ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ನೋಡಿದರೆ “ಮೆಟ್ರೋ ವಿಸ್ತರಣೆಯಿಂದ ಜನರು ಹತ್ತಿರಾಗುತ್ತಿದ್ದಾರೆ, ಆದರೆ ಮುಖ್ಯಮಂತ್ರಿಗಳು ಕನ್ನಡ, ಕನ್ನಡಿಗರಿಂದ ದೂರ ಸರಿಯುತ್ತಿದ್ದಾರ? ಎಂದು ಸಂಸದ ಜಿಸಿ. ಚಂದ್ರಶೇಖರ್ ಸಿಎಂ ಬಿಮ್ಮಾಯಿ ಅವರಿಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಖಾರವಾಗಿ ಟ್ವೀಟ್ ಮಾಡಿರುವ ಅವರು, ಮಾನ್ಯ ಮುಖ್ಯಮಂತ್ರಿಗಳೆ, ನಮ್ಮ ಮೆಟ್ರೋ ವಿಸ್ತರಣೆಯಿಂದ ಜನರು ಹತ್ತಿರಾಗುತ್ತಿದ್ದಾರೆ ಆದರೆ ತಾವೇಕೆ ಕನ್ನಡಿಗರಿಂದ, ಕನ್ನಡದಿಂದ ದೂರ ಸರಿಯುತ್ತಿದ್ದಿರಿ? ಎಂದು ಪ್ರಶ್ನಿಸಿದ್ದಾರೆ.
ಇತ್ತ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಪೆಟ್ರೋಲ್ ಬಂಕ್ ಮುಂದೆ ಹಾಕಿರುವ ಉ.ಪ್ರ ಸಿಎಂ ಯೋಗಿಆದಿತ್ಯನಾಥ್ ಹಿಂದಿ ಜಾಹಿರಾತು ನಾಮಪಲಕಕ್ಕೆ ಮಸಿ ಬಳಿದು ಪ್ರತಿಭಟಿಸಿದ್ದಾರೆ ತಮ್ಮ ಟ್ವೀಟರ್ ನಲ್ಲಿ, ಕರ್ನಾಟಕದ ಸಿಕ್ಕಸಿಕ್ಕ ಕಡೆ ಈ ರೀತಿ ಹಿಂದಿ ಫಲಕಗಳು. ಲಾಲಬಾಗ್ ಬಳಿ ಪೆಟ್ರೋಲ್ ಬಂಕ್ ನಲ್ಲಿ ಸಂಪೂರ್ಣ ಹಿಂದಿಮಯ ಫಲಕ. ಹೀಗೆ ಬಿಟ್ರೆ ಇಡೀ ಕರ್ನಾಟಕನಾ ಹಿಂದಿನಾಡು ಮಾಡಿಬಿಡ್ತಾರೆ.. ಇಂದು ಅಲ್ಲಿ ಮಸಿ ಬಳಿದು ಪ್ರತಿಭಟಿಸಿ ಕನ್ನಡದ ಸಾಲು ಬರೆದು ಪ್ರತಿಭಟಿಸಿದ್ದೇವೆ ಸಂಜೆ ಒಳಗೆ ಇದನ್ನು ತೆಗೆಯಲಿದ್ದಾರೆ ಕನ್ನಡಿಗರು ಹಿಂದಿ ಹೇರಿಕೆ ಸಹಿಸೋಲ್ಲಾ ಎಂದು ಖಾರವಾಗಿ ಟ್ವೀಟಿಸಿದ್ದಾರೆ.