• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

`ಟ್ರೆಂಡ್ ಶತಮಾನಗಳ ಕಾಲ ಉಳಿಯಲಿ’: ಟ್ವಿಟರ್ ಟ್ರೆಂಡ್‌ಗೆ ಭಾರತೀಯ ಮಹಿಳೆಯರ ಪ್ರತಿಕ್ರಿಯೆ

ಫಾತಿಮಾ by ಫಾತಿಮಾ
January 23, 2022
in ದೇಶ
0
`ಟ್ರೆಂಡ್ ಶತಮಾನಗಳ ಕಾಲ ಉಳಿಯಲಿ’: ಟ್ವಿಟರ್ ಟ್ರೆಂಡ್‌ಗೆ ಭಾರತೀಯ ಮಹಿಳೆಯರ ಪ್ರತಿಕ್ರಿಯೆ
Share on WhatsAppShare on FacebookShare on Telegram

ಪತಿ ತನ್ನ ಪತ್ನಿಯೊಂದಿಗಿನ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದುವುದನ್ನು ಅತ್ಯಾಚಾರ ಎಂದು ಪರಿಗಣಿಸದ ಭಾರತೀಯ ದಂಡ ಸಂಹಿತೆಯ 375ನೇ ಸೆಕ್ಷನ್‌ನ ಔಚಿತ್ಯವನ್ನು ಪ್ರಶ್ನಿಸಿದ ದೆಹಲಿ ಹೈಕೋರ್ಟ್ ವೈವಾಹಿಕ ಸ್ಥಿತಿ ಪರಿಗಣನೆಯಿಲ್ಲದೆ ಲೈಂಗಿಕ ಕ್ರಿಯೆಗೆ ‘ಇಲ್ಲ’ ಎನ್ನುವ ಅಧಿಕಾರ ಪ್ರತಿ ಮಹಿಳೆಗೂ ಇದೆ ಎಂದಿದೆ.
ಅತ್ಯಾಚಾರವನ್ನು ವ್ಯಾಖ್ಯಾನಿಸುವ ಐಪಿಸಿಯ ಸೆಕ್ಷನ್ 375 ಪತ್ನಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರದ ಹೊರತು ಪುರುಷನು ತನ್ನ ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯು ಅತ್ಯಾಚಾರವಲ್ಲ ಎಂದು ಹೇಳುತ್ತದೆ.
“ವೈವಾಹಿಕ ಅತ್ಯಾಚಾರವನ್ನು ಅಪರಾಧವನ್ನಾಗಿ ಮಾಡಿದ 50 ದೇಶಗಳು ಇದನ್ನು ತಪ್ಪಾಗಿ ಗ್ರಹಿಸಿವೆಯೇ?” ಎಂದೂ ನ್ಯಾಯಾಲಯ ಕೇಳಿದೆ.

ADVERTISEMENT

ಈ ಬಗ್ಗೆ ಅಫಿಡವಿಟ್ ಸಲ್ಲಿಸಿರುವ, ಕೇಂದ್ರ ಸರ್ಕಾರವು ಈ ಸೆಕ್ಷನ್‌ಅನ್ನು ಸಮರ್ಥಿಸಿಕೊಂಡಿದ್ದು ಪತಿ ತನ್ನ ಪತ್ನಿಯೊಂದಿಗೆ ಬವಂತದ ಲೈಂಗಿಕ ಕ್ರಿಯೆ ನಡೆಸುವುದನ್ನು ‘ಅಪರಾಧ’ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಇದು ‘ವಿವಾಹ ವ್ಯವಸ್ಥೆ’ ಮತ್ತು ‘ಗಂಡಂದಿರಿಗೆ ಕಿರುಕುಳ ನೀಡುವ’ ಸುಲಭ ಸಾಧನವಾಗಿ ಮಾರ್ಪಾಡಾಗಬಹುದು ಎಂದಿದೆ.

ಭಾರತೀಯ ಸಮಾಜದಲ್ಲಿ ಮದುವೆಯ ನಂತರ ಹೆಚ್ಚಾಗಿ ಹೆಣ್ಣು ಗಂಡನ ಆಸ್ತಿ ಎಂದೇ ಪರಿಗಣಿಸಲ್ಪಡುತ್ತಾಳೆ ಮತ್ತು ಮದುವೆಯ ಉದ್ದೇಶವೇ ಸಂತಾನಾಭಿವೃದ್ಧಿ ಆಗಿರುವುದರಿಂದ ಲೈಂಗಿಕ ಜವಾಬ್ದಾರಿಗಳನ್ನು ಪೂರೈಸುವುದು ಹೆಂಡತಿಯ ಕರ್ತವ್ಯ ಎಂಬ ನಂಬಿಕೆಗಳಿವೆ. ಸರ್ಕಾರದ ಹೇಳಿಕೆಯ ಹಿಂದಿರುವುದೂ ಇದೇ ಮನಸ್ಥಿತಿ.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಲೈಂಗಿಕ ಕ್ರಿಯೆಯ ಮಧ್ಯದಲ್ಲಿ ಸಹ ಮಹಿಳೆ ನಿರಾಕರಿಸಬಹುದು ಆದ್ದರಿಂದ ಮದುವೆ ಎಂದರೆ ‘ಶಾಶ್ವತ ಒಪ್ಪಿಗೆ’ ಎಂಬುವುದು ಕಾನೂನುಬದ್ಧವಾಗಿ ಮಾನ್ಯವಾಗುವುದಿಲ್ಲ ಎಂದಿದ್ದಾರೆ. ಅಲ್ಲದೆ ನ್ಯಾಯಾಂಗವು ಮಹಿಳೆಯ ಮೂಲಭೂತ ಹಕ್ಕನ್ನು ರಕ್ಷಿಸುವ ಹೊಣೆ ಹೊರಬೇಕೇ ಹೊರತು ‘ಮದುವೆಯ ವ್ಯವಸ್ಥೆ’ ಮತ್ತು ಸಂತಾನಾಭಿವೃದ್ಧಿಯನ್ನು ರಕ್ಷಿಸುವ ಹೊಣೆ ಹೊರಬಾರದು ಎಂದು ಹೇಳಿದ್ದಾರೆ.

ಈ ಬಗ್ಗೆ ನ್ಯಾಯಾಲಯಕ್ಕೆ ಜನವರಿ 19ರಂದು ಉತ್ತರಿಸಿರುವ ಸರ್ಕಾರ ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವ ವಿಷಯವನ್ನು ಪರಿಶೀಲಿಸಲು ‘ಸಮಾಲೋಚನಾ ಪ್ರಕ್ರಿಯೆ’ಯನ್ನು ‘ವೇಗವಾಗಿ ಟ್ರ್ಯಾಕ್ ಮಾಡಲಾಗಿದೆ’ ಎಂದು ತಿಳಿಸಿದೆ.

ಅದಾಗಿ ಒಂದು ದಿನದ ನಂತರ ಟ್ವಿಟರ್ ನಲ್ಲಿ #MarriageStrike ಟ್ರೆಂಡ್ ಆಗಿದೆ. ಇಂಥದ್ದೊಂದು‌‌ ಕಾನೂನು ಜಾರಿಗೆ ಬಂದರೆ ತಾವು ಎಂದಿಗೂ ಮದುವೆಯಾಗುವುದಿಲ್ಲ ಎಂದು ಪುರುಷರ ಒಂದು ವಿಭಾಗ ಹೇಳಿಕೊಳ್ಳುತ್ತಿದೆ. ಈ ಬಗ್ಗೆ ಅನೇಕ ಟ್ವೀಟ್‌ಗಳು ಮಾತಾಡಿದ್ದು ಮಹಿಳೆಯರನ್ನು ಅವಕಾಶವಾದಿಗಳು ಮತ್ತು ಗೋಲ್ಡ್ ಡಿಗ್ಗರ್ಸ್ ಎಂದು ಕರೆದಿದೆ.

MarriageStrike ಟ್ರೆಂಡ್‌ಗೆ ಪ್ರತ್ಯುತ್ತರ ನೀಡಿರುವ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಕಾರ್ಯದರ್ಶಿ ಕವಿತಾ ಕೃಷ್ಣನ್ ಅವರು ಟ್ವೀಟ್ ಮಾಡಿ “#MarriageStrike ನಡೆಸುತ್ತಿರುವ ಪುರುಷರು ಎಂದೆಂದಿಗೂ ಇದೇ ರೀತಿ ಇರಬೇಕೆಂದು ನಾನು ಬಲವಾಗಿ ಬಯಸುತ್ತೇನೆ. ಮದುವೆಯಲ್ಲಿ ಪರಸ್ಪರ ಒಪ್ಪಿಗೆಗೆ ಸ್ಥಾನವಿಲ್ಲ ಎಂದು ಭಾವಿಸುವ ಯಾರೂ ಮದುವೆಯಾಗಬಾರದು” ಎಂದಿದ್ದಾರೆ.

I strongly hope that men who are going on #MaritalStrike remain on strike for ever. They are not safe for any woman to be married to. Anyone who thinks consent has no place in a marriage, should never marry.

— Kavita Krishnan (@kavita_krishnan) January 20, 2022

ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು, “#MarriageStrike ಎನ್ನುವುದು ಟ್ವಿಟರ್ ಟ್ರೆಂಡ್‌ಗಳಲ್ಲಿ ಅತ್ಯಂತ ಹಾಸ್ಯಾಸ್ಪದ ಟ್ರೆಂಡ್ ಆಗಿದ್ದು ಮಹಿಳೆಯರು ತಮ್ಮನ್ನು ಮದುವೆಯಾಗಲು ಕಾಯುತ್ತಿದ್ದಾರೆ ಎಂದು ಅವರು ಭಾವಿಸಿದ್ದಾರೆ” ಎನ್ನುವುದಾಗಿ ಟ್ವೀಟ್ ಮಾಡಿದ್ದಾರೆ.

#MarriageStrike is the most hilarious trend of all of twitter.
Feeling sad for every incel who thinks women are waiting to marry them. 🤪

— 🔅 মেঘ 🔅 🍉 (@lokhhimeye) January 19, 2022

“ನಾನು ಈ ಪ್ರವೃತ್ತಿಯನ್ನು ಬೆಂಬಲಿಸುತ್ತೇನೆ. ಒಂದಿಡೀ ಪೀಳಿಗೆಯು ಮದುವೆ ಮತ್ತು ಸಂತಾನದ ಅಸಂಬದ್ಧತೆಯನ್ನು ಬಿಟ್ಟುಬಿಡಬೇಕು ಮತ್ತು ಕೆಲವು ಪುಸ್ತಕಗಳನ್ನು ಓದಬೇಕು, ಪ್ರಯಾಣ ಮಾಡಬೇಕು. ಇದು ಮಹಿಳೆಯರನ್ನು ಮುಕ್ತ, ಸಂತೋಷಮಯವನ್ನಾಗಿಸುವುದೇ ಅಲ್ಲದೆ ಸಾಹಸ ಪ್ರಿಯರೂ ಕನಸುಗಾರರನ್ನಾಗಿಯೂ ಮಾಡುತ್ತದೆ. ಕಡಿಮೆ ಮದುವೆ ಎಂದರೆ ಕಡಿಮೆ ಜವಾಬ್ದಾರಿಗಳು ಮತ್ತು ಹೆಚ್ಚು ಮೋಜು” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

I support this trend #MarriageStrike. An entire generation should skip the marriage and procreation nonsense and read some books, travel etc. It'll make a generation of women free, happy, adventurous, dreamers, doers. Less marriage, less responsibilities, and more fun please.

— Dr. Sanjukta Basu, M.A., LLB., PhD (@sanjukta) January 18, 2022
Tags: May #MarriageStrike trend Remain for Centuries’: Indian Women Respond to Twitter Trend '#MarriageStrike
Previous Post

Fact Check : ಸರ್ಕಾರಿ ಆಸ್ಪತ್ರೆಯಲ್ಲಿ 7 ದಿನ.. ಖಾಸಗಿ ಆಸ್ಪತ್ರೆಯಲ್ಲಿ 3 ದಿನದಲ್ಲೇ ಸೋಂಕು ಗುಣ : ಏನಿದರ ಹಿಂದಿನ ಅಸಲಿಯತ್ತು?

Next Post

ಯತ್ನಾಳ ಹಾಗೂ ನಿರಾಣಿ ಒಳ ತಿಕ್ಕಾಟದ ನಡುವೆಯೇ ಘೋಷಣೆ ಆಯ್ತು ಪಂಚಮಸಾಲಿ ಮೂರನೇ ಪೀಠ ! ಏನಿದು ವಿವಾದ?

Related Posts

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 
Top Story

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

by Chetan
July 9, 2025
0

ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ನೀತಿ (Labour & farmer policy) ವಿರೋಧಿಸಿ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದ್ದು, ಇಂದು ದೇಶಾದ್ಯಂತ ಟ್ರೇಡ್...

Read moreDetails

ಗೋಲ್ಡನ್ ಸ್ಟಾರ್ ಗಣೇಶ್ ಅವರಿಂದ ಅನಾವರಣವಾಯಿತು “ನಿದ್ರಾದೇವಿ Next Door” ಚಿತ್ರದ “ನೀ ನನ್ನ” ಎಂಬ ರೊಮ್ಯಾಂಟಿಕ್ ಸಾಂಗ್.

July 8, 2025

Narendra Modi: ಭಾರತದಲ್ಲಿ ಪ್ರೆಸ್‌ ಸೆನ್ಸಾರ್‌ಶಿಪ್‌ ಖಾತೆಗಳನ್ನು ನಿಷೇಧಿಸಲು ಆದೇಶ ಹೊರಡಿಸಿಲ್ಲ: ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.

July 8, 2025

M.B Patil: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರಿನಲ್ಲಿ `ಕಲಾಲೋಕ’ ಮಳಿಗೆ ಉದ್ಘಾಟನೆ..!!

July 8, 2025

Minister Lakshmi Hebbalkar: ಇಲಾಖೆಯ ನೇಮಕಾತಿಯಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಆದ್ಯತೆ..

July 8, 2025
Next Post
ಯತ್ನಾಳ ಹಾಗೂ ನಿರಾಣಿ ಒಳ ತಿಕ್ಕಾಟದ ನಡುವೆಯೇ ಘೋಷಣೆ ಆಯ್ತು ಪಂಚಮಸಾಲಿ ಮೂರನೇ ಪೀಠ ! ಏನಿದು ವಿವಾದ?

ಯತ್ನಾಳ ಹಾಗೂ ನಿರಾಣಿ ಒಳ ತಿಕ್ಕಾಟದ ನಡುವೆಯೇ ಘೋಷಣೆ ಆಯ್ತು ಪಂಚಮಸಾಲಿ ಮೂರನೇ ಪೀಠ ! ಏನಿದು ವಿವಾದ?

Please login to join discussion

Recent News

Top Story

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

by ಪ್ರತಿಧ್ವನಿ
July 9, 2025
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 
Top Story

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

by Chetan
July 9, 2025
ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 
Top Story

ಇಂದು ದೇಶಾದ್ಯಂತ ಭಾರತ್ ಬಂದ್ ಗೆ ಕರೆ – ರಾಜ್ಯದಲ್ಲಿ ಹೇಗಿರಲಿದೆ ಬಂದ್ ಬಿಸಿ..? 

by Chetan
July 9, 2025
ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 
Top Story

ಸಿಎಂ ಚೇಂಜ್ ಕೂಗಿನಿಂದ ತೀವ್ರ ಬೇಸರಗೊಂಡ ಸಿದ್ದು..? ರಾಹುಲ್ ಗಾಂಧಿ ಮುಂದೆ ಬೇಸರ ಹೊರಹಾಕಲಿದ್ಯ ಟಗರು..?! 

by Chetan
July 9, 2025
ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 
Top Story

ಕಾಂಗ್ರೆಸ್ ನಲ್ಲಿ ಜೋರಾಯ್ತು ಸಿಎಂ ಬದಲಾವಣೆ ಕೂಗು – ದೆಹಲಿಯತ್ತ ಹೊರಟೇಬಿಟ್ಟ ಸಿಎಂ ಸಿದ್ದರಾಮಯ್ಯ 

by Chetan
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾಧ್ಯಮಗೋಷ್ಠಿ

July 9, 2025
ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

ಶ್ರೀರಾಮುಲುಗೆ ಜನಾರ್ದನ ರೆಡ್ಡಿ ಸಖತ್ ಕೌಂಟರ್ – ಬಳ್ಳಾರಿಯಲ್ಲಿ ಮತ್ತೆ ಶುರು ರೆಡ್ಡಿ ರಾಮುಲು ಕಾಳಗ ! 

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada