ರಾಜ್ಯದ ಇಂಧನ ಸಚಿವರಾದ (Power minister) ಮಾನ್ಯ ಕೆ.ಜೆ.ಜಾರ್ಜ್ ಅವರು (KJ Georg) ಬೆಸ್ಕಾಂ (BESCOM) ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಗುರುವಾರ 5 ಕೋಟಿ ರೂ. ಚೆಕ್ ಅನ್ನು ಸಿಎಂ ಸಿದ್ದರಾಮಯ್ಯನವರಿಗೆ (Cm siddaramaiah) ನೀಡುವ ಮೂಲಕ ತಮ್ಮ ಇಲಾಖೆಯಿಂದ ಸಿಎಂ ಪರಿಹಾರ ನಿಧಿಗೆ ಕೊಡುಗೆ ನೀಡಿದ್ದಾರೆ.

ಹೀಗೆ ಇಂದು (ನ.28) ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 5 ಕೋಟಿ ರೂ. ಚೆಕ್ (5 crore cheque) ಅನ್ನು ಸಚಿವ ಕೆಜೆ ಜಾರ್ಜ್ ಹಸ್ತಾಂತರಿಸಿದ ಸಂದರ್ಭದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ ಕೂಡ ಉಪಸ್ಥಿತರಿದ್ದರು.






