ದೀಪಾವಳಿ ಹಬ್ಬದ (Deepavali festival) ಸನಿಹದಲ್ಲಿ ತಮಿಳುನಾಡಿನ ಡಿಸಿಎಂ ಉದಯನಿಧಿ ಸ್ಟಾಲಿನ್ (Udayanidhi Stalin) ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಹೀಗೆ ಕೆಲ ತಿಂಗಳ ಹಿಂದೆ, ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿದ್ದ ಉದಯನಿಧಿ ಸ್ಟಾಲಿನ್ ಈಗ ದಾರಿಗೆ ಬಂದಂತಿದೆ.
ಹೀಗೆ ಡಿಎಂಕೆ (DMK) ಪಕ್ಷದ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್ ತಮಿಳಿಗರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಎನ್ನುವ ಮೂಲಕ ತಮಿಳಿಗರು ಉಪ್ಪೇರಿಸುವಂತೆ ಮಾಡಿದ್ದಾರೆ.
ಉದಯನಿಧಿ ಸ್ಟಾಲಿನ್ ಈ ಹೇಳಿಕೆ ತೀವ್ರ ಚರ್ಚೆಗೆ ದಾರಿ ಮಾಡಿ ಕೊಟ್ಟಿರುವುದಕ್ಕೆ ಕಾರಣವಿದೆ. ಡಿಎಂಕೆ ನಾಯಕ ಕರುಣಾನಿಧಿ (Karunanidhi) ಕಾಲದಿಂದ ಇಲ್ಲಿಯವರೆಗೂ ಯಾವುದೇ ನಾಯಕರು ಕೂಡ ದೀಪಾವಳಿ ಹಬ್ಬಕ್ಕೆ ಅಥವಾ ಇನ್ಯಾವುದೇ ಹಿಂದೂ ಹಬ್ಬಗಳಿಗೆ ಶುಭಾಶಯ ಕೋರಿರುವ ನಿದರ್ಶನಗಳಿಲ್ಲ.
ಆದರೆ ಇದೀಗ ಪಕ್ಷದ ಈ ನಿಯಮ ಸಿದ್ಧಾಂತವನ್ನು ಮುರಿದು ಉದಯನಿಧಿ ಸ್ಟಾಲಿನ್ ತಮಿಳು ನಾಡಿನ ಜನರಿಗೆ ದೀಪಾವಳಿ ಹಬ್ಬದ ಶುಭಾಶಯಗಳು ಅಚ್ಚರಿಗೆ ಕಾರಣವಾಗಿದೆ.