
ಮಹಾರಾಷ್ಟ್ರ:ಚಾಕಲೇಟ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಚಾಕಲೇಟ್ ತಿನ್ನಲು ಇಷ್ಟಪಡುತ್ತಾರೆ ಆದರೆ ಇಲ್ಲೊಬ್ಬರಿಗೆ ಚಾಕಲೇಟ್ ತಿನ್ನುವಾಗ ಹುಳ (ಕೀಟ) ಕಂಡುಬಂದಿದ್ದು, ಅದರ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಕ್ಷಯ್ ಜೈನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕ್ಯಾಡ್ಬರಿ ಚಾಕೊಲೇಟ್ ತಿನ್ನುವಾಗ ನನಗೆ ಕೀಟ ಕಂಡುಬಂದಿದೆ. ನಾನು ಹಲವು ವರ್ಷಗಳಿಂದ ಈ ಚಾಕಲೇಟ್ ತಿನ್ನುತ್ತಾ ಬಂದಿದ್ದೇನೆ.ಈ ರೀತಿ ಅನುಭವ ಯಾವತ್ತೂ ಆಗಿರಲಿಲ್ಲ. ಇದೀಗ ಈ ಕೆಟ್ಟ ಅನುಭವದಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.
Found a worm-like insect in my Cadbury Temptation Rum! I've been a loyal customer for years, but this is worst experience ever. Highly disappointed @CadburyWorld please address this! #Pune@DairyMilkIn @MDLZ @Cadbury5Star #chocolate #Cadbury #FoodSafety #Disappointed pic.twitter.com/lAm5ZQDUFA
— Akshay Jain (@AkshayJainIYC) September 19, 2024
ಇವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಕ್ಯಾಡ್ಬರಿ, ನಾವು ಇಲ್ಲಿಯನತಕ ಉನ್ನತ ಗುಣಮಟ್ಟವನ್ನು ಕಾಯ್ದಿರಿಸಿಕೊಂಡು ಬಂದಿದ್ದೇವೆ. ಇದೇ ರೀತಿ ಗುಣಮಟ್ಟವನ್ನು ಮುಂದುವರೆಸಿಕೊಂಡು ಹೋಗುತ್ತೇವೆ ಆದರೆ ನಿಮಗಾದ ಅನುಭವಕ್ಕೆ ನಾವು ವಿಷಾದಿಸುತ್ತೇವೆ.
ಹಾಗೆಯೇ ದಯವಿಟ್ಟು ನಿಮ್ಮ ಸಂಪೂರ್ಣ ಹೆಸರು, ವಿಳಾಸ, ಫೋನ್ ನಂಬರ್ ಮತ್ತು ಚಾಕಲೇಟ್ ಖರೀದಿಸಿದ ವಿವರಗಳನ್ನು ನಮಗೆ ನೀಡಿ.ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.ಇನ್ನು ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮತ್ತೋರ್ವ ವ್ಯಕ್ತಿ, ನನಗೂ ಇದೇ ರೀತಿ ಆಗಿದೆ.ಡೈರಿ ಮಿಲ್ಕ್‌ನಲ್ಲಿ ಹುಳು ಕಂಡುಬಂದಿತ್ತು. ಆದ್ದರಿಂದ ಯಾರೂ ಕ್ಯಾಡ್ಬರಿ ಚಾಕೊಲೇಟ್‌ಗಳನ್ನು ಸೇವಿಸಬೇಡಿ ಎಂದು ಹೇಳಿದ್ದಾರೆ.