
ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Minister Lakshmi Hebbalkar ) ಆಪ್ತ ಬಸ್ತವಾಡ ಗ್ರಾಮ ಪಂಚಾಯಿತಿಯ (Bastawada Gram Panchayat)ಉಪಾಧ್ಯಕ್ಷ ವಿಠ್ಠಲ ಸಾಂಬ್ರೇಕರ್ (Vitthala sambraker)ಅವರನ್ನು ಸೇರಿದಂತೆ ನಾಲ್ವರ (four)ಮೇಲೆ ಮಾರಣಾಂತಿಕವಾಗಿ (Fatally)ದುಷ್ಕರ್ಮಿಗಳು ಹಲ್ಲೆ (attack)ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಕುಂಡಸ್ಕೊಪ್ಪ ಗ್ರಾಮದಲ್ಲಿ ಇಂದು ನಡೆದಿದೆ.
ಗಾಯಾಳುಗಳನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಹಲ್ಲೆಗೊಳಗಾದ ವಿಠ್ಠಲ ಸಾಂಬ್ರೇಕರ್, ಗ್ರಾಮದಲ್ಲಿ ಸಮುದಾಯ ಭವನಕ್ಕಾಗಿ ಜಾಗ ನೀಡಿದ್ದರು.ಇದಕ್ಕೆ ಗ್ರಾಮದ ಜನರ ಸಹಮತದ ಮೇರೆಗೆ ಬದಲಿಯಾಗಿ ಸರ್ಕಾರಿ ಜಾಗ ಪಡೆದಿದ್ದರು. ಈ ವಿಚಾರಕ್ಕೆ ವಿರೋಧಿಸಿ ನಾಗಪ್ಪ ವಾಳಕೆ, ಗಜು ಡೋಂಗ್ರೆ, ಮೋನಪ್ಪ ಗುಜರಾನಟ್ಟಿ, ಶಂಕರ ಪಾಟೀಲ, ಪುಂಡಲೀಕ ಕುಡಚೇಕರ್, ಭೀಮಾ ದೇಮನ್ನವರ ಎಂಬುವವರು ವಿಠ್ಠಲ ಮನೆಗೆ ಬಂದು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.

ಕಟ್ಟಡ ನಿರ್ಮಾಣ ಮಾಡುತ್ತಿರುವಾಗಲೇ ಇಟ್ಟಿಗೆಯಿಂದ ರಕ್ತಬರುವಂತೆ ಮನಬಂದಂತೆ ಥಳಿಸಿ ಗಾಯಗೊಳಿಸಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ಮಾಡಿದ್ದು, ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಈ ಕುರಿತು ಹಿರೇಬಾಗೆವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.