ಮಹಿಳಾ ಸಬಲೀಕರಣ ವಿಚಾರಚಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಈ ಹಿಂದೆ ಮಹಿಳೆಯರ ಮದುವೆಯ ವಯಸ್ಸು 18 ಇತ್ತು. ಇದು ಎಷ್ಟೋ ಹೆಣ್ಣು ಮಕ್ಕಳ ಅಧ್ಯಯನಕ್ಕೆ ತೊಡಕಾಗಿತ್ತು. ಅದಕ್ಕಾಗಿಯೇ ನಾವು ಮದುವೆಯ ವಯಸ್ಸನ್ನು 21 ಕ್ಕೆ ಹೆಚ್ಚಿಸಲು ಮುಂದಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.
ಉತ್ತರ ಪ್ರದೇಶದ ಪ್ರಯಾಹ್ರಾಜ್ನಲ್ಲಿ ಇಂದು ಬೃಹತ್ ಮಹಿಳಾ ಸಮಾವೇಶದಲ್ಲಿ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಒಂದು ಸಾವಿರ ಕೋಟಿ ರೂ ಸಹಾಯಧನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಹಿಳೆಯರ ಮದುವೆಯ ವಯಸ್ಸನ್ನು ಹೆಚ್ಚಿಸುವ ಮತ್ತು ಪುರುಷರಿಗೆ ಸರಿಸಮಾನವಾಗಿ ನೋಡಲು ಈ ನಿಯಮ ಜಾರಿಗೆ ತಂದಿದ್ದೇವೆ ಎಂದು ಮೋದಿ ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.
ಐದು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಮಾಫಿಯಾ ರಾಜ್ ಮತ್ತು ಗೂಂಡಾರಾಜ್ ಇತ್ತು. ಅದರಿಂದ ಹೆಚ್ಚು ಬಳಲಿದವರು ಮಹಿಳೆಯರು. ಆದರೆ ನೀವು (ಮಹಿಳೆಯರು) ಏನನ್ನೂ ಹೇಳಲು ಸಾಧ್ಯವಾಗಲಿಲ್ಲ. ಪೊಲೀಸ್ ಠಾಣೆಗಳಿಗೆ ಹೋದರೆ ಅತ್ಯಾಚಾರಿಗಳು ಮತ್ತು ಅಪರಾಧಿಗಳ ಪರವಾಗಿ ದೂರವಾಣಿ ಕರೆ ಬರುತ್ತಿತ್ತು. ಆದರೆ ಯೋಗಿ ಕ್ರಿಮಿನಲ್ಗಳನ್ನು ಬಗ್ಗು ಬಡಿದಿದ್ದಾರೆ ಎಂದರು.

ಉತ್ತರ ಪ್ರದೇಶದ ಮಹಿಳೆಯರಿಗೆ ನಾನು ಮೊದಲೇ ಹೇಳಿದ್ದೆ. ಈಗ ಅಧಿಕಾರ ಉಳಿಸಿಕೊಳ್ಳಲು ಪ್ರಧಾನಿ ಮೋದಿ ಕೂಡ ಮಹಿಳೆಯರ ಮುಂದೆ ಮಂಡಿಯೂರಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಪ್ರಧಾನಿ ಭಾಷಣದ ನಂತರ ಕುಟುಕಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಅವರು ಇದನ್ನು ಏಕೆ ಘೋಷಿಸಲಿಲ್ಲ? ಈಗ ಏಕೆ? ಅದು ಚುನಾವಣೆಗೆ ಮುನ್ನ? ನಮ್ಮ ‘ಲಡ್ಕಿ ಹೂ, ಲಡ್ ಸಕ್ತಿ ಹೂ’ ಘೋಷಣೆಯೊಂದಿಗೆ ಮಹಿಳೆಯರು ಎಚ್ಚೆತ್ತುಕೊಂಡಿದ್ದಾರೆ ಎಂದಿದ್ದಾರೆ.






