• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಭದ್ರತಾ ವೈಫಲ್ಯ ಎಂದು ಮಹುವಾ ಉಚ್ಛಾಟನೆ.. ಈಗ ಯಾರ ತಲೆದಂಡ..?

Krishna Mani by Krishna Mani
December 14, 2023
in ದೇಶ
0
ಭದ್ರತಾ ವೈಫಲ್ಯ ಎಂದು ಮಹುವಾ ಉಚ್ಛಾಟನೆ.. ಈಗ ಯಾರ ತಲೆದಂಡ..?
Share on WhatsAppShare on FacebookShare on Telegram

ಮಹುವಾ ಮೊಯಿತ್ರಾ ಅವರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭಾ ಸದಸ್ಯ ಸ್ಥಾನದಿಂದ ಉಚ್ಛಾಟನೆ ಮಾಡಿತ್ತು. ಅದಕ್ಕೆ ಕಾರಣ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಹಣ ಹಾಗು ಗಿಫ್ಟ್‌ ಪಡೆದಿದ್ದಾರೆ ಎನ್ನುವುದು. ಜೊತೆಗೆ ಮಹುವಾ ಮೊಯಿತ್ರಾ ಅವರ ಲಾಗಿನ್‌ ಐಡಿ ದುಬೈ, ಲಂಡನ್‌ ಸೇರಿದಂತೆ ದೇಶ ಬಿಟ್ಟು ಬೇರೆ ಕಡೆಯಲ್ಲೂ ಬಳಕೆ ಆಗಿದೆ. ಇದು ದೇಶದ ಭದ್ರತೆಗೆ ಧಕ್ಕೆ ಆಗಿದೆ ಎನ್ನುವ ಆರೋಪವನ್ನೂ ನೀತಿ ಸಮಿತಿ ಮಾಡಿತ್ತು. ಇದಿಗ ಮಹುವಾ ಮೊಯಿತ್ರಾ ಅವರು ಕೇಂದ್ರ ಸರ್ಕಾರದ ತೆಗೆದುಕೊಂಡು ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಲೋಕಸಭೆ ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರ ಸರಿಯೋ ತಪ್ಪೋ ಎನ್ನುವುದನ್ನು ಕೋರ್ಟ್‌ ನಿರ್ಧಾರ ಮಾಡಲಿದೆ. ಆದರೆ ಇದೀಗ ಆಗಿರುವ ಭದ್ರತಾ ಲೋಪವನ್ನು ಸರಿ ಮಾಡುವುದು ಯಾರು..?

ADVERTISEMENT

ಲೋಕಸಭಾ ಅಧಿವೇಶನದ ವೇಳೆ ಅವಾಂತರ ಸೃಷ್ಟಿ..!

ಲೋಕಸಭಾ ಅಧಿವೇಶನದ ವೇಳೆ ಮೈಸೂರಿನ ಯುವಕ ಮನೋರಂಜನ್‌ ಸೇರಿದಂತೆ ನಾಲ್ವರು ಅವಾಂತರ ಸೃಷ್ಟಿ ಮಾಡಿರುವುದು ಭದ್ರತಾ ವೈಫಲ್ಯವೇ ಆಗಿದೆ. ಇದನ್ನು ಬಿಜೆಪಿ ನಾಯಕರೂ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಸಂಸತ್‌ ಕಲಾಪ ನಡೆಯುವಾಗಲೇ ಓರ್ವ ಯುವಕ ಸಂಸತ್‌ ಭವನದ ವೀಕ್ಷಕರ ಗ್ಯಾಲರಿಯಿಂದ ನೆಗೆದು ಸಂಸದರು ಕುಳಿತುಕೊಳ್ಳುವ ಸೀಟ್‌, ಟೇಬಲ್‌ ಮೇಲೆ ಹತ್ತಿ ಓಡಾಡಿದ್ದಾನೆ. ಜನಪ್ರತಿನಿಗಳು ಅಥವಾ ಅಧಿಕಾರಿ ವರ್ಗವನ್ನು ಬಿಟ್ಟು ಉಳಿದವರಿಗೆ ಪ್ರವೇಶ ಇಲ್ಲದೆ ಇರುವ ಪ್ರದೇಶಕ್ಕೆ ಹೋಗಿ ಬಣ್ಣದ ಬಾಂಬ್‌ ಸಿಡಿಸಿ ವಿಶ್ವದ ಎದುರು ಭಾರತದ ಭದ್ರತೆ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಅನಾವರಣ ಮಾಡಿದ್ದಾನೆ. ಕೆಲವರನ್ನು ಬಂಧಿಸದಲಾಗಿದೆ. ಆದರೆ ಭದ್ರತಾ ವೈಫಲ್ಯಕ್ಕೆ ಯಾರನ್ನು ಕಾರಣ ಮಾಡಲಾಗುತ್ತದೆ..? ಯಾರ ಸದಸ್ಯತ್ವವನ್ನು ಉಚ್ಛಾಟನೆ ಮಾಡಲಾಗುತ್ತದೆ ಎನ್ನುವ ಪ್ರಶ್ನೆ ಎದುರಾಗಿದೆ.

ತುಟಿ ಬಿಚ್ಚಿಲ್ಲ ಪ್ರಧಾನಿ ಮೋದಿ, ಅಮಿತ್‌ ಷಾ..?

ಸಂಸತ್‌ ಭವನ ಅಂದ್ರೆ ಕೇವಲ ಸಂಸದರು ಕುಳಿತುಕೊಳ್ಳುವ ಕಟ್ಟಡ ಮಾತ್ರವಲ್ಲ. ನಮ್ಮ ದೇಶದ ಪ್ರಜಾಪ್ರಭುತ್ವದ ಸಂಕೇತ. ನಮ್ಮ ದೇಶದಲ್ಲಿ ಯಾವುದೇ ಕಾನೂನು ಜಾರಿಯಾಗಬೇಕು ಅಂದರೂ ಅದು ಸಂಸತ್‌ನಲ್ಲೇ ಆಗಬೇಕು. ಸಂಸತ್‌ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಸಂಸತ್‌‌ ಅಧಿವೇಶನ ನಡೆಯುವಾಗಲೇ ನಡೆದಿರುವ ಭದ್ರತಾ ವೈಫಲ್ಯದ ಬಗ್ಗೆ ನಮ್ಮ ದೇಶದ ಪ್ರಧಾನಿ ಒಂದೇ ಒಂದು ಮಾತನ್ನೂ ಆಡಿಲ್ಲ. ಪರ ವಿರೋಧ ವಿಚಾರವಲ್ಲ, ಕನಿಷ್ಟ ಘಟನೆಯನ್ನು ಖಂಡಿಸುವ ಕೆಲಸವನ್ನೂ ಮಾಡಿಲ್ಲ. ತನಿಖೆಗೆ ಆದೇಶ ಮಾಡುವ ಮೂಲಕ ನಾವು ದೇಶದ ರಕ್ಷಣೆಗೆ ಬದ್ಧ ಎನ್ನುವ ಧೈರ್ಯವನ್ನೂ ತುಂಬುವ ಕೆಲಸ ಮಾಡಲಿಲ್ಲ. ದೇಶದ ಗೃಹ ಸಚಿವರೂ ಆಗಿರುವ ಅಮಿತ್‌ ಷಾ, ಈ ಬಗ್ಗೆ ಅಧಿಕೃತವಾಗಿ ಮಾತನಾಡಿ, ದೇಶದ ಭದ್ರತೆ ಬಗ್ಗೆ ಸಂಸದರಿಗೆ ಮಾಹಿತಿ ನೀಡಬೇಕಿತ್ತು. ಆದರೆ ಮೌನಕ್ಕೆ ಶರಣಾಗುವ ಮೂಲಕ ವಿಷಯಾಂತರ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದಾಗಿದೆ.

ಕಾಂಗ್ರೆಸ್‌ ಆರೋಪ ನೂರಕ್ಕೆ ಸತ್ಯ ಎನಿಸುತ್ತದೆ.. ಅಲ್ಲವೇ..?

ಭಾರತದ ದೇಶದ ಒಳಕ್ಕೆ 300 ಕೆಜಿ RDX ಯಾವುದೇ ಅಡೆತಡೆ ಇಲ್ಲದೆ ಕಾಶ್ಮೀರದೊಳಗೆ ಬರುತ್ತದೆ. ಸ್ಪೋಟಕ ವಸ್ತು ಯಾವುದೇ ಅಡೆತಡೆ ಇಲ್ಲದೆ ಸಂಸತ್ತಿನೊಳಗೆ ಬರುತ್ತದೆ. ಸಂಸತ್ತನ್ನೇ ಕಾಯಲಾಗದ ಚೌಕಿದಾರನಿಗೆ ದೇಶ ಕಾಯಲು ಸಾಧ್ಯವೇ? ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ. ಈ ಮಟ್ಟಿಗೆ ಭದ್ರತಾ ಲೋಪವಾಗಿದ್ದು ಹೇಗೆ..? ಮತ್ತು ಯಾಕೆ..? ಎನ್ನವ ಜೊತೆಗೆ ಈ ಸಂಸತ್ ದಾಳಿಯ ಹಿಂದೆ ಪ್ರತಾಪ್ ಸಿಂಹರದ್ದು ಪ್ರಮುಖ ಪಾತ್ರವಿದೆ ಎಂದು ಆರೋಪ ಮಾಡಿದೆ. ಆದರೆ ಕಾಂಗ್ರೆಸ್‌ ಹೇಳಿದೆ ಎನ್ನುವ ಮಾತ್ರಕ್ಕೆ ಯಾರೂ ಒಪ್ಪಬೇಕಿಲ್ಲ. ಆದರೆ ಈ ರೀತಿಯ ಘಟನೆಗಳು ನಡೆದಾಗ ದೇಶದ ಜನರ ಜೊತೆಗೆ ನಾವಿದ್ದೇವೆ ಎಂದು ಹೇಳುವ ನಾಯಕತ್ವ ಈ ದೇಶಕ್ಕೆ ಸಿಗಲಿಲ್ಲ ಅನ್ನೋದು ಬೇಸರದ ಸಂಗತಿ. ಮಣಿಪುರದಲ್ಲಿ ಯುವತಿಯರನ್ನು ಅತ್ಯಾಚಾರ ಮಾಡಿ ಬೆತ್ತಲೆ ಮೆರವಣಿಗೆ ಮಾಡಿದಾಗಲೂ ಇದೇ ಮೌನ, ಈಗ ಸಂಸತ್‌ ಭವನದ ಒಳಗೇ ಭದ್ರತಾ ಲೋಪವಾದರು ಅದೇ ಮೌನ..? ಎಷ್ಟು ಸರಿ..?

ಕೃಷ್ಣಮಣಿ

Tags: BJPCongress PartyLok Sabhamahuvaprathap simhaನರೇಂದ್ರ ಮೋದಿಬಿಜೆಪಿಲೋಕಸಭೆ
Previous Post

Parliament: ಯಾರಿಗೆ ಕೊಡಬಹುದು ಲೋಕಸಭಾ ವೀಕ್ಷಕರ ಪಾಸ್‌..? – ವೀಕ್ಷಕರ ಪಾಸ್‌ಗೆ ಯಾರು ಜವಾಬ್ದಾರರು..?

Next Post

ಸಾಮಾಜಿಕ ಪ್ರಗತಿಯ ಹಾದಿಗಳೂ ಯುವ ಸಮೂಹದ ಆಶಯವೂ : ನಾ ದಿವಾಕರ ಅವರ ಬರಹ

Related Posts

Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
0

ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 080 ಲಾಂಜ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತಿಥ್ಯ ಕ್ಷೇತ್ರದಲ್ಲಿ ಒಟ್ಟು ಹತ್ತು ಜಾಗತಿಕ ಪ್ರಶಸ್ತಿ ದೊರೆತಿವೆ. ಸ್ಪೇನ್‌ನ...

Read moreDetails

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

July 3, 2025

Neeraj Chopra: ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೇಟಿ ಮಾಡಿದ ನೀರಜ್‌ ಚೋಪ್ರ..!!

July 3, 2025
ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 

ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !! 

July 3, 2025

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025
Next Post
ಸಾಮಾಜಿಕ ಪ್ರಗತಿಯ ಹಾದಿಗಳೂ ಯುವ ಸಮೂಹದ ಆಶಯವೂ : ನಾ ದಿವಾಕರ ಅವರ ಬರಹ

ಸಾಮಾಜಿಕ ಪ್ರಗತಿಯ ಹಾದಿಗಳೂ ಯುವ ಸಮೂಹದ ಆಶಯವೂ : ನಾ ದಿವಾಕರ ಅವರ ಬರಹ

Please login to join discussion

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
Top Story

Capital City: ಈ ವಾರ ತೆರೆಗೆ ಆರ್ ಅನಂತರಾಜು ನಿರ್ದೇಶನದ ಹಾಗೂ ರಾಜೀವ್ ರೆಡ್ಡಿ ಅಭಿನಯದ “ಕ್ಯಾಪಿಟಲ್ ಸಿಟಿ” . .

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada