• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಗೃಹ ಜ್ಯೋತಿ ಪರಿಷ್ಕರಣೆ: ಫಲಾನುಭವಿಗಳ ಆತಂಕಕ್ಕೆ ಬ್ರೇಕ್‌ ಹಾಕಿದ ಸಚಿವ ಕೆ.ಜೆ ಜಾರ್ಜ್

ಪ್ರತಿಧ್ವನಿ by ಪ್ರತಿಧ್ವನಿ
July 1, 2026
in Top Story, ಕರ್ನಾಟಕ, ರಾಜಕೀಯ
0
ಗೃಹ ಜ್ಯೋತಿ ಪರಿಷ್ಕರಣೆ: ಫಲಾನುಭವಿಗಳ ಆತಂಕಕ್ಕೆ ಬ್ರೇಕ್‌ ಹಾಕಿದ ಸಚಿವ ಕೆ.ಜೆ ಜಾರ್ಜ್
Share on WhatsAppShare on FacebookShare on Telegram

ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆ ಬಳಿಕ ಇದೀಗ ಗೃಹ ಜ್ಯೋತಿ ಯೋಜನೆಗಳನ್ನು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದ್ದು, ಈ ಮೂಲಕ ಅನರ್ಹ ಫಲಾನುಭವಿಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯ ಇಂದಿನಿಂದ ಆರಂಭವಾಗಿದೆ. ರಾಜ್ಯದ ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಮತ್ತು ಮೀಟರ್ ರೀಡರ್‌ಗಳು ಮನೆಗಳಿಗೆ ಭೇಟಿ ನೀಡಿ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ADVERTISEMENT
K. J. George : ಅನರ್ಹರಿಗೆ ಗ್ಯಾರಂಟಿ ಕಟ್ ಸಚಿವ ಜಾರ್ಜ್ ಏನಂದ್ರು..? #pratidhvani

ಈ ಬಗ್ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಪ್ರತಿಕ್ರಿಯಿಸಿದ್ದು, ಇದು ಯೋಜನೆ ರದ್ದುಪಡಿಸುವ ಕ್ರಮವಲ್ಲ, ಅರ್ಹ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ತಲುಪುವಂತೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮನೆಮನೆಗೆ ಅರ್ಜಿ ನಮೂನೆ (ಫಾರಂ) ನೀಡಲಿದ್ದು, ಅದರ ಮೂಲಕ ಫಲಾನುಭವಿಗಳ ಮಾಹಿತಿ ಪರಿಶೀಲಿಸಲಾಗುತ್ತದೆ. ಜಾತಿ ಕುರಿತ ಮಾಹಿತಿ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ, ಅದು ಕೇವಲ ಮಾಹಿತಿಗಾಗಿಯೇ ಹೊರತು ಬೇರೆ ಉದ್ದೇಶವಿಲ್ಲ. ಪ್ರಸ್ತುತ ರಾಜ್ಯದಲ್ಲಿ 1.64 ಕೋಟಿ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಸರ್ಕಾರ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಭರವಸೆಯಂತೆ ಯೋಜನೆ ಮುಂದುವರಿದಿದೆ ಎಂದು ತಿಳಿಸಿದರು.

D K  Shivakumar : ಮಾಧ್ಯಮಗಳು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಲು ಸಿಎಂ ಡಿಕೆಶಿ ಕರೆ.. #pratidhvani

ಇನ್ನು ಕಳೆದ 2-3 ವರ್ಷಗಳಿಂದ ಯೋಜನೆ ಜಾರಿಯಲ್ಲಿದ್ದು, ಇದೀಗ ಅನರ್ಹರು ಸೌಲಭ್ಯ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪರಿಷ್ಕರಣೆ ಕೈಗೊಳ್ಳಲಾಗಿದೆ. ಅರ್ಹರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು.

Previous Post

ಮೊಹಮ್ಮದ್ ಘಜ್ನಿ ಬಿಟ್ರೆ ದೇಶದ ದೇವಸ್ಥಾನಗಳನ್ನು ಲೂಟಿ ಮಾಡಿದ್ದು RSS: ಬಿ.ಕೆ ಹರಿಪ್ರಸಾದ್

Next Post

ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ?: ಗೃಹಜ್ಯೋತಿ ಪರಿಷ್ಕರಣೆಗೆ ಜೆಡಿಎಸ್ ಕಿಡಿ

Related Posts

ಬೆಂಗಳೂರಲ್ಲಿ ಫುಟ್‌ಪಾತ್ ಒತ್ತುವರಿ ತೆರವು: ಹಲವೆಡೆ ಘರ್ಜಿಸಿದ ಜೆಸಿಬಿ
Top Story

ಫುಟ್‌ಪಾತ್‌ ತೆರವಿಗೆ ಜೆಸಿಬಿ ಘರ್ಜನೆ..ರಾಜಕಾಲುವೆ ಒತ್ತುವರಿಗೆ VIP ಟ್ರೀಟ್‌ಮೆಂಟ್‌?: ಏನಿದು ಸರ್ಕಾರದ ಡಬಲ್‌ ಸ್ಟ್ಯಾಂಡರ್ಡ್?

by ಪ್ರತಿಧ್ವನಿ
July 2, 2026
0

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಸಂಪುಟದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ ವಹಿಸಿಕೊಂಡ ಬಳಿಕ ತೆಗೆದುಕೊಂಡ ಬಹಳ ಮಹತ್ವದ ನಿರ್ಧಾರವೇ ಬೆಂಗಳೂರಿನಲ್ಲಿ ಸೇಫ್‌ ಫುಟ್‌ಪಾತ್...

Read moreDetails
ಭಾರೀ ಮಳೆ ಎಚ್ಚರಿಕೆ:ಈ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರೀ ಮಳೆ ಎಚ್ಚರಿಕೆ:ಈ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

July 2, 2026
ಒತ್ತುವರಿದಾರರಿಗೆ ಪಾಲಿಕೆಯ ಶಾಕ್; ಫುಟ್‌ಪಾತ್‌ಗಳಿಂದ ಶೆಡ್, ಪೆಟ್ಟಿ ಅಂಗಡಿ, ತಳ್ಳುಗಾಡಿಗಳ ತೆರವು

ಒತ್ತುವರಿದಾರರಿಗೆ ಪಾಲಿಕೆಯ ಶಾಕ್; ಫುಟ್‌ಪಾತ್‌ಗಳಿಂದ ಶೆಡ್, ಪೆಟ್ಟಿ ಅಂಗಡಿ, ತಳ್ಳುಗಾಡಿಗಳ ತೆರವು

July 2, 2026
Na Divakar Article

ಉನ್ಮತ್ತ ನಿಷ್ಠೆಯಲ್ಲಿ ಕಳೆದುಹೋದ  ಸ್ವ-ಪ್ರಜ್ಞೆ

July 2, 2026
ರಾಮಮಂದಿರ ಕಾಣಿಕೆ ಹಣ ಕಳ್ಳತನ: ಟ್ರಸ್ಟಿ ಹೆಸರು ಪ್ರಸ್ತಾಪ, ವಿಚಾರಣೆಯಲ್ಲಿ ಹೊಸ ರಹಸ್ಯ ಬಯಲು

ರಾಮಮಂದಿರ ಕಾಣಿಕೆ ಹಣ ಕಳ್ಳತನ: ಟ್ರಸ್ಟಿ ಹೆಸರು ಪ್ರಸ್ತಾಪ, ವಿಚಾರಣೆಯಲ್ಲಿ ಹೊಸ ರಹಸ್ಯ ಬಯಲು

July 1, 2026
Next Post
ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ?: ಗೃಹಜ್ಯೋತಿ ಪರಿಷ್ಕರಣೆಗೆ ಜೆಡಿಎಸ್ ಕಿಡಿ

ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ?: ಗೃಹಜ್ಯೋತಿ ಪರಿಷ್ಕರಣೆಗೆ ಜೆಡಿಎಸ್ ಕಿಡಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada