
ಉತ್ತರ ಪ್ರದೇಶ : ಆಸ್ಪತ್ರೆಯ ಡೆಪ್ಯುಟಿ ಸಿಎಂಓ ಸೇವಿಸುವ ಆಹಾರಕ್ಕೆ ಟಿಬಿ ಪೇಶೆಂಟ್ ನ ಕಫವನ್ನ ಮಿಶ್ರಣ ಮಾಡಲು ದುಷ್ಕರ್ಮಿಗಳು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಾಗ್ಪಾತ್ ಹಾಸ್ಪಿಟಲ್ ನಲ್ಲಿ ನಡೆದಿದೆ.

ಈ ಬಗ್ಗೆ ಆಡಿಯೋವೊಂದು ಸಿಕ್ಕಿದ್ದು , ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಆಸ್ಪತ್ರೆಯ ಡೆಪ್ಯುಟಿ ಸಿಇಓ ಯಶವೀರ್ ಸಿಂಗ್ ತಮಗೆ ಹಾಗೂ ಕುಟುಂಬಸ್ಥರಿಗೆ ಊಟ ತರುವಂತೆ ಸೂಚನೆ ಕೊಟ್ಟಿರುತ್ತಾರೆ. ಆ ಸಂದರ್ಭ ನಾಲ್ಕನೇ ದರ್ಜೆಯ ನೌಕರರಿಬ್ಬರಿಗೆ ಟಿಬಿ ವ್ಯಕ್ತಿಯ ಕಫವನ್ನ ಮಿಕ್ಸ್ ಮಾಡುವಂತೆ ಸೂಚನೆ ಕೊಡಲಾಗಿದೆ.
ಆಡಿಯೋದಲ್ಲಿ ಆಸ್ಪತ್ರೆಯ 4ನೇ ದರ್ಜೆಯ ಸಿಬ್ಬಂದಿಗಳಾದ ಜಬ್ಬರ್ ಖಾನ್ ಹಾಗೂ ಮುಶೀರ್ ಅಹ್ಮದ್ ಎಂಬಾತರಿಗೆ ದುಷ್ಕರ್ಮಿ ಸೂಚನೆ ನೀಡಿದ್ದಾನೆ. ಈ ಆಡಿಯೋವನ್ನ ಪೊಲೀಸರಿಗೆ ನೀಡಲಾಗಿದೆ.ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಸ್ಪತ್ರೆಯ ಸಿಇಓ ಡಾ.ತಿರತ್ ಲಾಲ್ ಆದೇಶ ನೀಡಿದ್ದಾರೆ. ವೈಯಕ್ತಿಕ ದ್ವೇಷದಿಂದ ಈ ಕೃತ್ಯ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಯಶವೀರ್ ಸಿಂಗ್ ಅಸ್ಪತ್ರೆಯ ಟಿಬಿ ಪೇಶೆಂಟ್ ವಿಭಾಗದ ಉಸ್ತುವಾರಿ ವಹಿಸಿದ್ದಾರೆ.