ಚನ್ನಪಟ್ಟಣ ಉಪ ಚುನಾವಣೆ (Channapattana abi election) ಕಣದಲ್ಲಿ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (Shivalingegowda) ಹೊಸ ಬಾಂಬ್ ಸಿಡಿಸಿದ್ದಾರೆ. ಕೆಲವು ದಿನಗಳ ಕಾಲ ತೆರೆಮರೆಗೆ ಸರಿದಿದ್ದ ಸಿಎಂ ಬದಲಾವಣೆ ಚರ್ಚೆ ಮತ್ತೆ ಮುನ್ನಲೆಗೆ ಬರುವಂತೆ ಮಾಡಿದ್ದಾರೆ.

ಚನ್ನಪಟ್ಟಣದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡುವ ವೇಳೆ , ಈ ಉಪಚುನಾವಣೆ ಡಿಕೆ ಶಿವಕುಮಾರ್ (Dk shivakumar) ರನ್ನ ಸಿಎಂ ಮಾಡುವ ಚುನಾವಣೆಯಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಡಿಕೆ ಕೈ ಬಿಡಬೇಡಿ ಎಂದಿದ್ದಾರೆ.
ಈ ಉಪಚುನಾವಣೆ ಡಿಕೆ ಶಿವಕುಮಾರ್ ಅವರ ನಾಯಕತ್ವವನ್ನು ಸಾಬೀತು ಪಡಿಸುವ ಚುನಾವಣೆಯಾಗಿದೆ. ಹೀಗಾಗಿ ಚನ್ನಪಟ್ಟಣದ ಮತದಾರರು ಡಿಕೆ ಶಿವಕುಮಾರ್ ರ ಕೈ ಬಲಪಡಿಸಬೇಕು ಎಂಬ ಹೇಳಿಕೆ ನೀಡಿದ್ದು, ಕಾಂಗ್ರೆಸ್ (Congress) ಪಾಳಯದಲ್ಲಿ ಮತ್ತೆ ಸಿಎಂ ಬದಲಾವಣೆ ಚರ್ಚೆ ಮುನ್ನೆಲೆಗೆ ಬರುವಂತೆ ಮಾಡಿದೆ.