
ಹಾವೇರಿ: ಊಟ ಮಾಡಿ ರಸ್ತೆಯ ಪಕ್ಕದಲ್ಲಿ ಮಲಗಿದವರ ಮೇಲೆ ರೋಡ್ ರೋಲರ್ (Road Roller) ಹರಿದ ಪರಿಣಾಮ ಇಬ್ಬರು ದಿನಗೂಲಿ ಯುವ ಕಾರ್ಮಿಕರು ಸ್ಥಳದಲ್ಲೇ ದುರ್ಮರಣವನ್ನಪಿದ ಘಟನೆ ನಡೆದಿದೆ. ಹಾವೇರಿ (Haveri) ಜಿಲ್ಲೆಯ ಬ್ಯಾಡಗಿ (Badagi) ತಾಲೂಕಿನ ಮೋಟೆಬೆನ್ನೂರು (Motebennur) ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದ್ದು, ಸಿದ್ದು (24) ಮತ್ತು ಪ್ರೀತಮ್ (25) ರೂಲರ್ ಕೆಳಗೆ ಸಿಕ್ಕಿ ಸಾವನ್ನಪ್ಪಿದ ದುರದೃಷ್ಟವಂತರು ಎನ್ನಲಾಗಿದೆ.

ಮೊಟೇಬೆನ್ನೂರಿನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರಾದ ಸಿದ್ದು ಮತ್ತು ಪ್ರೀತಮ್ ಇಬ್ಬರು ಮಾಧ್ಯಾಹ್ನದ ವೇಳೆ ಊಟ ಮಾಡಿದ ನಂತರ ರೋಲರ್ ಪಕ್ಕದಲ್ಲಿ ಮಲಗಿದ್ದರು. ವಿಷಯ ತಿಳಿದ ತಕ್ಷಣ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ, ದುರಂತದಲ್ಲಿ ಸಾವಿಗಿಡಾದವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಬ್ಯಾಡಗಿ ಪೊಲೀಸರು ದೂರು ದಾಖಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ.