಟಿದ್ದಾರೆ.
ಇನ್ನು ತಾಯಿ ಸಾವಿನ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ನೂರು ವರ್ಷಗಳ ಶ್ರೇಷ್ಠ ಪಯಣ ಮುಗಿದಿದೆ ನಾನು ಅಮ್ಮನ್ಲಿ ತ್ರಿಮೂರ್ತಿಗಳನ್ನ ಕಂಡಿದ್ದೇನೆ. 100ನೇ ವರ್ಷದ ಹುಟ್ಟುಹಬ್ಬದಂದು ಭೇಟಿಯಾದ ಸಮಯದಲ್ಲಿ ನೆನಪಿನಲ್ಲಿ ಉಳಿಯುವಂತಹ ಮಾತನ್ನು ಹೇಳಿದ್ದರು ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬುಧವಾರ ಅಹಮದಬಾದ್ನಲ್ಲಿರುವ ಯು.ಎಸ್.ಮೆಹ್ತಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಪ್ರಧಾನಿ ಮೋದಿಯವರ ತಾಯಿಯ ನಿಧನಕ್ಕೆ ರಾಷ್ಟ್ರದ್ಯಂತ ಅನೇಕರು ಕಂಬನಿ ಮಿಡಿದಿದ್ದಾರೆ.