• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, June 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಖಾಸಗಿ ಫೋಟೋ-ವಿಡಿಯೋ ಅಕ್ರಮ ಪ್ರಸಾರ: ಪೊಲೀಸರಿಗೆ ಗೃಹ ಸಚಿವರಿಂದ ಖಡಕ್‌ ಸಂದೇಶ

ಪ್ರತಿಧ್ವನಿ by ಪ್ರತಿಧ್ವನಿ
June 26, 2026
in ಕರ್ನಾಟಕ, ರಾಜಕೀಯ
0
ಜನಗಣಮನ ಬಗ್ಗೆ ಕಾಗೇರಿ ವಿವಾದತ್ಮಾಕ ಹೇಳಿಕೆ: ಪ್ರಿಯಾಂಕ್ ಖರ್ಗೆ ತಿರುಗೇಟು
Share on WhatsAppShare on FacebookShare on Telegram

ಬೆಂಗಳೂರು:ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಖಾಸಗಿ ಅಥವಾ ಆಪ್ತ ಚಿತ್ರಗಳು ಮತ್ತು ವೀಡಿಯೊಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಪ್ರಕರಣಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇಂತಹ ಸೈಬರ್ ಅಪರಾಧಗಳು, ಬ್ಲಾಕ್‌ಮೇಲ್ ಮತ್ತು ರಿವೆಂಜ್ ಪೋರ್ನೋಗ್ರಫಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ತಕ್ಷಣವೇ ಕಡ್ಡಾಯವಾಗಿ ಎಫ್‌ಐಆರ್ (FIR) ದಾಖಲಿಸಲು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ADVERTISEMENT
Ramesh Gowda : ರೈತರ ಮುಂದೆಯೇ ಮಾತನಾಡೋಣ ಅಂತ ಕುಮಾರಣ್ಣ ಹೇಳಿದ್ದಾರೆ..! #bidaditownship #dkshivakumar

ಇದರ ಬೆನ್ನಲ್ಲೇ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯಾದ್ಯಂತ ಏಕರೂಪದ ಅನುಷ್ಠಾನಕ್ಕಾಗಿ “ಸ್ಥಾಯಿ ಆದೇಶ 1061″ರ ಅಡಿಯಲ್ಲಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.


ಪ್ರಮುಖ ಮಾರ್ಗಸೂಚಿಗಳು ಮತ್ತು ಕಾನೂನು ಕ್ರಮಗಳ ವಿವರ ಇಲ್ಲಿದೆ.
1. ಒಪ್ಪಿಗೆಯ ಕುರಿತು ಕಾನೂನು ಸ್ಪಷ್ಟನೆ (Consent vs Dissemination)

• ಚಿತ್ರೀಕರಣದ ಒಪ್ಪಿಗೆ ಎಂದರೆ ಪ್ರಸಾರಕ್ಕೆ ನೀಡಿದ ಒಪ್ಪಿಗೆಯಲ್ಲ, ಸಂತ್ರಸ್ತರು ಆರಂಭದಲ್ಲಿ ಚಿತ್ರ ಅಥವಾ ವೀಡಿಯೊ ಸೆರೆಹಿಡಿಯಲು ಒಪ್ಪಿಗೆ ನೀಡಿದ್ದರೂ ಸಹ, ಅದನ್ನು ಇತರರಿಗೆ ಹಂಚಲು ಅಥವಾ ಪ್ರಸಾರ ಮಾಡಲು ಒಪ್ಪಿಗೆ ಇರದೇ ಇದ್ದ ಪಕ್ಷದಲ್ಲಿ ಅದನ್ನು ಪ್ರಚಾರಪಡಿಸುವುದು ಸಂಜ್ಞೇಯ (Cognizable) ಅಪರಾಧವಾಗುತ್ತದೆ.

