ನೆರೆಯ ನೇಪಾಳದಲ್ಲಿ ಭಾರಿ ಪ್ರವಾಹಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಈಗಾಗ್ಲೇ 115 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ನಾಪತ್ತೆಯಾದ 79 ಜನರಿಗಾಗಿ ಹುಡುಕಾಟ ನಡೆಯುತ್ತಿದೆ. ಕಠ್ಮಂಡು ಸೇರಿದಂತೆ ನೇಪಾಳದ ಹಲವೆಡೆ ಭಾರಿ ಮಳೆ, ಪ್ರವಾಹದಿಂದ ಸಾವಿರಾರು ಮಂದಿ ಮನೆ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಗಿದೆ.ಭೂಕುಸಿತದಿಂದ ನಾಪತ್ತೆಯಾದ ಜನರಿಗಾಗಿ ಹುಡುಕಾಟ ನಡೆಯುತ್ತಿದೆ. ರಾಜಧಾನಿ ಕಠ್ಮಂಡು ಸೇರಿದಂತೆ ನೇಪಾಳದ ಹಲವೆಡೆ ಭಾರಿ ಮಳೆ, ಪ್ರವಾಹದಿಂದ ಇಡೀ ಊರುಗಳು ಜಲಾವೃತಗೊಂಡಿವೆ. ಮನೆ ಕಳೆದುಕೊಂಡು ನಿರಾಶ್ರಿತರಾದ ಜನರನ್ನು ರಕ್ಷಣಾಪಡೆಗಳು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುತ್ತಿದ್ದಾರೆ.
ಸಿದ್ದರಾಮಯ್ಯ ಪತ್ನಿ ಬೆನ್ನಲ್ಲೇ ‘ಮಲ್ಲಿಕಾರ್ಜುನ ಖರ್ಗೆ’ಯಿಂದಲೂ ‘5 ಎಕರೆ ಸರ್ಕಾರಿ ಭೂಮಿ’ ವಾಪಸ್!
ಬೆಂಗಳೂರು:ಮುಡಾ ಹಗರಣದ ಕಾನೂನು ಸಂಕಷ್ಟ ಬಿಗಿಯಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ತಮಗೆ ಮುಡಾದಿಂದ ನೀಡಿದ್ದಂತ 14 ಸೈಟ್ ಗಳನ್ನು ವಾಪಾಸ್ ಮಾಡಿದ್ದರು.ಇದೇ ಹಾದಿಯನ್ನು ಎಐಸಿಸಿ ಅಧ್ಯಕ್ಷ...
Read more