ಬ್ಲಾಕ್ ಫಂಗಸ್ ಟ್ರೀಟ್ಮೆಂಟ್ಗೆ ಬಳಸುವ ಆಂಫೊಟೆರಿಸಿನ್ ಬಿ ಇಂಜೆಕ್ಷನ್ ಈಗ 1200 ರೂ ಲಭ್ಯ

ಕರೋನ ವೈರಸ್ ದೇಶಾದ್ಯಂತ ಬಾಧಿಸುತ್ತಿರುವ ಇಂತಹ ಸಮಯದಲ್ಲಿ ಬ್ಲಾಕ್ ಫಂಗಸ್ ಎಂಬ ಹೆಮ್ಮಾರಿಯನ್ನು ಸಹ ಎದುರಿಸಬೇಕಾಗಿದೆ. ಈ ಬ್ಲಾಕ್‌ ಫಂಗಸ್ ಟ್ರೀಟ್ಮೆಂಟ್ಗೆ ಅತ್ಯವಶ್ಯಕವಾಗಿ ಆಂಫೊಟೆರಿಸಿನ್ ಬಿ ಎಮಲ್ಷನ್ ಚುಚ್ಚುಮದ್ದಿನ ಅವಶ್ಯಕತೆ ಇದ್ದು ದೇಶಾದ್ಯಂತ ಈ ಔಷಧಿಯ ಕೊರತೆಯುಂಟಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹಾಗೆ ಈ ಔಷಧಿಯ ಬೆಲೆಯೂ ಕೂಡ ದುಬಾರಿ. ಈ ಎಲ್ಲಾ ಕೊರತೆಯನ್ನು ನಿಭಾಯಿಸಲು ಮಹಾರಾಷ್ಟ್ರ ಮೂಲದ ಔಷಧಿ ತಯಾರಕ ಸಂಸ್ಥೆಯೊಂದು ಮುಂದೆ ಬಂದಿದ್ದು ಅತೀ ಕಡಿಮೆ ಬೆಲೆಯಲ್ಲಿ ಈ ಚುಚ್ಚು ಮದ್ದು ಸಿಗಲಿದೆ.

ಮಹಾರಾಷ್ಟ್ರ ಮೂಲದ ಜೆನಿಟಿಕ್​ ಲೈಫ್​ ಸೈನ್ಸ್​ ಗುರುವಾರದಿಂದ ಆಂಫೊಟೆರಿಸಿನ್ ಬಿ ಎಮಲ್ಷನ್ ಚುಚ್ಚುಮದ್ದನ್ನ ತಯಾರಿಸುವ ಕಾರ್ಯ ಆರಂಭಿಸಿದೆ. ಇದು ಬ್ಲಾಕ್​ ಫಂಗಸ್​ ವಿರುದ್ಧದ ಚಿಕಿತ್ಸೆಯಲ್ಲಿ ಬಳಸುವ ಚುಚ್ಚುಮದ್ದಾಗಿದೆ.

ಕೋವಿಡ್​ ಸೋಂಕಿನ ಬಳಿಕ ಅನೇಕರಲ್ಲಿ ಕಾಣಿಸಿಕೊಳ್ತಿರುವ ಬ್ಲಾಕ್​ ಫಂಗಸ್​ ಟ್ರೀಟ್ಮೆಂಟ್ಗೆ ನೀಡುವ ಆಂಫೋಟೆರಿಸಿನ್​ ಬಿ ಚುಚ್ಚುಮದ್ದು ಎಲ್ಲೆಡೆ ಕೊರತೆ ಉಂಟಾಗಿದ್ದು,ಈಗ ಮಹಾರಾಷ್ಟ್ರ ಮೂಲದ ಜೆನಿಟಿಕ್​ ಲೈಫ್​ ಸೈನ್ಸ್ ಕಂಪನಿ ಕೊರತೆಯನ್ನು ನಿಭಾಯಿಸುವ ಹೊಣೆ ಹೊತ್ತಿದೆ. ಈ ಕುರಿತು ನಿತಿನ್ ಗಡ್ಕರಿ ಕಛೇರಿ ಟ್ವೀಟ್ ಮಾಡಿದೆ.

https://twitter.com/OfficeOfNG/status/1397788764148174850?s=19

ಇಂಜೆಕ್ಷನ್​​ಗೆ 1200 ರೂಪಾಯಿ ನಿಗದಿ ಮಾಡಲಾಗಿದ್ದು, ಸೋಮವಾರದಿಂದ ಚುಚ್ಚುಮದ್ದು ಲಸಿಕೆಯ ವಿತರಣೆ ಆರಂಭವಾಗಲಿದೆ ಎಂದೂ ನಿತಿನ್​ ಗಡ್ಕರಿ ಕಚೇರಿಯಿಂದ ಟ್ವೀಟ್​ ಮೂಲಕ ಮಾಹಿತಿ ನೀಡಿದೆ. ಇಲ್ಲಿಯವರೆಗೆ ಈ ಇಂಜೆಕ್ಷನ್​ 7 ಸಾವಿರ ರೂಪಾಯಿ ದರದಲ್ಲಿ ಮಾರಾಟವಾಗುತ್ತಿತ್ತು.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...