🌧️☔ಕರಾವಳಿ ಪ್ರದೇಶದಲ್ಲಿ ಅಬ್ಬರಿಸಲಿರುವ ಮಳೆರಾಯ...! CS Patil | Weather Report | Heavy Rain | PRATIDHVANI |

• ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 77ರ ವಿವರಣೆ 2ರ ಪ್ರಕಾರ ಮತ್ತು ಮಾಹಿತಿ ತಂತ್ರಜ್ಞಾನ (IT) ಕಾಯ್ದೆ 2000ರ ಅಡಿಯಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದ್ದು, ಈ ಕಾಯ್ದೆಗಳು ಲಿಂಗತಟಸ್ಥ (Gender-neutral) ಆಗಿವೆ.
2. ಕಡ್ಡಾಯ ಎಫ್‌ಐಆರ್ (FIR) ನೋಂದಣಿ ಮತ್ತು ಜೀರೋ ಎಫ್‌ಐಆರ್

• “ಬ್ಲಾಕ್‌ಮೇಲ್ ವೀಡಿಯೊಗಳು”, “ಸೆಕ್ಟೋರ್ಷನ್”, ಮತ್ತು “ರಿವೆಂಜ್ ಪೋರ್ನೋಗ್ರಫಿ” ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ಬಂದ ತಕ್ಷಣ ಪೊಲೀಸರು ಯಾವುದೇ ವಿಳಂಬವಿಲ್ಲದೆ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು.

• ಪೂರ್ವಾನುಮತಿಯ ನೆಪವಿಲ್ಲ: ಸಂತ್ರಸ್ತರು ಮೊದಲು ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣ ಒಡ್ಡಿ ದೂರು ದಾಖಲಿಸಿಕೊಳ್ಳಲು ನಿರಾಕರಿಸುವಂತಿಲ್ಲ ಅಥವಾ ತಡ ಮಾಡುವಂತಿಲ್ಲ.

CM DK Shivakumar Speech : ರೇವಂತ್, ನಾಯ್ಡು ಎದುರು ಅಬ್ಬರಿಸಿದ ಡಿಕೆ ಶಿವಕುಮಾರ್.! #revanthreddy #chandrababu

• ಜೀರೋ ಎಫ್‌ಐಆರ್ (Zero FIR): ಅಪರಾಧವು ಸ್ಥಳೀಯ ಠಾಣಾ ವ್ಯಾಪ್ತಿಯ ಹೊರಗೆ ನಡೆದಿದ್ದರೂ ಸಹ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಪ್ರಕಾರ ತಕ್ಷಣವೇ ಜೀರೋ ಎಫ್‌ಐಆರ್ ದಾಖಲಿಸಿ, ಬಳಿಕ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು.
3. ಅನ್ವಯವಾಗುವ ಕಠಿಣ ಕಾನೂನು ವಿಧಿಗಳು ಮತ್ತು ಶಿಕ್ಷೆಯ ಪ್ರಮಾಣ

ದೂರಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಪ್ರಕರಣದ ವಾಸ್ತವಾಂಶಗಳ ಆಧಾರದ ಮೇಲೆ ಕೆಳಕಂಡ ಕಠಿಣ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ಕಡ್ಡಾಯವಾಗಿ ಸೇರಿಸಲು ಸೂಚಿಸಲಾಗಿದೆ.

• ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 77 (Voyeurism): ಮಹಿಳೆಯರ ಖಾಸಗಿ ಕ್ಷಣಗಳನ್ನು ಇಣುಕುವುದು, ಚಿತ್ರೀಕರಿಸುವುದು ಅಥವಾ ಪ್ರಸಾರ ಮಾಡುವುದು ಅಪರಾಧ. ಮೊದಲ ಅಪರಾಧಕ್ಕೆ 1 ರಿಂದ 3 ವರ್ಷ ಹಾಗೂ ಪುನರಾವರ್ತಿತ ಅಪರಾಧಕ್ಕೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು.
• ಐಟಿ ಕಾಯ್ದೆ, 2000ರ ಸೆಕ್ಷನ್ 66(ಇ) (ಗೌಪ್ಯತೆ ಉಲ್ಲಂಘನೆ): ಅನುಮತಿಯಿಲ್ಲದೆ ವ್ಯಕ್ತಿಯ ಖಾಸಗಿ ಅಂಗಗಳ ಚಿತ್ರ ಸೆರೆಹಿಡಿಯುವುದು ಅಥವಾ ಪ್ರಸಾರ ಮಾಡುವುದಕ್ಕೆ ಗರಿಷ್ಠ 3 ವರ್ಷಗಳ ಜೈಲು ಶಿಕ್ಷೆ ಅಥವಾ ₹2 ಲಕ್ಷದವರೆಗೆ ದಂಡ ವಿಧಿಸಲಾಗುವುದು.
• ಐಟಿ ಕಾಯ್ದೆಯ ಸೆಕ್ಷನ್ 67 ಮತ್ತು 67(ಎ) (ಅಶ್ಲೀಲ ಮತ್ತು ಲೈಂಗಿಕ ವಿಷಯಗಳ ಪ್ರಸಾರ): ಇಲೆಕ್ಟ್ರಾನಿಕ್ ರೂಪದಲ್ಲಿ ಇಂತಹ ವಿಷಯಗಳನ್ನು ಹರಡಿದರೆ 3 ರಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹5 ಲಕ್ಷದಿಂದ ₹10 ಲಕ್ಷದವರೆಗೆ ಭಾರಿ ದಂಡ ವಿಧಿಸಲು ಅವಕಾಶವಿದೆ.
4. ಕಂಟೆಂಟ್ ತೆಗೆದುಹಾಕುವುದು ಮತ್ತು ಸಾಕ್ಷ್ಯ ಸಂರಕ್ಷಣೆ
• ಐಟಿ ನಿಯಮಗಳು, 2021ರ ಅನ್ವಯ ಸಾಮಾಜಿಕ ಜಾಲತಾಣಗಳು ಅಥವಾ ಸಂಬಂಧಿತ ಸಂಸ್ಥೆಗಳಿಗೆ ತಕ್ಷಣವೇ ನೋಟಿಸ್ ನೀಡಿ, ಆನ್‌ಲೈನ್‌ನಲ್ಲಿರುವ ಅಪರಾಧಕರ ವಿಷಯವನ್ನು (Content) ತ್ವರಿತವಾಗಿ ತೆಗೆದುಹಾಕಲು/ತಡೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಡಿಜಿಟಲ್ ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಸಂರಕ್ಷಿಸಲಾಗುವುದು.
5. ಸಂತ್ರಸ್ತರ ರಕ್ಷಣೆ ಮತ್ತು ಗೌಪ್ಯತೆ
• ಸಂತ್ರಸ್ತರ ಗುರುತನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು. ದೂರುದಾರರನ್ನು ಅತ್ಯಂತ ಸೂಕ್ಷ್ಮವಾಗಿ ನಡೆಸಿಕೊಳ್ಳಬೇಕು ಮತ್ತು ಸಾಧ್ಯವಾದಷ್ಟು ಮಹಿಳಾ ಸಂತ್ರಸ್ತರ ದೂರನ್ನು ಮಹಿಳಾ ಅಧಿಕಾರಿಯಿಂದಲೇ ದಾಖಲಿಸಬೇಕು. ತಾಂತ್ರಿಕ ತನಿಖೆಗಾಗಿ ಸಿಐಡಿ ಸೈಬರ್ ವಿಭಾಗದೊಂದಿಗೆ ಸಮನ್ವಯ ಸಾಧಿಸಲಾಗುವುದು.

CM DK Shivakumar Speech : ಮೂರು ಜನ ಸೇರಿ ರೈತರನ್ನು ಉಳಿಸ್ತೀವಿ..! #revanthreddy #chandrababu #cm

ʼಸಂತ್ರಸ್ತರ ಖಾಸಗಿತನದ ಹಕ್ಕು (Right to Privacy) ಭಾರತ ಸಂವಿಧಾನದ ವಿಧಿ 21ರ ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ (Justice K.S. Puttaswamy Case). ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಎಫ್‌ಐಆರ್ ನೋಂದಣಿ ಮಾಡಲು ನಿರಾಕರಿಸುವುದು ಅಥವಾ ‘ಪೂರ್ವ ಒಪ್ಪಿಗೆ’ ಎಂಬ ತಪ್ಪು ಕಾರಣ ನೀಡಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಗಂಭೀರ ಶಿಸ್ತು ಕ್ರಮ ಜರುಗಿಸಲಾಗುವುದುʼ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ನಿರ್ದೇಶನಗಳನ್ನು ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಯೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಪೊಲೀಸ್ ಆಯುಕ್ತರು, ವಲಯ ಐಜಿಪಿಗಳು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ (SP) ಸಚಿವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

Previous Post

Namma Metro: ನಿನ್ನೆ ನಮ್ಮ ಮೆಟ್ರೋ ರೈಲು ಏಕಾಏಕಿ ಸ್ಥಗಿತಗೊಂಡಿದ್ದೇಕೆ..? ಅಸಲಿ ಕಾರಣ ಇಲ್ಲಿದೆ

Next Post

ʼಈಗಾಗಲೇ ಕಷ್ಟದಲ್ಲಿದ್ದೇವೆʼ..ವಿನೀಶ್ ಕಾರು ಅಪಘಾತದ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು..?

Related Posts

ವಿದ್ಯುತ್ ಸುರಕ್ಷತೆ ಕುರಿತ ಜಾಗೃತಿಗೆ ಎಸ್ಕಾಂಗಳಿಂದ ಆರ್ಥಿಕ ನೆರವು: ಗೌರವ್ ಗುಪ್ತ
Top Story

ವಿದ್ಯುತ್ ಸುರಕ್ಷತೆ ಕುರಿತ ಜಾಗೃತಿಗೆ ಎಸ್ಕಾಂಗಳಿಂದ ಆರ್ಥಿಕ ನೆರವು: ಗೌರವ್ ಗುಪ್ತ

by ಪ್ರತಿಧ್ವನಿ
June 26, 2026
0

ಬೆಂಗಳೂರು: ವಿದ್ಯುತ್ ಬಳಕೆ ಹೆಚ್ಚಿದಂತೆ ಸುರಕ್ಷತೆ ಕುರಿತು ಜಾಗೃತಿಯೂ ಹೆಚ್ಚಾಗಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯುತ್ ಪರಿವೀಕ್ಷಣಾಲಯದಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹಕ್ಕೆ ವಿದ್ಯುತ್ ಸರಬರಾಜು ಕಂಪನಿಗಳಿಂದ...

Read moreDetails
ಬೈರಮಂಗಲದಲ್ಲಿ ಮುಖ್ಯಮಂತ್ರಿಗಾಗಿ ಕಾಯುತ್ತೇನೆ: ಹೆಚ್.ಡಿ ಕುಮಾರಸ್ವಾಮಿ

ಬೈರಮಂಗಲದಲ್ಲಿ ಮುಖ್ಯಮಂತ್ರಿಗಾಗಿ ಕಾಯುತ್ತೇನೆ: ಹೆಚ್.ಡಿ ಕುಮಾರಸ್ವಾಮಿ

June 26, 2026
ಅನಿವಾಸಿ ಕನ್ನಡಿಗರ ಸಚಿವಾಲಯ ರಚನೆಗೆ ಜಾಗತಿಕ ಅಭಿಯಾನ ಆರಂಭ

ಅನಿವಾಸಿ ಕನ್ನಡಿಗರ ಸಚಿವಾಲಯ ರಚನೆಗೆ ಜಾಗತಿಕ ಅಭಿಯಾನ ಆರಂಭ

June 26, 2026
ದೇಣಿಗೆ ಹಣ ನಾಪತ್ತೆ: ರಾಮ ಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ

ದೇಣಿಗೆ ಹಣ ನಾಪತ್ತೆ: ರಾಮ ಮಂದಿರ ಟ್ರಸ್ಟ್‌ಗೆ ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ

June 26, 2026
ʼಈಗಾಗಲೇ ಕಷ್ಟದಲ್ಲಿದ್ದೇವೆʼ..ವಿನೀಶ್ ಕಾರು ಅಪಘಾತದ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು..?

ʼಈಗಾಗಲೇ ಕಷ್ಟದಲ್ಲಿದ್ದೇವೆʼ..ವಿನೀಶ್ ಕಾರು ಅಪಘಾತದ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು..?

June 26, 2026
Next Post
ʼಈಗಾಗಲೇ ಕಷ್ಟದಲ್ಲಿದ್ದೇವೆʼ..ವಿನೀಶ್ ಕಾರು ಅಪಘಾತದ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು..?

ʼಈಗಾಗಲೇ ಕಷ್ಟದಲ್ಲಿದ್ದೇವೆʼ..ವಿನೀಶ್ ಕಾರು ಅಪಘಾತದ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada