ದಸರಾ 2024ರ (Dasara 2024) ಹಿನ್ನೆಲೆ ಮೈಸೂರಲ್ಲಿ ಮಹಿಷ ಮಂಡಲೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಟೌನ್‌ಹಾಲಲ್ಲಿ (town hall) ದೊಡ್ಡ ಹೈಡ್ರಾಮಾ ನಡೆದಿದೆ. ಮಹಿಷಾ ದಸರಾ ಹಿನ್ನೆಲೆ ಚಾಮುಂಡಿ ಬೆಟ್ಟ (Chamundi hill) ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.
ಚಾಮುಂಡಿ ಬೆಟ್ಟಕ್ಕೆ 144 ಸೆಕ್ಷನ್ (144 section) ವಿಧಿಸಿ ಪೊಲೀಸರಿಂದ ಸರ್ಪಗಾವಲು ಹಾಕಲಾಗಿತ್ತು. ನಿಷೇದಾಜ್ಞೆ ಜಾರಿ ಮಾಡಿದ್ದ ಕಾರಣ ಮಹಿಷಾ ದಸರಾ ಆಚರಣ ಸಮಿತಿ ಪುಷ್ಪಾರ್ಚನೆಗೆ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿತ್ತು.
ಚಾಮುಂಡಿಬೆಟ್ಟಕ್ಕೆ ಬಿಡದಿದ್ದರೇ ಮಹಿಷ ದಸರಾಕ್ಕೆ ಬಂದಿದ್ದ ಎಲ್ಲರೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇವೆಂದು ಪಟ್ಟು ಹಿಡಿದಿದ್ದರು. ಇದರಿಂದ ಪೊಲೀಸ್ ಜೀಪಿನಲ್ಲೆ ಜ್ಞಾನಪ್ರಕಾಶ್ ಸ್ವಾಮೀಜಿ, ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಇತರೆ ಮೂವರನ್ನು ಪೋಲಿಸ್ ಜೀಪಿನಲ್ಲೇ ಕರೆದೊಯ್ದು ಪುಷ್ಪಾರ್ಚಾನೆ ಮಾಡಿಸಿದ್ದಾರೆ. ಮೈಸೂರು ಪೋಲಿಸರ ಈ ನಡೆ ವಿವಾದಕ್ಕೆ ಕಾರಣವಾಗಿದೆ.













