• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಉಪ ಚುನಾವಣೆ ಕಾವು ಇನ್ನೂ ಆರಿಲ್ಲ: ಖಾಲಿಯಾಗಲಿರುವ 25 MLC ಸ್ಥಾನಗಳಿಗಾಗಿ ಪೈಪೋಟಿ ಶುರು, ಗ್ರಾಪಂ ಸದಸ್ಯರಿಗೆ ಭಾರಿ ಡಿಮ್ಯಾಂಡ್‌!

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
November 9, 2021
in ಕರ್ನಾಟಕ, ದೇಶ
0
ಉಪ ಚುನಾವಣೆ ಕಾವು ಇನ್ನೂ ಆರಿಲ್ಲ: ಖಾಲಿಯಾಗಲಿರುವ 25 MLC ಸ್ಥಾನಗಳಿಗಾಗಿ ಪೈಪೋಟಿ ಶುರು, ಗ್ರಾಪಂ ಸದಸ್ಯರಿಗೆ ಭಾರಿ ಡಿಮ್ಯಾಂಡ್‌!
Share on WhatsAppShare on FacebookShare on Telegram

ಉಪ ಚುನಾವಣೆಯ ಕಾವು ಇನ್ನೂ ಹಾಗೆಯೇ ಇದೆ. ಆದರೀಗ ಮತ್ತೆ ಚುನಾವಣೆಯ ಖದರು ಶುರುವಾಗಿದೆ. ಇದಕ್ಕಾಗಿ ಮೂರೂ ಪಕ್ಷಗಳು ಡಿಸೆಂಬರ್‌ ನಲ್ಲಿ ಖಾಲಿಯಾಗಲಿರುವ 25 ವಿಧಾನ ಪರಿಷತ್‌ (MLC) ಸ್ಥಾನಗಳ ಮೇಲೆ ಕಣ್ಣು ಹಾಕಿವೆ.

ADVERTISEMENT

ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗಿದ್ದು , ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ತಂತ್ರ ಹೆಣೆಯುತ್ತಿದ್ದಾರೆ. ಪ್ರತಿ 6 ವರ್ಷಕ್ಕೊಮ್ಮೆ 25 ವಿಧಾನ ಪರಿಷತ್‌ ಸ್ಥಾನ ಖಾಲಿಯಾಗುತ್ತವೆ. ಡಿಸೆಂಬರ್‌ನಲ್ಲಿ 25 ಎಂಎಲ್‌ಸಿಗಳ ಅವಧಿ ಮುಗಿಯಲಿದೆ.

ಗ್ರಾಪಂ ಸದಸ್ಯರಿಗೆ ಡಿಮ್ಯಾಂಡು

ನಿವೃತ್ತಿಯಾಗಲಿರುವ 25 ಎಂಎಲ್‌ಸಿಗಳು ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ಚುನಾಹಿತರಾದವರು. ಅಂದರೆ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ಸದಸ್ಯರು ಈ ಚುನಾವಣೆಯಲ್ಲಿ ಮತದಾರರು. ಆದರೆ ಈ ಸಲ ಜಿಪಂ, ತಾಪಂಗಳಿಗೆ ಇನ್ನೂ ಚುನಾವಣೆ ನಡೆದಿಲ್ಲ. ಹಲವಾರು ನಗರಸಭೆ ಗಳಿಗೂ ಚುನಾವಣೆ ತಡೆ ಹಿಡಿಯಲಾಗಿದೆ.

ಹೀಗಾಗಿ ಗ್ರಾಮ ಪಂಚಾಯತಿ ಸದಸ್ಯರೇ ಈ ಸಲದ ಚುನಾವಣೆಯಲ್ಲಿ ನಿರ್ಣಾಯಕ. ಅಧಿಕೃತವಾಗಿ ಗ್ರಾಪಂ ಸದಸ್ಯರು ಯಾವುದೇ ಪಕ್ಷದ ಚಿಹ್ನೆಯಿಂದ ಗೆದ್ದವರಲ್ಲ. ಹೀಗಾಗಿ ಇವರಿಗೆ ಡಿಮ್ಯಾಂಡು ಬಂದಿದೆ. ದೊಡ್ಡ ದೊಡ್ಡ ನಾಯಕರು ಈಗ ಗ್ರಾಪಂ ಸದಸ್ಯರ ಓಲೈಕೆಯಲ್ಲಿ ತೊಡಗಲಿದ್ದಾರೆ.

ಈಗಿರುವ ಮ್ಯಾಟ್ರಿಕ್ಸ್‌

ವಿಧಾನ ಪರಿಷತ್‌ ಸದಸ್ಯರ ಒಟ್ಟು ಸಂಖ್ಯೆ 75 ಇದರಲ್ಲಿ ಬಿಜೆಪಿಯ 32 ಸದಸ್ಯರಿದ್ದರೂ, ಸಂಪೂರ್ಣ ಬಹುಮತವಿಲ್ಲ. ಆದರೂ ಅದು ಜೆಡಿಎಸ್‌ ನೆರವಿನಿಂದ ಹಲವಾರು ಮಸೂದೆಗಳನ್ನು ಪಾಸು ಮಾಡಿಸಿಕೊಂಡಿದೆ. ಕಾಂಗ್ರೆಸ್‌ನ 29 ಮತ್ತು ಜೆಡಿಎಸ್‌ನ 12 ಸದಸ್ಯರಿದ್ದಾರೆ. ಸಭಾಪತಿಯಲ್ಲದೇ ಒಬ್ಬ ಪಕ್ಷೇತರ ಸದಸ್ಯರಿದ್ದಾರೆ.

ಬಿಜೆಪಿ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಬಹುಮತ ಪಡೆಯಲು ಭಾರಿ ಯತ್ನ ನಡೆಸಿದೆ.

ನಿವೃತ್ತಿ ಆಗಲಿರುವ 25 ಎಂಎಲ್‌ಸಿಗಳ ಪೈಕಿ ಈಗ ಹಾನಗಲ್‌ನಿಂದ ಎಂಎಲ್ಎ‌ ಗೆದ್ದಿರುವ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಕೂಡ ಒಬ್ಬರು. ಶುರುವಾಯಿತು ತಂತ್ರಗಾರಿಕೆ ನಿನ್ನೆ ಭಾನುವಾರ ಕಾಂಗ್ರೆಸ್‌ ನಾಯಕರು ಇದೇ ವಿಷಯಕ್ಕೆ ತೀವ್ರ ಚರ್ಚೆ ನಡೆಸಿದ್ದಾರೆ. ಈಗ ನಿವೃತ್ತಿ ಆಗಲಿರುವ ಸದಸ್ಯರ ಸ್ಥಾನಗಳನ್ನು ಉಳಿಸಿಕೊಳ್ಳಲು ಮತ್ತು ಬಿಜೆಪಿಗೆ ಪರಿಷತ್‌ನಲ್ಲಿ ಬಹುಮತ ಸಿಗದಂತೆ ಮಾಡಲು ತೀವ್ರ ಕಸರತ್ತು ನಡೆಸಿದ್ದಾರೆ.

ಬಿಜೆಪಿಯ ರಾಜ್ಯಯಾತ್ರೆ

ಬಿಜೆಪಿ ನಾಲ್ಕು ತಂಡಗಳನ್ನು ರಚಿಸಿದ್ದು ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ಮತ್ತು ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ್‌ ಈ ತಂಡಗಳ ಮುಂದಾಳುಗಳು. ನವೆಂಬರ್‌ 19ರಿಂದ ನಡೆಯುವ ಈ ಯಾತ್ರೆಗೆ ʼಜನ ಸ್ವರಾಜ್ಯʼ ಎಂದು ಕರೆಯಲಾಗಿದೆ.

ಜೆಡಿಎಸ್‌ನಿಂದ ಮೂವರು ಔಟ್‌?

ಜೆಡಿಎಸ್‌ನಿಂದ ಗೆದ್ದಿರುವ ಮೂವರು ಎಂಎಲ್‌ಸಿಗಳು ಈಗಾಗಲೇ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಸಂದೇಶ್‌ ನಾಗರಾಜ್‌, ಕಾಂತರಾಜು (ಬೆಮೆಲ್)‌ ಮತ್ತು ಸಿ.ಆರ್‌. ಮನೋಹರ್‌ ಜೆಡಿಎಸ್‌ ತೊರೆಯುವ ಸಾಧ್ಯತೆ ಇದೆ. ಸಂದೇಶ್‌ ನಾಗರಾಜ್‌ ಮತ್ತು ಮನೋಹರ್‌ ಬಿಜೆಪಿ ಸೇರುವ ಯತ್ನ ನಡೆಸಿದ್ದಾರೆ.

ಒಟ್ಟಿನಲ್ಲಿ, ಬೈ ಎಲೆಕ್ಷನ್‌ ಬಿಸಿ ಇನ್ನೂ ಆರಿಲ್ಲ. ಈಗ ಎಂಎಲ್‌ಸಿ ಚುನಾವಣೆ ಕಾವು ಏರತೊಡಗಿದೆ ಈ ಚುನಾವಣೆಯಲ್ಲಿ ಪ್ರ,ಮುಖ ಮತದಾರರಾದ ಗ್ರಾಪಂ ಸದಸ್ಯರಿಗೆ ಭರ್ಜರಿ ಬೇಡಿಕೆ ಬಂದಿದೆ.

Tags: BJPCongress PartyCovid 19MLCಉಪ ಚುನಾವಣೆಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ಗ್ರಾಪಂ ಸದಸ್ಯನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಅಪ್ಪು ಅಗಲಿ ಇಂದಿಗೆ 12ನೇ ದಿನ! ಪ್ಯಾಲೇಸ್ ಗ್ರೌಂಡ್ ನಲ್ಲಿ ಅಭಿಮಾನಿಗಳಿಗೆ ಅನ್ನಸಂತರ್ಪಣೆ, ಹರಿದು ಬಂದ ಜನಸಾಗರ!

Next Post

ರಂಗ ಭೂಮಿ ಕಾಲವಿದರಾದ ಶ್ರೀ ಕೋಳ್ಯೂರು ರಾಮಚಂದ್ರ ಅವರಿಗೆ 90 ವರ್ಷ ತುಂಬಿದ ಹಿನ್ನೆಲೆ ಅವರ ಬಗ್ಗೆ ಗೌರವದ ಮಾತುಗಳನ್ನಾಡಿದ Purushottama Bilimale

Related Posts

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌
Top Story

ಇದೇ ಲಾಸ್ಟ್‌ ಇನ್ಮುಂದೆ ಜಿಬಿಎ ಎಲೆಕ್ಷನ್ ಗಡುವು ವಿಸ್ತರಿಸಲ್ಲಾ : ಸರ್ಕಾರಕ್ಕೆ ಸುಪ್ರೀಂ ಖಡಕ್‌ ವಾರ್ನ್..!‌

by ಪ್ರತಿಧ್ವನಿ
May 20, 2026
0

ಬೆಂಗಳೂರು : ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ (SEC) ಬೆಂಗಳೂರಿನ ಐದು ನಗರ ಪಾಲಿಕೆಗಳ ಚುನಾವಣೆಯನ್ನು ಪೂರ್ಣಗೊಳಿಸಲು ಅಂತಿಮ ಅವಕಾಶವಾಗಿ ಆಗಸ್ಟ್ 31ರವರೆಗೆ ಹೆಚ್ಚುವರಿ ಕಾಲಾವಕಾಶ...

Read moreDetails
ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

ಕೆಡಿ ಗಳಿಸಿದ್ದು 23 ಕೋಟಿನಾ? ಇದು ಗೆಲುವಾ, ಸೋಲಾ?

May 20, 2026
ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

ಜೂ.ಎನ್‌ಟಿಆರ್‌ ಬರ್ತ್‌ಡೇಗೆ ಬಂತು ಡ್ರ್ಯಾಗನ್‌ ಗ್ಲಿಂಪ್ಸ್!‌ : ಚರ್ಚೆಗೆ ಕಾರಣವಾಯ್ತು ಪ್ರಶಾಂತ್‌ ನೀಲ್‌ ಸಿನಿಮಾ

May 20, 2026
ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

ಕೈ ಕೊಟ್ಟ ಹುಡುಗಿ : ಹೈಟೆನ್ಷನ್‌ ಕಂಬ ಹತ್ತಿ ಪ್ರಿಯತಮನ ರಂಪಾಟ..!

May 20, 2026
“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

“Welcome to Rome, My Friend ಎಂದ ಮೆಲೋನಿ : ಮೋದಿಗೆ ಇಟಲಿ ಪ್ರಧಾನಿ ಮಾಡಿದ ಪಾಠವೇನು..?

May 20, 2026
Next Post
ರಂಗ ಭೂಮಿ ಕಾಲವಿದರಾದ  ಶ್ರೀ ಕೋಳ್ಯೂರು ರಾಮಚಂದ್ರ  ಅವರಿಗೆ 90 ವರ್ಷ ತುಂಬಿದ ಹಿನ್ನೆಲೆ ಅವರ ಬಗ್ಗೆ ಗೌರವದ ಮಾತುಗಳನ್ನಾಡಿದ  Purushottama Bilimale

ರಂಗ ಭೂಮಿ ಕಾಲವಿದರಾದ ಶ್ರೀ ಕೋಳ್ಯೂರು ರಾಮಚಂದ್ರ ಅವರಿಗೆ 90 ವರ್ಷ ತುಂಬಿದ ಹಿನ್ನೆಲೆ ಅವರ ಬಗ್ಗೆ ಗೌರವದ ಮಾತುಗಳನ್ನಾಡಿದ Purushottama Bilimale

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada