ಓಮೈಕ್ರಾನ್ ನಿಂದ ಎಚ್ಚೆತ್ತುಕೊಂಡ ಜನರ ಪೈಕಿ ಲಸಿಕೆ ಪಡೆಯುವಲ್ಲಿ ಮಧ್ಯ ವಯಸ್ಕರಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಮತ್ತೊಂದು ಸಾಧನೆಯ ಹಂತ ತಲುಪಿದೆ. 45 ರಿಂದ 59 ವರ್ಷದ ಮಧ್ಯ ವಯಸ್ಕರು ರಾಜ್ಯದಲ್ಲಿ ನೂರಕ್ಕೆ ನೂರರಷ್ಟು ಮೊದಲ ಡೋಸ್ ಲಸಿಕೆ ಪಡೆದು ದಾಖಲೆ ಬರೆದಿದ್ದಾರೆ.
45-59 ವಯಸ್ಸಿನ ಜನರೇ ರಾಜ್ಯದಲ್ಲಿ ಅತಿ ಹೆಚ್ಚು ಲಸಿಕೆ ಪಡೆದವರು
ಓಮೈಕ್ರಾನ್ ಆಗಮನ ಈಗ ಮತ್ತೊಂದು ಸುತ್ತಿನ ಭೀತಿ ಸೃಷ್ಟಿಸಿದೆ. ರಾಜ್ಯದಲ್ಲಿ 19 ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಹೀಗಾಗಿ ಆತಂಕ ಇಮ್ಮಡಿಯಾಗಿದೆ. ಇದರ ನಡುವೆ ನಿಟ್ಟುಸಿರು ಬಿಡುವ ಬೆಳವಣಿಗೆಯೊಂದು ಆಗಿದೆ. ರಾಜ್ಯದಲ್ಲಿ ಒಂದು ಹಂತದ ವಯಸ್ಕರಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಮೊದಲ ಡೋಸ್ ಲಸಿಕೆ ಹಂಚಿಕೆಯಾಗಿದೆ. ಹೌದು, ಯುವ ಜನರಲ್ಲ, ವಯಸ್ಕರಲ್ಲಿ 45 – 59 ವರ್ಷದವರಲ್ಲಿ 100% ಮೊದಲ ಡೋಸ್ ಲಸಿಕೆ ಹಂಚಿಕೆಯಾಗಿದೆ. ಅಲ್ಲದೇ ಎರಡನೇ ಡೋಸ್ ಲಸಿಕೆ ಪಡೆಯುವಲ್ಲೂ ಇದೇ ವಯೋಮಿತಿಯ ಜನರೇ ಮುಂಚೂಣಿಯಲ್ಲಿದ್ದಾರೆ.

1 ಕೋಟಿ 20 ಲಕ್ಷ ಮಂದಿಗೂ ಲಸಿಕೆ ಹಂಚಿ ಸಾಧನೆಗೈದ ಕರ್ನಾಟಕ.
ಲಸಿಕೆ ಪಡೆಯಲು ರಾಜ್ಯದಲ್ಲಿ 45 ರಿಂದ 59 ವರ್ಷದ 1 ಕೋಟಿ 20 ಲಕ್ಷ ಜನ ಅರ್ಹರರಿದ್ದಾರೆ. ಈ ಪೈಕಿ ಅಷ್ಟೂ ಮಂದಿ ಎಂದರೆ ಶೇ. 100ರಷ್ಟು ಮಂದಿಗೂ ಲಸಿಕೆ ಹಂಚಿಕೆ ಮಾಡಲಾಗಿದೆ. ಇದುವರೆಗೂ ಕೂಡ ದೇಶದ ಯಾವುದೇ ರಾಜ್ಯದಲ್ಲಿ ಈ ವಯೋಮಿತಿಯ ಜನರಿಗೆ ನೂರಕ್ಕೆ ನೂರರಷ್ಟು ಪ್ರಮಾಣದಲ್ಲಿ ಮೊದಲ ಡೋಸ್ ಲಸಿಕೆ ಹಂಚಿಕೆ ಮಾಡಲಾಗಿಲ್ಲ. ಇದೇ ಮೊದಲ ಬಾರಿಗೆ ಕರ್ನಾಟಕ ಆ ಸಾಧನೆ ಮಾಡಿ, ಕೊರೋನಾ ಹೋರಾಟದಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ, ಎರಡನೇ ಡೋಸ್ ಲಸಿಕೆ ಪಡೆಯುವಲ್ಲಿಯೂ ಕೂಡ 45 – 59 ವಯೋಮಿತಿಯವರೇ ಮುಂದಿದ್ದಾರೆ. ರಾಜ್ಯದ 81% ರಷ್ಟು ಪ್ರಮಾಣದಲ್ಲಿ 45 ರಿಂದ 59 ವಯಸ್ಸಿನ ಮಂದಿ ಲಸಿಕೆ ಪಡೆದಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.
