ಮದುವೆ ಸಮಾರಂಭವೊಂದರಲ್ಲಿ ವರ ತಾಳಿ ಕಟ್ಟುವ ವೇಳೆ ವಧು ಹಸೆಮಣೆಯಿಂದ ಎದ್ದು ಮದುವೆ ರದ್ದಾಗಿರುವ ಪ್ರಕರಣ ತುಮಕೂರು ಜಿಲ್ಲೆಯಲ್ಲಿ ನಡೆದಿದೆ ಎಂದು ಭಾನುವಾರ (ಆಗಸ್ಟ್ 27) ವರದಿಯಾಗಿದೆ.
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲ ಗ್ರಾಮದಲ್ಲಿ ಘಟನೆ ನಡೆದಿದೆ. ಮದುವೆ ಬೇಡ ಎಂದು ಮೇಲೆದ್ದ ವಧು ದಿವ್ಯಾ. ಬೇರೆ ಹುಡುಗನನ್ನ ಪ್ರೀತಿಸುತ್ತಿದ್ದೇನೆ ಹೀಗಾಗಿ ಮದುವೆ ಬೇಡ ಎಂದು ಕ್ಯಾನ್ಸಲ್ ಮಾಡಿದ ದಿವ್ಯಾ.
ಕೋಳಾಲ ಗ್ರಾಮದ ಕೆ.ಸಿ.ಎನ್. ಕನ್ವೆನ್ಷನ್ ಹಾಲ್ ನಲ್ಲಿ ನಡೆಯುತ್ತಿದ್ದ ಮದುವೆ. ರಾತ್ರಿ ರಿಸಪ್ಷನ್ ನಲ್ಲಿ ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದ ದಿವ್ಯಾ. ವೆಂಕಟೇಶ್ ಎಂಬುವವರ ಜೊತೆ ಮದುವೆ ನಡೆಯುತ್ತಿತ್ತು. ಬೆಳಗ್ಗೆ ಮುಹೂರ್ತಕ್ಕೆ ಬರುತ್ತಿದ್ದಂತೆ ಮದುವೆ ಬೇಡ ಎಂದ ಯುವತಿ ದಿವ್ಯಾ.
ದೊಡ್ಡಬಳ್ಳಾಪುರದ ತಾಲೂಕಿನ ಮೂಡ್ಲಕಾಳೇನಹಳ್ಳಿಯ ಸಿದ್ದಮ್ಮ ಮತ್ತು ಗೋವಿಂದರಾಜು ಪುತ್ರ ವೆಂಕಟೇಶ್. ನೆಲಮಂಗಲ ತಾಲೂಕಿನ ದೊಡ್ಡಬೆಲೆ ಗ್ರಾಮದ ಅಂಜನಮ್ಮ ನರಸಿಂಹಮೂರ್ತಿ ಪುತ್ರಿ ದಿವ್ಯಾ.
ಹುಡುಗಿ ಉಲ್ಟಾ ಹೊಡೆಯುತ್ತಿದ್ದಂತೆ ತುಮಕೂರು ಕಲ್ಯಾಣ ಮಂಟಪದಲ್ಲಿ ಗದ್ದಲ. ಎರಡು ಕಡೆಯವರಿಂದ ಮಾತಿನ ಚಕಮಕಿ ನಡೆದಿದೆ.