
ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ಹಗರಣ ಸೇರಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅನೇಕ ಹಗರಣಗಳ ಕುರಿತು ಆರೋಪ ಮಾಡಿರುವ ಬಿಜೆಪಿಯು ವಿಭಿನ್ನವಾಗಿ ಸರ್ಕಾರದ ಕಾಲೆಳೆದಿದೆ.
ಭ್ರಷ್ಟರ ಸಮರ್ಥನೆಗೆ ಮುಂದಾಗಿರುವ ಕಡುಭ್ರಷ್ಟರು!!#ResignSiddu #MudaScam pic.twitter.com/Yo9QTJsJAc
— BJP Karnataka (@BJP4Karnataka) October 7, 2024
ಈ ಬಗ್ಗೆ ವಿಡಿಯೋವೊಂದನ್ನು ಶೇರ್ ಮಾಡಿ, ಸಿಎಂ ಸಿದ್ದರಾಮಯ್ಯರನ್ನು ಹಾಗೂ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಸಚಿವ ಬೈರತಿ ಸುರೇಶ್, ಜಮೀರ್ ಅಹ್ಮದ್ ಖಾನ್ ಅವರನ್ನು ಭ್ರಷ್ಟರ ಸಮರ್ಥನೆಗೆ ಮುಂದಾಗಿರುವ ಕಡುಭ್ರಷ್ಟರು ಎಂದು ಪರೋಕ್ಷವಾಗಿ ಉಲ್ಲೇಖಿಸಿದೆ.
ಸರ್ಕಾರದಲ್ಲಿ ಹಗರಣ ಮಾಡು ಅಂದ ತಕ್ಷಣ ಹಗರಣ ಮಾಡಲಾಗುತ್ತದೆ. ಕಮಿಷ್ ದಂಧೆ, ಈ ಕಲೆಕ್ಷನ್ ಎಲ್ಲಾ ನಮ್ ಸಾಹೇಬ್ರುದ್ದೆ ಎಂದು ಜಮೀರ್ ಹೇಳುವಂತೆ ಬಿಜೆಪಿ ಬಿಂಬಿಸಿದೆ. ಮುಂದುವರಿದು ಆಡು ಮುಟ್ಟದ ಸೊಪ್ಪಿಲ್ಲ ನಮ್ ಸಾಹೇಬ್ರು ಮಾಡದ ಸ್ಕ್ಯಾಮ್ ಇಲ್ಲ.. ಹಾಸಿಗೆ-ತಿಂಬಲ್ಲೂ ಲೂಟಿ ಮಾಡಿ, ನಮ್ ಸಿಎಂ ತಿಂತಾರೆ ಬೋಟಿ ಎಂದು ಆರೋಪಿಸುವ ಮೂಲಕ ಬಿಜೆಪಿ ವ್ಯಂಗ್ಯವಾಡಿದೆ.