6 ಲಕ್ಷ ವೃದ್ಧರು, 15 ಲಕ್ಷ ಯುವಜನರು ಮೊದಲ ಡೋಸ್ ಪಡೆಯಲು ಬಾಕಿ.
ಇನ್ನು 6 ಲಕ್ಷ ವೃದ್ಧರು, 15 ಲಕ್ಷಕ್ಕೂ ಅಧಿಕ 18 ರಿಂದ 44 ವಯಸ್ಕರು ಇನ್ನೂ ಒಂದೇ ಒಂದು ಡೋಸ್ ಲಸಿಕೆ ಪಡೆದುಕೊಂಡಿಲ್ಲ. 18 – 44 ವಯಸ್ಸಿನ 3.01 ಕೋಟಿ ಅರ್ಹರಿದ್ದಾರೆ. ಇದರಲ್ಲಿ 15 ಲಕ್ಷ ಫಲಾನುಭವಿಗಳು ಲಸಿಕೆ ಪಡೆಯುವುದಿದೆ. 45 – 59 ಮಧ್ಯ ವಯಸ್ಸಿನ 1.12 ಕೋಟಿ ಅರ್ಹರಿದ್ದು, ಶೇ. 100ರಷ್ಟು ಲಸಿಕೆ ಹಂಚಿಕೆಯಾಗಿದೆ. 60 ವರ್ಷ ಮೇಲ್ಪಟ್ಟ 76 ಲಕ್ಷ ಜನರಿದ್ದು, ಈ ಪೈಕಿ ಇನ್ನೂ 6 ಲಕ್ಷ ವೃದ್ಧರು ಲಸಿಕೆ ಪಡೆಯುವುದು ಬಾಕಿ ಇದೆ. ಈ ಮೂಲಕ ಒಟ್ಟು ರಾಜ್ಯದಲ್ಲಿ ಇನ್ನೂ 21 ಲಕ್ಷ ಮಂದಿ ಒಂದೇ ಒಂದು ಡೋಸ್ ಲಸಿಕೆಯನ್ನೇ ಪಡೆದಿಲ್ಲ. ಒಟ್ಟಾರೆ ರಾಜ್ಯದಲ್ಲಿ 4 ಕೋಟಿ 81 ಲಕ್ಷ ಮಂದಿ ಲಸಿಕೆ ಪಡೆಯಲು ಅರ್ಹ ಫಲಾನುಭವಿಗಳಿದ್ದಾರೆ. ಈ ಪೈಕಿ ಇನ್ನೂ 40 ಲಕ್ಷ ಮಂದಿ ಎರಡನೇ ಡೋಸ್ ಪಡೆದುಕೊಳ್ಳಲು ಬಾಕಿ ಇದ್ದಾರೆ. ಆದರೆ ಒಟ್ಟಾರೆ ಲಸಿಕಾ ದತ್ತಾಂಶಗಳನ್ನು ನೋಡುವುದಾದರೆ ರಾಜ್ಯದಲ್ಲಿ 96% ರಷ್ಟು ಮೊದಲ ಡೋಸ್ ಹಾಗೂ 76% ಎರಡನೇ ಡೋಸ್ ಲಸಿಕೆ ಹಂಚಿಕೆಯಾ